Home ಹುಬ್ಬಳ್ಳಿ ನನ್ನ ಮಗಳ ಕೊಲೆ ಹಿಂದೆ ಲವ್ ಜಿಹಾದ್: ಮೃತ ನೇಹಾಳ ತಂದೆ ನಿರಂಜನ್ ಆಕ್ರೋಶ

ನನ್ನ ಮಗಳ ಕೊಲೆ ಹಿಂದೆ ಲವ್ ಜಿಹಾದ್: ಮೃತ ನೇಹಾಳ ತಂದೆ ನಿರಂಜನ್ ಆಕ್ರೋಶ

33
0
Love Jihad behind my daughter's murder: Niranjan Hiremath, father of deceased Neha

ಹುಬ್ಬಳ್ಳಿ: ಹುಬ್ಬಳ್ಳಿ ಧಾರವಾಡ ಮಹಾನಗರ ಪಾಲಿಕೆ ಸದಸ್ಯ ನಿರಂಜನ್ ಹಿರೇಮಠ ಅವರ ಮಗಳು ನೇಹಾ ಹಿರೇಮಠರನ್ನು ಮುಸ್ಲಿಂ ಸಮುದಾಯದ ವ್ಯಕ್ತಿ ಚಾಕುವಿನಿಂದ ಚುಚ್ಚಿ ಕೊಲೆ ಮಾಡಿದ್ದಾನೆ. ಈ ಕುರಿತು ಸ್ವತಃ ಮೃತಳ ತಂದೆ ಪ್ರತಿಕ್ರಿಯಿಸಿದ್ದಾರೆ.ಮಗಳು ಕಳೆದುಕೊಂಡ ತಂದೆಯ ಆಕ್ರಂದನ ಮುಗಿಲು ಮುಟ್ಟಿದೆ. ಈ ನೋವಿನಲ್ಲೇ ಮಗಳ ಕುರಿತು ಮಾತನಾಡಿರುವ ಅವರು, ನನ್ನ ಮಗಳ ಕೊಲೆ ಹಿಂದೆ ಲಬ್ ಜಿಹಾದ್ ಇದೆ. ಕೊಲೆಗಾರನ ಜೊತೆಗೆ ನಾಲ್ಲೈದು ಅದೇ ಸಮುದಾಯದವರು ಇರುತಿದ್ದರು.

ಅನೇಕ ಬಾರೀ ಮಗಳ ಜೊತೆಗೆ ಮಾತನಾಡುವುದನ್ನು ನಾನು ನೋಡಿದ್ದೇನೆ ಎಂದರು. ಸರ್ಕಾರ, ಪೊಲೀಸರು ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿ ತನಿಖೆ ನಡೆಸಬೇಕು. ನನ್ನ ಮಗಳಿಗೆ ಆದ ಅನ್ಯಾಯ ಬೇರೆ ಹೆಣ್ಣು ಮಕ್ಕಳಿಗೆ ಆಗಬಾರದು. ನನ್ನ ಮಗಳು ಬಹಳ ಮುಗ್ಧೆ. ಯಾರೋಂದಿಗೂ ಯಾರದೊಂದಿಗೆ ಜಗಳ ಆಡುವ ಸ್ವಭಾವದವಳಲ್ಲ. ಅವಳು ಪ್ರತಿಭಾವಂತೆ ಎಂದು ತಂದೆ ನಿರಂಜನ್ ಹಿರೇಮಠ್ ತಿಳಿಸಿದ್ದಾರೆ.

ತುಂಬಾ ದಿನದ ಹಿಂದೆ ಆ ವ್ಯಕ್ತಿ ನನ್ನ ಮಗಳ ಹಿಂದೆ ಬಿದ್ದಿದ್ದ. ಲವ್ ಮಾಡುವಂತೆ ಪಿಡಿಸಿ ಬೆದರಿಕೆ ಹಾಕಿದ್ದ. ನಾನು ಸಹ ಎಚ್ಚರಿಕೆ ಕೊಟ್ಟಿದ್ದೆ. ನನ್ನ ಮಗಳು ಆತನ ಪ್ರೀತಿಗೆ ಒಪ್ಪದೇ ನಿರಾಕರಿಸಿ ಎಲ್ಲರಂತೆ ಸುಮ್ಮನಿದ್ದಳು, ಕಾಲೇಜಿಗೆ ಹೋಗುತ್ತಿದ್ದರು. ಆತನ ಸ್ನೇಹಿತರ ಜತೆ ಮೂರು ನಾಲ್ಕು ದಿನದಿಂದ ಪ್ಲಾನ್ ಮಾಡಿದ್ದು, ಗುರುವಾರ ಬಂದು ಆರೋಪಿ ಕೊಲೆ ಮಾಡಿದ್ದಾನೆ ಎಂದು ಅವರು ವಿವರಿಸಿದರು.

LEAVE A REPLY

Please enter your comment!
Please enter your name here