ಮುಂಬೈ: ಮಹಾರಾಷ್ಟ್ರದಲ್ಲಿರುವ ನಾಂದೆಡ್ ಸರ್ಕಾರಿ ಆಸ್ಪತ್ರೆಯಲ್ಲಿ (Maharastra Govt Hospital) ಕಳೆದ 8 ದಿನಗಳಲ್ಲಿ 108 ಮಂದಿ ದುರ್ಮರಣಕ್ಕೀಡಾಗಿದ್ದಾರೆ. ಈ ಘಟನೆ ಇದೀಗ ಭಾರೀ ಸಂಚಲನ ಮೂಡಿಸಿದೆ.
ವರದಿಗಳ ಪ್ರಕಾರ, 24 ಗಂಟೆಯಲ್ಲಿ ನವಜಾತ ಶಿಶು (Infant babies) ಸೇರಿ 11 ಮಂದಿ ರೋಗಿಗಳು ಆಸ್ಪತ್ರೆಯಲ್ಲಿ ಮೃತಪಟ್ಟಿದ್ದರು. ಈ ಸಂಬಂಧ ಆಸ್ಪತ್ರೆಯ ಡೀನ್ ಡಾ. ಶಂಕರ್ ರಾವ್ ಚವಾಣ್ ಮಾತನಾಡಿ, ಆಸ್ಪತ್ರೆಯಲ್ಲಿ ಔಷಧಿ ಕೊರತೆ ಇಲ್ಲ ಎಂದು ಹೇಳಿದ್ದಾರೆ. ಆದರೆ ರೋಗಿಗಳು ಮಾತ್ರ ಸಾವನ್ನಪ್ಪುತ್ತಿರುವುದು ಚರ್ಚೆಗೆ ಗ್ರಾಸವಾಗಿದೆ.
ಕಳೆದ 24 ಗಂಟೆಯಲ್ಲಿ 1,100ಕ್ಕೂ ಹೆಚ್ಚು ಮಂದಿಯನ್ನು ವೈದ್ಯರು ಪರೀಕ್ಷೆಗೆ ಒಳಪಡಿಸಿದ್ದಾರೆ. ಇದರಲ್ಲಿ 191 ಮಂದಿ ರೋಗಿಗಳನ್ನು ಆಸ್ಪತ್ರೆಗೆ ದಾಖಲು ಮಾಡಿಕೊಳ್ಳಲಾಗಿದೆ ಎಂದು ಡೀನ್ ತಿಳಿಸಿದ್ದಾರೆ.
The post Maharastra Govt Hospital: ನಾಂದೆಡ್ ಸರ್ಕಾರಿ ಆಸ್ಪತ್ರೆಯಲ್ಲಿ8 ದಿನಗಳಲ್ಲಿ 108 ಮಂದಿ ದುರ್ಮರಣ appeared first on Ain Live News.