ಕೋಲಾರ:
ಕೆ.ಜಿ.ಎಫ್ ಪೊಲೀಸರು ಭರ್ಜರಿ ಕಾರ್ಯಾಚರಣೆ ನಡೆಸಿ ಮತದಾರರಿಗೆ ಹಂಚಲು ಸಂಗ್ರಹಿಸಿದ್ದ ೪ ಕೋಟಿ ೫ ಲಕ್ಷ ರೂಪಾಯಿ ಹಣವನ್ನ ವಶಕ್ಕೆ ಪಡೆದಿದ್ದಾರೆ.
ಕೋಲಾರ ಜಿಲ್ಲೆಯ ಬಂಗಾರಪೇಟೆ ತಾಲ್ಲೂಕಿನ ಹಂಚಾಳ ಬಳಿ ಇರುವ ಜಿಯೋನ್ ಹಿಲ್ಸ್ ಗಾಲ್ಫ್ ರೆಸಾರ್ಟ್‌ನ ವಿಲ್ಲಾ ದಲ್ಲಿರಿಸಿದ್ದ ಕಂತೆ ಕಂತೆ ಹಣವನ್ನ ಪೊಲೀಸರು ವಶಕ್ಕೆ ಪಡೆದಿದ್ದಾರೆ. ರಿಯಲ್ ಎಸ್ಟೇಟ್ ಉದ್ಯಮಿ ರಮೇಶ್ ಅನ್ನೋರಿಗೆ ಸೇರಿದ ವಿಲ್ಲಾ ಇದಾಗಿದ್ದು, ಖಚಿತ ಮಾಹಿತಿ ಮೇರೆಗೆ ದಾಳಿ ಮಾಡಿದ ಕೆಜಿಎಫ್ ಎಸ್ಪಿ ಧರಣಿದೇವಿ ನೇತೃತ್ವದ ದಾಳಿ ಮಾಡಿದ್ದಾರೆ.
ಜಿಯೋನ್ ಹಿಲ್ಸ್ ಗಾಲ್ಫ್ ರೆಸಾರ್ಟ್ ೨೭೯ ನಂಬರ್ ವಿಲ್ಲಾದಲ್ಲಿ ಪತ್ತೆಯಾದ ಹಣ ಮತದಾರರಿಗೆ ಹಂಚಲು ಸಂಗ್ರಹಿಸಿದ್ದು ಎನ್ನಲಾಗಿದೆ, ಬಂಗಾರಪೇಟೆ ಪಂಚಾಯತಿ ವಾರ ಹೆಸರು ಬರೆದು ಬಂಡಲ್ ಮಾಡಿಟ್ಟಿದ್ದ ಹಣ ಇದಾಗಿದ್ದು, ಕೆಜಿಎಫ್ ಎಸ್ಪಿ ಧರಣಿದೇವಿ ಖಾಸಗಿ ಕಾರ್‌ನಲ್ಲಿ ಬಂದು ದಾಳಿ ಮಾಡಿದ್ದಾರೆ.
ದಾಳಿ ವಿಚಾರ ತಿಳಿಯುತ್ತಿದ್ದಂತೆ ಕಾರ್ ಬಿಟ್ಟು ಪರಾರಿಯಾಗಿರುವ ಮಾಲೀಕ ರಮೇಶ್ ಮೊದಲಿಗೆ ವಿಲ್ಲಾದಲ್ಲಿದ್ದ ೨ ಕೋಟಿ ೫೪ ಲಕ್ಷ ಹಾಗೂ ಕಾರ್‌ನ ಬೀಗ ಒಡೆದ ವೇಳೆ ಕಾರ್ ನಲ್ಲಿ ಮೂರು ಗೋಣಿ ಚೀಲದಲ್ಲಿದ್ದ ಒಂದುವರೆ ಕೋಟಿ ಹಣ ಪತ್ತೆಯಾಗಿದೆ. ಇನ್ನೂ ಸ್ಥಳದಲ್ಲಿ ಚುನಾವಣಾ ವೀಕ್ಷಕರ ತಂಡ ಮೊಕ್ಕಾಂ ಹೂಡಿದ್ದು, ಹಣವನ್ನು ಮೆಷನ್ ಮೂಲಕ ಲೆಕ್ಕ ಹಾಕಿದ್ದು, ಸ್ಥಳದಲ್ಲಿ ಚುನಾವಣಾ ಲೆಕ್ಕ ವೀಕ್ಷಕರು, ತಾಲ್ಲೂಕು ಚುನಾವಣಾಧಿಕಾರಿಗಳು, ಐಟಿ ಅಧಿಕಾರಿಗಳ ಸಮ್ಮುಖದಲ್ಲಿ ಹಣವನ್ನ ವಶಕ್ಕೆ ಪಡೆಯಲಾಗಿದೆ.