Home ಬೆಂಗಳೂರು ನಗರ KSRTC | ಜನಸ್ನೇಹಿ ಉಪಕ್ರಮಗಳಿಗೆ ಏಳು ರಾಷ್ಟ್ರೀಯ ಪ್ರಶಸ್ತಿ ಮುಡಿಗೇರಿಸಿಕೊಂಡ ಕೆಎಸ್ಸಾರ್ಟಿಸಿ

KSRTC | ಜನಸ್ನೇಹಿ ಉಪಕ್ರಮಗಳಿಗೆ ಏಳು ರಾಷ್ಟ್ರೀಯ ಪ್ರಶಸ್ತಿ ಮುಡಿಗೇರಿಸಿಕೊಂಡ ಕೆಎಸ್ಸಾರ್ಟಿಸಿ

12
0
KSRTC Logo

ಬೆಂಗಳೂರು : ಕೆಎಸ್ಸಾರ್ಟಿಸಿ ಅನುಷ್ಟಾನಗೊಳಿಸಿರುವ ಜನಸ್ನೇಹಿ ಉಪಕ್ರಮಗಳಿಗೆ ಏಳು ರಾಷ್ಟ್ರೀಯ ಹಾಗೂ ವಿಶ್ಚ ನಾವೀನ್ಯತೆ ಪ್ರಶಸ್ತಿಗಳು ದೊರೆತಿದ್ದು, ಫೆ.17, ಫೆ.18 ಮತ್ತು ಫೆ.21ರಂದು ಮುಂಬೈನಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಗುವುದು ಎಂದು ಸಂಸ್ಥೆ ತಿಳಿಸಿದೆ.

ಕೆಎಸ್ಸಾರ್ಟಿಸಿ ಉತ್ತಮ ಉದ್ಯೋಗದಾತ ಬ್ರಾಂಡ್ ಪ್ರಶಸ್ತಿ, ಉದ್ಯೋಗದಲ್ಲಿ ಆರೋಗ್ಯ ನಿರ್ವಹಣೆಗಾಗಿ ಕನಸುಗಳ ಕಂಪೆನಿಗಳು ಪ್ರಶಸ್ತಿ, ಕಾರ್ಯಸ್ಥಳ ಮತ್ತು ಜನಸಂಪತ್ತು ಅಭಿವೃದ್ಧಿಗಾಗಿ ವರ್ಷದ ವ್ಯವಹಾರ ನಾಯಕ ಪ್ರಶಸ್ತಿ ನೀಡಲಾಗುವುದು.

ಉತ್ತಮ ಸಾರ್ವಜನಿಕ ಆರೋಗ್ಯ ಉಪಕ್ರಮಕ್ಕಾಗಿ ವಿಶ್ವ ಆರೈಕೆ ಪ್ರಶಸ್ತಿ, ಆರೋಗ್ಯ ತಂತ್ರಜ್ಞಾನದಲ್ಲಿ ಉತ್ತಮ ನಾವೀನ್ಯತೆಗಾಗಿ ವಿಶ್ವ ನಾವಿನ್ಯತೆ ಪ್ರಶಸ್ತಿ, ಸುಸ್ಥಿರತೆಗಾಗಿ ಜಾಗತಿಕ ತಯಾರಿಕಾ ನಾಯಕರ ಪ್ರಶಸ್ತಿ ಮತ್ತು ಡಿಜಿಟಲ್ ತಂತ್ರಜ್ಞಾನ ಪ್ರಶಸ್ತಿಗಳಿಗೆ ಕೆಎಸ್ಸಾರ್ಟಿಸಿ ಭಾಜನವಾಗಿದೆ.

LEAVE A REPLY

Please enter your comment!
Please enter your name here