Home ಬೆಂಗಳೂರು ನಗರ ‘ಮಂಡ್ಯದ ಗಂಡು’ ಸಿನಿಮಾ ಖ್ಯಾತಿಯ ನಿರ್ದೇಶಕ AT Raghu ನಿಧನ

‘ಮಂಡ್ಯದ ಗಂಡು’ ಸಿನಿಮಾ ಖ್ಯಾತಿಯ ನಿರ್ದೇಶಕ AT Raghu ನಿಧನ

19
0
'Mandya Gandu' film director AT Raghu passed away

ಬೆಂಗಳೂರು: ಅನಾರೋಗ್ಯದಿಂದ ಬಳಲುತ್ತಿದ್ದ ಸ್ಯಾಂಡಲ್‌ವುಡ್‌ನ ಖ್ಯಾತ ನಿರ್ದೇಶಕ ಎಟಿ ರಘು ವಿಧಿವಶರಾಗಿದ್ದಾರೆ.

ಗುರುವಾರ ರಾತ್ರಿ 9:20ರ ಸುಮಾರಿಗೆ ಕೊನೆಯುಸಿರೆಳೆದಿದ್ದು, ಪತ್ನಿ ಹಾಗೂ ಮಗಳನ್ನು ಅಗಲಿದ್ದಾರೆ. ಸದ್ಯ ಆರ್‌ಟಿ ನಗರದ ಮಠದಹಳ್ಳಿಯಲ್ಲಿ ಪಾರ್ಥಿವ ಶರೀರ ಇಡಲಾಗಿದ್ದು, ಇಂದು ಮದ್ಯಾಹ್ನ 2-3 ಗಂಟೆಯೊಳಗೆ ಹೆಬ್ಬಾಳದ ಚಿತಾಗಾರದಲ್ಲಿ ಅಂತ್ಯಕ್ರಿಯೆ ನೆರವೇರಿಸಲಾಗುತ್ತದೆ ಎಂದು ಕುಟುಂಬ ಮೂಲಗಳು ತಿಳಿಸಿವೆ.

ಕನ್ನಡ ಚಿತ್ರರಂಗದಲ್ಲಿ ಬರಹಗಾರ ಹಾಗೂ ಖ್ಯಾತ ನಿರ್ದೇಶಕರಾಗಿದ್ದ ಇವರು, ಸಾಹಸ ಸಿನಿಮಾಗಳಿಗೆ ಆಕ್ಷನ್ ಕಟ್ ಹೇಳುತ್ತಿದ್ದರು. `ಮಂಡ್ಯದ ಗಂಡು’ ಸಿನಿಮಾ ಸೇರಿದಂತೆ ಒಟ್ಟು 55 ಸಿನಿಮಾಗಳನ್ನು ನಿರ್ದೇಶಿಸಿದ್ದರು. ಇನ್ನೂ ರೆಬೆಲ್ ಸ್ಟಾರ್ ಅಂಬರೀಶ್ ನಟನೆಯ 27 ಸಿನಿಮಾಗಳನ್ನು ನಿರ್ದೇಶಿದ್ದರು.

LEAVE A REPLY

Please enter your comment!
Please enter your name here