
Leopard sighting near Chikka Thoguru near Nice Road
ಬೆಂಗಳೂರು:
ರಾಜಧಾನಿ ಬೆಂಗಳೂರು ನಗರದಲ್ಲಿ ಮತ್ತೊಂದು ಚಿರತೆ ಪ್ರತ್ಯಕ್ಷವಾಗಿ ಮತ್ತೆ ಆತಂಕ ಸೃಷ್ಟಿ ಮಾಡಿದೆ. ನೈಸ್ ರಸ್ತೆ ಸಮೀಪದ ಚಿಕ್ಕತೋಗೂರು ಬಳಿ ಚಿರತೆ ಪ್ರತ್ಯಕ್ಷವಾಗಿದೆ.
ನಿನ್ನೆ ನವೆಂಬರ್ 4 ರ ಸಂಜೆ 7.40ರ ಸಮಯದಲ್ಲಿ ಚಿರತೆ ಕಾಣಿಸಿಕೊಂಡಿದ್ದು, ಶನಿವಾರ ಸಂಜೆ ಚಿರತೆ ಮನೆ ಕಂಪೌಂಡ್ ಒಳಗೆ ನುಗ್ಗಿದ್ದು, ಬಾಗಿಲು ಬಳಿ ಬಂದ ಚಿರತೆ ಕಂಡು ಬಾಲಕ ಕಿರುಚಾಡಿದ್ದಾನೆ. ಬಾಲಕನ ಕಿರುಚಾಟಕ್ಕೆ ಚಿರತೆ ಓಡಿ ಹೋಗಿದೆ ಎಂದು ತಿಳಿದು ಬಂದಿದೆ.
ಕೆ.ಆರ್.ಪುರಂ ಅರಣ್ಯ ವಲಯ ವ್ಯಾಪ್ತಿಯಲ್ಲಿ ಘಟನೆ ನಡೆದಿದ್ದು, ಪರಿಶೀಲನೆ ನಡೆಸಿ ಅರಣ್ಯ ಸಿಬ್ಬಂದಿ ಸ್ಥಳದಲ್ಲೇ ಬೀಡು ಬಿಟ್ಟಿದ್ದಾರೆ. ಶನಿವಾರ ಮಳೆ ಬಂದ ಹಿನ್ನೆಲೆಯಲ್ಲಿ ಹೆಜ್ಜೆ ಗುರುತು ಪತ್ತೆಯಾಗಿದೆ.