
KPCC president DK Shivakumar offers Lok Sabha ticket to Shivraj, I don't know politics, responded Shivanna
ಬೆಂಗಳೂರು:
ಲೋಕಸಭಾ ಚುನಾವಣೆಗೆ ಸ್ಪರ್ಧಿಸುವಂತೆ ನಟ ಶಿವರಾಜ್ ಕುಮಾರ್ ಗೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಆಹ್ವಾನ ನೀಡಿದ್ದರಂತೆ ರಾಜಕೀಯ ನನಗೆ ಗೊತ್ತಿಲ್ಲ. ಸಿನಿಮಾದಲ್ಲೇ ಮುಂದುವರೆಯುವೆ ಎಂದು ಶಿವಣ್ಣ ಹೇಳಿದ್ದಾರೆ.
ಬೆಂಗಳೂರಿನಲ್ಲಿ ನಡೆದ ಈಡಿಗ ಸಮಾವೇಶದಲ್ಲಿ ಮಾತನಾಡಿರುವ ಶಿವಣ್ಣ, ಡಿ.ಕೆ.ಶಿವಕುಮಾರ್ ಅವರು ಆಫರ್ ನೀಡಿದ್ದರು. ಆದರೆ ರಾಜಕೀಯ ನನಗೆ ಗೊತ್ತಿಲ್ಲ. ಸಿನಿಮಾದಲ್ಲೇ ಮುಂದುವರೆಯುವೆ ಎಂದು ಶಿವಣ್ಣ ಹೇಳಿದ್ದಾರೆ.
ಅರಮನೆ ಮೈದಾನದಲ್ಲಿ ಇಂದು ಹಮ್ಮಿಕೊಂಡಿದ್ದ ಕರ್ನಾಟಕ ಪ್ರದೇಶ ಆರ್ಯ ಈಡಿಗರ ಸಂಘದ ಅಮೃತ ಮಹೋತ್ಸವ ಹಾಗೂ ಈಡಿಗ ಮತ್ತು 25 ಪಂಗಡಗಳ ಬೃಹತ್ ಜಾಗೃತ ಸಮಾವೇಶದಲ್ಲಿ ಭಾಗವಹಿಸಿ, ಮಾತನಾಡಿದೆ.
— DK Shivakumar (@DKShivakumar) December 10, 2023
ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರವನ್ನು ಅಧಿಕಾರಕ್ಕೆ ತರುವಲ್ಲಿ ಈಡಿಗ ಸಮುದಾಯದ ಪಾತ್ರವೂ ಮಹತ್ವದ್ದಾಗಿದೆ. ಅದಕ್ಕೆ ನಾನು ಆಭಾರಿಯಾಗಿದ್ದು, ಈಡಿಗ… pic.twitter.com/XSA1uc9R0g
ಲೋಕಸಭೆ ರೆಡಿಯಾಗಿ ಎಂದು ಡಿಕೆಶಿ ಹೇಳಿದ್ದರು. ನಮ್ಮ ತಂದೆ ಕೊಟ್ಟಿರುವ ಬಳವಳಿ ಮುಂದುವರೆಸಿಕೊಂಡು ಹೋಗಬೇಕು. ಮೇಕಪ್ ಹಾಕುವುದು, ಸಿನಿಮಾ ಮಾಡುವುದು ಅಷ್ಟೇ ನಮ್ಮ ಕೆಲಸ ಎಂದು ಶಿವಣ್ಣ ಹೇಳಿದ್ದಾರೆ.
“ಲೋಕಸಭೆ ಚುನಾವಣೆಗೆ ತಯಾರಾಗಿ ಎಂದು ನಟ ಶಿವರಾಜ್ ಕುಮಾರ ಅವರಿಗೆ ತಿಳಿಸುತ್ತಿದ್ದೆ. ಅದಕ್ಕೆ ಅವರು ಇನ್ನೂ ಒಪ್ಪಿಗೆ ಸೂಚಿಸಿಲ್ಲ. ಬದಲಾಗಿ ಚಿತ್ರರಂಗದಲ್ಲಿಯೇ ಮುಂದುವರೆಯಬೇಕು ಎನ್ನುತ್ತಿದ್ದಾರೆ. ಚಿತ್ರರಂಗದಲ್ಲಿ ಯಾವಾಗ ಬೇಕಾದರೂ ಮುಂದುವರೆಯಲು ಅವಕಾಶ ಇದೆ. ಆದರೆ ಲೋಕಸಭೆಗೆ ಹೋಗುವ ಭಾಗ್ಯ ಎಲ್ಲರಿಗೂ ಒದಗುವುದಿಲ್ಲ. ಆ ಅವಕಾಶ ಮತ್ತು ಯೋಗ ಮನೆಯ ಬಾಗಿಲಿಗೆ ಬಂದಿದೆ. ಇಂತಹ ಅವಕಾಶದಿಂದ ವಂಚಿತರಾಗಬೇಡಿ,” ಎಂದು ಅವರಿಗೆ ಸಲಹೆ ನೀಡಿದ್ದೇನೆ ಎಂದು ಶಿವಕುಮಾರ್ ಹೇಳಿದ್ದಾರೆ.