Home ಕೋಲಾರ Kolar| ಕುಡಿದ ಮತ್ತಿನಲ್ಲಿ ರೈಲ್ವೆ ಫ್ಲಾಟ್‌ಫಾರ್ಮ್‌ ಮೇಲೆ ಕಾರು ನುಗ್ಗಿಸಿದ ಭೂಪ

Kolar| ಕುಡಿದ ಮತ್ತಿನಲ್ಲಿ ರೈಲ್ವೆ ಫ್ಲಾಟ್‌ಫಾರ್ಮ್‌ ಮೇಲೆ ಕಾರು ನುಗ್ಗಿಸಿದ ಭೂಪ

7
0
Kolar | Drunk man rams car onto railway platform

ಕೋಲಾರ: ಕಂಠಪೂರ್ತಿ ಕುಡಿದ ವ್ಯಕ್ತಿಯೊಬ್ಬ ಕಾರನ್ನು ರೈಲ್ವೆ ನಿಲ್ದಾಣದೊಳಗೆ ನುಗ್ಗಿಸಿರುವಂತಹ ಘಟನೆ ಕೋಲಾರದಲ್ಲಿ ನಡೆದಿದೆ. ಕೋಲಾರ ಜಿಲ್ಲೆಯ ಟೇಕಲ್ ರೈಲ್ವೆ ನಿಲ್ದಾಣದಲ್ಲಿ ತಡರಾತ್ರಿ ಈ ಘಟನೆ ನಡೆದಿದೆ.

ರಾಕೇಶ್‌ ಎಂಬಾತ ಕುಡಿದ ಮತ್ತಿನಲ್ಲಿ ಕಾರು ಚಲಾಯಿಸಿ ನಿಯಂತ್ರಣ ಸಿಗದೇ ರೈಲ್ವೆ ನಿಲ್ದಾಣದೊಳಗೆ ನುಗ್ಗಿಸಿದ್ದಾನೆ. ಕಾರು ರೈಲ್ವೆ ಪ್ಲಾಟ್‌ಫಾರ್ಮ್‌ ಮೇಲಿಂದ ಬಂದು ಹಳಿಯ ಮೇಲೆ ಬಿದ್ದಿದೆ. ಇದರಿಂದಾಗಿ ಕಾರು ಹಾಗೂ ರೈಲ್ವೆ ಹಳಿಗೂ ಡ್ಯಾಮೇಜ್‌ ಆಗಿದೆ. ಅದೃಷ್ಟವಶಾತ್‌ ಕಾರು ಚಾಲಕ ಪ್ರಾಣಾಪಾಯದಿಂದ ಪಾರಾಗಿದ್ದಾನೆ. ಘಟನೆಯ ಬಳಿ ರೈಲ್ವೆ ಪೊಲೀಸರು ಕಾರನ್ನು ಜೆಸಿಬಿ ಸಹಾಯದಿಂದ ತೆರವುಗೊಳಿಸಿದ್ದಾರೆ.

 

LEAVE A REPLY

Please enter your comment!
Please enter your name here