KS Eshwarappa demands Arrest of contractor Kempanna and Chief engineer Prahlad
ಹಾವೇರಿ:
ಸರ್ಕಾರದ ಮೇಲೆ ಮತ್ತು ಡಿಸಿಎಂ ಮೇಲೆ ಕೆಂಪಣ್ಣ ಕಮಿಷನ್ ಆರೋಪ ವಿಚಾರಕ್ಕೆ ಸಂಬಂಧಿಸಿದಂತೆ ಕೆಂಪಣ್ಣ ಹಾಗೂ ಪ್ರಹ್ಲಾದ ಈ ಇಬ್ಬರನ್ನು ಅರೆಸ್ಟ್ ಮಾಡಿ ಎಂದು ಮಾಜಿ ಡಿಸಿಎಂ ಕೆ ಎಸ್ ಈಶ್ವರಪ್ಪ ಕೆಂಡಾಮಂಡಲವಾಗಿದ್ದಾರೆ.
ಹಾವೇರಿಯಲ್ಲಿ ನೇರವಾಗಿ ಸರ್ಕಾರದ ಮೇಲೆ ವಾಗ್ದಾಳಿ ಮಾಡಿದ ಈಶ್ವರಪ್ಪ, ಈ ಸರ್ಕಾರ ಬಂದಾಗಿನಿಂದ ಕೋಟಿ ಕೋಡಿ ಹಣ ವಸೂಲಿ ಮಾಡುತ್ತಿದೆ. ನಾವು ಈ ಸಂಬಂಧ ಬಿಎಸವೈ ನೇತೃತ್ವದಲ್ಲಿ ಬೆಂಗಳೂರಿನಲ್ಲಿ ಪ್ರತಿಭಟನೆ ಮಾಡಿದ್ದೇವು. ಇದೀಗ ನೇರವಾಗಿ ಕೆಂಪಣ್ಣ ಅವರೆ ಹೆಸರು ಸಮೇತ ಹೇಳಿದ್ದಾರೆ.
ಡಿಕೆ ಶಿವಕುಮಾರ್ ಹಣ ವಸೂಲಿ ಮಾಡ್ತಾ ಇದಾರೆ ಎಂದು ಕೆಂಪಣ್ಣ ಹೇಳಿದ್ದಾರೆ. ಇಂದು ಮಾಧ್ಯಮಗಳ ಮುಂದೆ ಕೆಂಪಣ್ಣ ಹೇಳಿಕೆ ನೀಡಿದ್ದಾರೆ. ಸತ್ಯ ಹೊರಬರಬೇಕಂದ್ರೆ ಕೆಂಪಣ್ಣ ಮತ್ತು ಚೀಪ್ ಇಂಜಿನಿಯರ್ ಇಬ್ಬರನ್ನು ಅರಸ್ಟ್ ಮಾಡಲು ಆದೇಶ ಮಾಡಿ ಎಂದು ಸಿಎಂ ಗೆ ಚಾಲೆಂಜ್ ಹಾಕಿದ್ದಾರೆ.
ಅಂದು ಅವರೆ ಬಾಯಿ ಬಿಡ್ತಾರೆ ಯಾರಾರಿಗೆ ಎಷ್ಟೆಷ್ಟು ಹಣ ಕೊಟ್ಟಿದ್ದಾರೆ. ಅಂದು ಮಾತ್ರ ಏನ್ ಸತ್ಯ ಎನ್ನೋದು ದಾಖಲೆ ಸಮೇತ ಕಂಡುಕೊಳ್ಳಬೊದು. ಇದಕ್ಕಿಂತ ಸಾಕ್ಷಿ ಸಿಗೊಕೆ ಸಾಧ್ಯವಿಲ್ಲಾ, ವರ್ಗಾವಣೆಯಲ್ಲಿ ಹಣ ಸಂಗ್ರಹ ಈ ಕುರಿತು ರಿಟೈರ್ಡ್ ಜಡ್ಜ್ ಅಥವಾ ಹಾಲಿ ಜಡ್ಜ್ ನೇತೃತ್ವದಲ್ಲಿ ತಂಡ ರಚಿಸಿ ನಾನು ಅವರೊಂದಿಗೆ ಇದ್ದು ಎಲ್ಲಾ ಸತ್ಯ ಹೊರತರುತ್ತೇನೆ ಎಂದು ಹೇಳಿದರು.
