Home Uncategorized Lakshmana Savadi: ಲೋಕಸಭೆ ಚುನಾವಣೆ ಬಂದಾಗ ಬಿಜೆಪಿಯವರು ಕಾಂಗ್ರೆಸ್ ಗೆ ಬರುತ್ತಾರೆ: ಲಕ್ಷ್ಮಣ ಸವದಿ

Lakshmana Savadi: ಲೋಕಸಭೆ ಚುನಾವಣೆ ಬಂದಾಗ ಬಿಜೆಪಿಯವರು ಕಾಂಗ್ರೆಸ್ ಗೆ ಬರುತ್ತಾರೆ: ಲಕ್ಷ್ಮಣ ಸವದಿ

33
0

ಬೆಂಗಳೂರುಬಿಜೆಪಿ ಅಂಬಿಗನಿಲ್ಲದ ದೋಣಿ. ಅದು ಯಾವ ದಿಕ್ಕಿಗೆ ಹೋಗುತ್ತೋ ಗೊತ್ತಿಲ್ಲ ಎಂದು ಮಾಜಿ ಡಿಸಿಎಂ ಲಕ್ಷ್ಮಣ ಸವದಿ ಹೇಳಿದರು. ವಿಕಾಸಸೌಧದಲ್ಲಿ ಮಾತನಾಡಿದ ಅವರು, ಬಿಜೆಪಿ ಸ್ಥಿತಿಗತಿಯ ಬಗ್ಗೆ ಜನ ನೋಡುತ್ತಿದ್ದಾರೆ. ಬಿಜೆಪಿ ಲೀಡರ್ ಲೆಸ್ ಪಾರ್ಟಿ ಆಗಿದೆ. ದೋಣಿ ಮುಂದಕ್ಕೆ ಸಾಗಲು ಅಂಬಿಗ ಬೇಕಾಗುತ್ತಾನೆ. ಆದರೆ ಅಂಬಿಗನಿಲ್ಲದ ದೋಣಿಯಲ್ಲಿ ಯಾವ ಕಡೆ ಇಲ್ಲದೆ ಹೋಗಬೇಕು ಅಂತ ಗೊತ್ತಾಗಲ್ಲ. ಬಿಜೆಪಿ ಯಾವ ದಿಕ್ಕಿಗೆ ಹೋಗುತ್ತೋ ಗೊತ್ತಿಲ್ಲ ಎಂದರು.

Iphone 15 Bigg Update: ಐಫೋನ್ 15 ಸೀರೀಸ್ ಬಳಕೆದಾರರಿಗೆ ಬಿಗ್‌ ಅಪೆ ಡೇಟ್:‌ ಏನಂತೀರಾ?!

ಬಿಜೆಪಿಯಲ್ಲಿ ಭವಿಷ್ಯ ಇಲ್ಲ ಎಂದು ಬಹಳ ಜನ ಯೋಚನೆ ಮಾಡ್ತಾರೆ. ಲೋಕಸಭೆ ಚುನಾವಣೆ ಬಂದಾಗ ಬಿಜೆಪಿಯವರು ಕಾಂಗ್ರೆಸ್ ಗೆ ಬರುತ್ತಾರೆ. ಬಹಳಷ್ಟು ಜನ ನನ್ನ ಸ್ನೇಹಿತರು ಸಂಪರ್ಕದಲ್ಲಿದ್ದಾರೆ ಇದ್ದಾರೆ. ಅವರನ್ನು ಕರೆದುಕೊಂಡು ಬಂದ ಮೇಲೆ ಅವರ ಸ್ಥಾನಮಾನ, ಜವಾಬ್ದಾರಿ ನಿರ್ಧಾರ ಆಗಲಿದೆ ಎಂದರು. ಕಾಂಗ್ರೆಸ್ ಪಕ್ಷಕ್ಕೆ ಬಂದರೆ ಮುಂದಿನ ಚುನಾವಣೆಯಲ್ಲಿ ಎಲ್ಲಿ ಸ್ಪರ್ಧೆ ಮಾಡಬೇಕು ಎಲ್ಲವನ್ನೂ ಚರ್ಚೆ ಮಾಡಬೇಕು. ದಿಢೀರ್ ಅಂತ ನಿರ್ಧಾರ ಮಾಡೋಕೆ ಆಗಲ್ಲ ಎಂದು ತಿಳಿಸಿದರು.

The post Lakshmana Savadi: ಲೋಕಸಭೆ ಚುನಾವಣೆ ಬಂದಾಗ ಬಿಜೆಪಿಯವರು ಕಾಂಗ್ರೆಸ್ ಗೆ ಬರುತ್ತಾರೆ: ಲಕ್ಷ್ಮಣ ಸವದಿ appeared first on Ain Live News.

LEAVE A REPLY

Please enter your comment!
Please enter your name here