ಬೆಂಗಳೂರು: ಕೋರಮಂಗಲದಲ್ಲಿ ನಡೆದ ಕಾಲ್ ಸೆಂಟರ್ ಅಪಹರಣ ಪ್ರಕರಣಗೆ ಸಂಬಂಧಿಸಿ ಪೊಲೀಸರಿಗೆ ಸೆಡ್ಡು ಹೊಡೆದಿದ್ದ ಎಂಟು ಮಂದಿ ಆರೋಪಿಗಳನ್ನು, ಇದರಲ್ಲಿ ಒಬ್ಬ ಕಾನ್ಸ್ಟೇಬಲ್ ಸಹ ಸೇರಿ, ಪೊಲೀಸರು ಬಂಧಿಸಿದ್ದಾರೆ ಎಂದು ಬೆಂಗಳೂರು ಆಗ್ನೇಯ ವಿಭಾಗದ ಡಿಸಿಪಿ ಸಾರಾ ಫಾತೀಮಾ ತಿಳಿಸಿದ್ದಾರೆ.
ಬಂಧಿತರಲ್ಲಿ ಚಲಪತಿ, ಭರತ್, ಪವನ್, ಪ್ರಸನ್ನ, ಅತೀಕ್, ಜಬೀವುಲ್ಲಾ ಸೇರಿದಂತೆ ಎಂಟು ಮಂದಿ ಇದ್ದು, ಇವರ ಪೈಕಿ ಚಲಪತಿ ಕೋಲಾರ ಜಿಲ್ಲೆಯ ಹೆಡ್ ಕಾನ್ಸ್ಟೇಬಲ್ ಎಂದು ತನಿಖೆಯಲ್ಲಿ ಬಹಿರಂಗವಾಗಿದೆ.
ನವೆಂಬರ್ 22, ಶನಿವಾರ ಬೆಳಗ್ಗೆ 1 ಗಂಟೆ ಸುಮಾರಿಗೆ, ಕೋರಮಂಗಲದ Global Connect Telecom Pvt Ltd ಕಾಲ್ ಸೆಂಟರ್ಗೆ ಆರೋಪಿಗಳು ನುಗ್ಗಿ, “ನಾವು ಪೊಲೀಸರು” ಎಂದು ಬೆದರಿಕೆ ಹಾಕಿ, ಸಿಬ್ಬಂದಿ ಪವನ್, ರಾಜ್ವೀರ್, ಆಕಾಶ್, ಅನಸ್ ಎಂಬ ನಾಲ್ವರನ್ನು ಅಪಹರಿಸಿದ್ದರು.


ಅಪಹರಣದ ಬಳಿಕ ಗ್ಯಾಂಗ್ ₹25 ಲಕ್ಷ ಬೇಡಿಕೆ ಇಟ್ಟಿದ್ದು, ಕಂಪನಿಯ Operational Manager ಖಾತೆಯಿಂದ ₹18 ಲಕ್ಷ ಹಣ ಟ್ರಾನ್ಸ್ಫರ್ ಮಾಡಿಸಿಕೊಂಡಿದ್ದರು.
ಘಟನೆಯ ಬಳಿಕ ಕಾಲ್ ಸೆಂಟರ್ ಸಿಬ್ಬಂದಿ ಶನಿವಾರ ಬೆಳಗ್ಗೆ 4 ಗಂಟೆಯ ಸುಮಾರಿಗೆ ಕೋರಮಂಗಲ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.
ತಕ್ಷಣ ಕ್ರಮಕೈಗೊಂಡ ಪೊಲೀಸರು, ಶನಿವಾರ ಬೆಳಗ್ಗೆ 11 ಗಂಟೆಗೆ ಹೊಸಕೋಟೆಯ ಲಾಡ್ಜ್ ನಲ್ಲಿ ಆರೋಪಿಗಳು ಅಡಗಿಕೊಂಡಿದ್ದನ್ನು ಪತ್ತೆ ಮಾಡಿ, ಅಪಹರಣಕ್ಕೊಳಗಾದ ನಾಲ್ವರನ್ನು ಸುರಕ್ಷಿತವಾಗಿ ರಕ್ಷಿಸಿದ್ದಾರೆ.
ಈ ವೇಳೆ ಎರಡು ಕಾರುಗಳನ್ನು ಕೂಡ ಪೊಲೀಸರು ಜಪ್ತಿ ಮಾಡಿದ್ದಾರೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಎಂಟು ಆರೋಪಿಗಳನ್ನೂ ಬಂಧಿಸಲಾಗಿದೆ.
ಯಾಕೆ ಅಪಹರಣ? ಆರೋಪಿಗಳ ಬಾಯ್ಬಿಟ್ಟ ಪ್ಲಾನ್
ಪೊಲೀಸ್ ವಿಚಾರಣೆಯಲ್ಲಿ ಆರೋಪಿಗಳು ಹೇಳಿದ್ದು:
- ಗ್ಯಾಂಗ್ನ ಮುಖ್ಯ ಆರೋಪಿ ಪವನ್ ರಿಯಲ್ ಎಸ್ಟೇಟ್ ವ್ಯವಹಾರದಲ್ಲಿ ಭಾರೀ ಲಾಸ್ಗೆ ಒಳಗಾಗಿದ್ದ
- ಸಾಲ ತೀರಿಸಲು ಕಿಡ್ನಾಪ್ ಪ್ಲಾನ್ ಹಾಕಿಕೊಂಡಿದ್ದರು
- ಇತ್ತೀಚೆಗೆ ನಡೆದ ನಕಲಿ ಕಾಲ್ ಸೆಂಟರ್ ದಾಳಿ ಪ್ರಕರಣವನ್ನು ಗಮನಿಸಿ, ಅದನ್ನೇ ಮಾಸ್ಕಿಂಗ್ ಟೆಕ್ನಿಕ್ಾಗಿ ಬಳಸಿದ್ದರು
- ಕೋರಮಂಗಲ ಕಾಲ್ ಸೆಂಟರ್ ಮೇಲೆ ನಕಲಿ ಪೊಲೀಸ್ ದಾಳಿ ಮಾಡಿದಂತೆ ನಾಟಕ ಮಾಡಿ, ನಾಲ್ವರನ್ನು ಅಪಹರಿಸಿದ್ದರು
ಒಬ್ಬ ಪೊಲೀಸ್ ಕಾನ್ಸ್ಟೇಬಲ್ ಕೂಡ ಗ್ಯಾಂಗ್ನಲ್ಲಿ
ಆರೋಪಿಗಳಲ್ಲಿರುವ ಚಲಪತಿ ಕೋಲಾರ ಜಿಲ್ಲೆಯ ಹೆಡ್ ಕಾನ್ಸ್ಟೇಬಲ್ ಆಗಿದ್ದುದು ಪತ್ತೆಯಾಗಿದ್ದು, ಇಲಾಖೆ ಈಗಾಗಲೇ ಅವರನ್ನು ಅಮಾನತುಗೊಳಿಸಿದೆ.
ವಿಖ್ಯಾತವಾದ ಆಗ್ನೇಯ ವಿಭಾಗದ ಪೊಲೀಸರ ಕಾರ್ಯಾಚರಣೆ
ಡಿಸಿಪಿ ಸಾರಾ ಫಾತೀಮಾ ಮಾತನಾಡಿ:
“ತ್ವರಿತ ಕ್ರಮ ಕೈಗೊಂಡ ಪರಿಣಾಮ ಎಲ್ಲರೂ ಸುರಕ್ಷಿತ. ಎಂಟು ಮಂದಿಯನ್ನು ಬಂಧಿಸಿದ್ದು, ಇನ್ನಷ್ಟು ಅಂಶಗಳ ತನಿಖೆ ನಡೆಯುತ್ತಿದೆ.”
