Home Uncategorized Koppala: ಡಿಜೆ ಸದ್ದಿನ ಅಬ್ಬರಕ್ಕೆ ಹೃದಯಾಘಾತದಿಂದ ಯುವಕ ಸಾವು..!

Koppala: ಡಿಜೆ ಸದ್ದಿನ ಅಬ್ಬರಕ್ಕೆ ಹೃದಯಾಘಾತದಿಂದ ಯುವಕ ಸಾವು..!

40
0

ಗಂಗಾವತಿ : ನಗರದ ಕೊಪ್ಪಳ ರಸ್ತೆಯ ಪ್ರಶಾಂತ ನಗರದಲ್ಲಿ ಗಣೇಶ ವಿಗ್ರಹ ವಿಸರ್ಜನೆ ಆಚರಣೆ ವೇಳೆ ಡ್ಯಾನ್ಸ್ ಮಾಡುತ್ತಲೇ ಯುವಕ ಸುದೀಪ್ ಸಜ್ಜನ್ (23) ಕುಸಿದು ಬಿದ್ದು ಸ್ಥಳದಲ್ಲೇ ಮೃತಪಟ್ಟ ಘಟನೆ ಜರುಗಿದೆ. ಕೊಪ್ಪಳ ಜಿಲ್ಲೆಯ ಗಂಗಾವತಿಯಲ್ಲಿ ಕಳೆದ ವಾರ ಗಣೇಶ್ ವಿಸರ್ಜನೆ ಸಮಯದಲ್ಲಿ ನಡೆದ ಹಲವು ಪ್ರಕರಣಗಳಿಗೆ ಸಾಕ್ಷಿಯಾಗಿ ಮೂವರು ಪೋಲಿಸ್ ಅಧಿಕಾರಿಗಳು ಅಮಾನತು ಕೂಡ ಆಗಿದ್ದರು.

ಅದು ಮಾಸುವ ಮುನ್ನವೇ ನಗರದ ಪ್ರಶಾಂತ ನಗರದ ಯುವಕ ಮಂಡಳಿ ಗಣೇಶನ ವಿಸರ್ಜನೆ ಸಂಭ್ರಮ ಆಚರಿಸಲು ಮಹಾರಾಷ್ಟ್ರದ ಪುಣೆಯಿಂದ ಕರೆಸಿದ್ದ ಅಂಬಿಕಾ ಜಾಗರು ಡಿಜೆ ಸೌಂಡ್ ಸಿಸ್ಟಮ್ ರವರ ಹೆಚ್ಚಿನ ಸದ್ದಿಗೆ ಪ್ರಶಾಂತ ನಗರದ ಯುವಕ ಸುದೀಪ್ ಸಜ್ಜನ್ (23) ತಂದೆ ರುದ್ರಪ್ಪ ಸಜ್ಜನ್ ಇಂದು ಮಧ್ಯರಾತ್ರಿ 2 ಗಂಟೆ ಸುಮಾರಿಗೆ ನಡೆಯುತ್ತಿದ್ದ ಮೆರವಣಿಗೆಯಲ್ಲಿ ಕುಣಿಯುತ್ತಿದ್ದ ಸಂದರ್ಭದಲ್ಲಿ ಹೃದಯಾಘಾತದಿಂದ ಸ್ಥಳದಲ್ಲೇ ಸಾವನಾಪ್ಪಿದ್ದಾನೆ ಎಂದು ತಿಳಿದುಬಂದಿದೆ.

MP Renukacharya: ಮೋಸ ಮಾಡಿದ ವಚನಭ್ರಷ್ಟರೊಂದಿಗೆ ಮೈತ್ರಿ ಎಷ್ಟು ಸರಿ?: ರೇಣುಕಾಚಾರ್ಯ

 ನಗರದಲ್ಲಿ ನಿನ್ನೆ ಗಣೇಶ ಮೂರ್ತಿ ಕೂರಿಸಿದ್ದ ಐದು ವಿವಿಧ ಮಂಡಳಿ 21 ದಿನದ ಗಣೇಶ ವಿಸರ್ಜನೆ ಕಾರ್ಯಕ್ರಮ ಹಮ್ಮಿಕೊಂಡಿದ್ದರು. ಈ ಘಟನೆ ನಂತರ ಪ್ರಶಾಂತ ನಗರ ಮತ್ತು ಲಿಂಗರಾಜ್ ಕ್ಯಾಂಪ್ ನ ಯುವಕರು ಆಯೋಜಿಸಿದ್ದ ಗಣೇಶ ಮೆರವಣಿಗೆ ಸ್ವಯಂ ಪ್ರೇರಿತರಾಗಿ ಅರ್ಧಕ್ಕೆ ನಿಲ್ಲಿಸಿದ್ದಾರೆ.

ನಗರದಲ್ಲಿ ಯಾವುದೇ ರೀತಿಯಲ್ಲಿ ಅಹಿತಕರ ಘಟನೆ ನಡೆಯಬಾರದೇಂದು ಸ್ವತಃ ಕೊಪ್ಪಳ ಜಿಲ್ಲಾ ಪೋಲಿಸ್ ವರಿಷ್ಠಾಧಿಕಾರಿ ಯಶೋಧ ವಂಟಗೋಡಿ ಸೇರಿ ನೂರಾರು ಪೋಲಿಸ್ ಸಿಬ್ಬಂದಿ ಸ್ಥಳದಲ್ಲಿ ಮೊಕ್ಕಂ ಹೂಡಿದ್ದರು. ಘಟನೆ ಸಮಯದಲ್ಲಿ ಸ್ಥಳದಲ್ಲೇ ಇದ್ದ ಎಸ್ಪಿರವರು ಯುವಕನ ಮೃತ ದೇಹವನ್ನು ನಗರದ ಉಪವಿಭಾಗ ಆಸ್ಪತ್ರೆಗೆ ರವಾನಿಸಿ ನಗರ ಪೋಲಿಸ್ ಠಾಣೆ ಪ್ರಕರಣ ದಾಖಲಿಸಿ ತನಿಖೆ ನಡೆಸಲು ಸೂಚನೆ ನೀಡಿದ್ದಾರೆ

The post Koppala: ಡಿಜೆ ಸದ್ದಿನ ಅಬ್ಬರಕ್ಕೆ ಹೃದಯಾಘಾತದಿಂದ ಯುವಕ ಸಾವು..! appeared first on Ain Live News.

LEAVE A REPLY

Please enter your comment!
Please enter your name here