Home ಬೆಂಗಳೂರು ನಗರ Nice Road | ಬೆಂಗಳೂರದ ನೈಸ್ ರಸ್ತೆಯಲ್ಲಿ ರಸ್ತೆ ತಡೆದು ಲಾರಿ ಅಸೋಸಿಯೇಷನ್ ಪ್ರತಿಭಟನೆ

Nice Road | ಬೆಂಗಳೂರದ ನೈಸ್ ರಸ್ತೆಯಲ್ಲಿ ರಸ್ತೆ ತಡೆದು ಲಾರಿ ಅಸೋಸಿಯೇಷನ್ ಪ್ರತಿಭಟನೆ

33
0
Lorry Association protests by blocking the road on Nice Road in Bangalore
Lorry Association protests by blocking the road on Nice Road in Bangalore

ಬೆಂಗಳೂರು:

ನಗರದ ನೈಸ್ ರಸ್ತೆಯಲ್ಲಿ ಇವತ್ತು ಲಾರಿ ಅಸೋಸಿಯೇಷನ್ ನವರು ರಸ್ತೆ ತಡೆದು ಪ್ರತಿಭಟನೆ ನಡೆಸಿದರು. ಇದರಿಂದ ಕೆಲಹೊತ್ತು ವಾಹನ ಸಾವರಾರು ಟ್ರಾಫೀಕ್ ಜಾಮ್ ನಿಂದ ಪರದಾಡಬೇಕಾಯಿತು.

ನೈಸ್ ರಸ್ತೆಯಲ್ಲಿ ರಾತ್ತಿ ಓಡಾಡಲು ಸರಿಯಾದ ಸೆಕ್ಯುರಿಟಿಯಿಲ್ಲ, ರಸ್ತೆ ನವೀಕರಣ ಮಾಡಲು ಹೋಗಿ ಒನೆ್ ವೇ ಮಾಡಿದ್ದಾರೆ. ರಸ್ತೆ ನವೀಕರಣ ಸಂದರ್ಭದಲ್ಲಿ ಟೋಲ್ ಕಲೆಕ್ಟ್ ಮಾಡುವ ಹಾಗಿಲ್ಲ,ಒಂದು ದಿನಕ್ಕೆ 40 ಸಾವಿರ ವಾಹನ ಸಂಚಾರಿಸುತ್ತಿದ್ದು 1.70ಕೋಟಿ ಹಣ ಸಂದಾಯವಾಗುತ್ತಿದೆ,

ತುಮಕೂರು ರಸ್ತೆಯಿಂದ ಎಲೆಕ್ಟ್ರಾನಿಕ್ ಸಿಟಿಗೆ ಲಾರಿಯೊಂದಕ್ಕೆ 2000 ರೂ ಟೋಲ್ ಕಲೆಕ್ಟ್ ಮಾಡುತ್ತಿದ್ದಾರೆ ಅದರೆ ನೈಸ್ ಕಂಪನಿಯವರು ಸರಿಯಾಗಿ ನಿರ್ವಹಣೆ ಮಾಡುತ್ತಿಲ್ಲ ಅಂತ ನೈಸ್ ಕಂಪನಿ ವಿರುದ್ದ ಲಾರಿ ಆಸೋಷಿಯೇಷನ್ ನವರು ಆಕ್ರೋಶ ವ್ಯಕ್ತ ಪಡಿಸಿದರು.

ನೈಸ್ ರಸ್ತೆಯಲ್ಲಿ ಇದುವರೆಗೆ 400ಕ್ಕೊ ಹೆಚ್ಚು ಆಕ್ಸಿಡೆಂಟ್ ಗಳು ಆಗಿದೆ, 120 ಜನ ಸಾವನ್ನಪ್ಪಿದ್ದಾರೆ ಯಾರಿಗೂ ನೈಸ್ ಕಂಪನಿಯವರು ಪರಿಹಾರ ಕೊಡುತ್ತಿಲ್ಲ , ರಾಜ್ಯ ಮತ್ತು ಕೇಂದ್ರ ಸರ್ಕಾರಕ ಇದರ ಬಗ್ಗೆ ಗಮನ ಹರಿಸಬೇಕು ಅಂದರು.

LEAVE A REPLY

Please enter your comment!
Please enter your name here