Leaders of various parties joined the BJP in Karnataka
ಬೆಂಗಳೂರು:
ವಿವಿಧ ಪಕ್ಷಗಳ ಪ್ರಮುಖರು ಇಂದು ಮಲ್ಲೇಶ್ವರದ ಬಿಜೆಪಿ ಕಚೇರಿಯಲ್ಲಿ ಬಿಜೆಪಿ ಸೇರ್ಪಡೆಗೊಂಡರು.
ಕೇಂದ್ರ ಸಚಿವ ರಾಜೀವ್ ಚಂದ್ರಶೇಖರ್, ಪಕ್ಷದ ರಾಜ್ಯ ಉಪಾಧ್ಯಕ್ಷ ನಿರ್ಮಲ್ ಕುಮಾರ್ ಸುರಾಣ, ರಾಜ್ಯದ ಸಚಿವರಾದ ಡಾ|| ಸಿ.ಎನ್. ಅಶ್ವತ್ಥನಾರಾಯಣ, ಮುನಿರತ್ನ ಮತ್ತು ಕೊರಟಗೆರೆ ಅಭ್ಯರ್ಥಿ ಅನಿಲ್‍ಕುಮಾರ್ ಅವರು ಉಪಸ್ಥಿತರಿದ್ದರು.
ಇಂದು ಮಾಜಿ ಜಿಲ್ಲಾ ಪಂಚಾಯಿತಿ ಸದಸ್ಯ ಮತ್ತು ರಾಜರಾಜೇಶ್ವರಿನಗರ/ದಾಸರಹಳ್ಳಿ ಕಾಂಗ್ರೆಸ್ ಪಕ್ಷದ ಮಾಜಿ ಅಭ್ಯರ್ಥಿ ಪಿ.ಎನ್ ಕೃಷ್ಣಮೂರ್ತಿ, ರಾಜರಾಜೇಶ್ವರಿನಗರ ಪಕ್ಷೇತರ ಅಭ್ಯರ್ಥಿ ಎಂ.ಲಿಂಗರಾಜು , ಜ್ಞಾನ ಭಾರತಿ ವಾರ್ಡಿನ ಜೆ.ಡಿ.ಎಸ್ ಮುಖಂಡ ರವಿಕುಮಾರ್, ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯೆ ಸಿ.ಬಿ.ರಂಗಮ್ಮ, ಮಂಡಲ ಪಂಚಾಯಿತಿ ಮಾಜಿ ಅಧ್ಯಕ್ಷ ನಿಜಗುಣ ಆರಾಧ್ಯ, ಗ್ರಾಮ ಪಂಚಾಯಿತಿ ಸದಸ್ಯ ಎ.ಆರ್ ಮಧುಸೂಧನ, ಗ್ರಾಮ ಪಂಚಾಯಿತಿ ಮಾಜಿ ಸದಸ್ಯ ಆರ್.ಎಸ್.ಲಕ್ಷ್ಮೀಕಾಂತ, ಮುಖಂಡ ಬಿ.ಆರ್ .ವಿಜಯಕುಮಾರ್ ಪಕ್ಷ ಸೇರ್ಪಡೆಗೊಂಡರು.
