Home ಮಂಡ್ಯ Mandya Police: ಮಹಿಳಾ ಪೊಲೀಸ್ ಸಿಬ್ಬಂದಿಗೆ ಠಾಣೆಯಲ್ಲೇ ಮಡಿಲಕ್ಕಿ ತುಂಬಿ ಸೀಮಂತ

Mandya Police: ಮಹಿಳಾ ಪೊಲೀಸ್ ಸಿಬ್ಬಂದಿಗೆ ಠಾಣೆಯಲ್ಲೇ ಮಡಿಲಕ್ಕಿ ತುಂಬಿ ಸೀಮಂತ

90
0
Mandya Woman police personnel perform baby shower in police station itself
Mandya Woman police personnel perform baby shower in police station itself

ಮಂಡ್ಯ:

ಪೊಲೀಸ್‌ ಠಾಣೆಯಲ್ಲಿ ವಿಶೇಷ ಕಾರ್ಯಕ್ರಮವೊಂದು ನಡೆದಿದೆ. ಮಹಿಳಾ ಪೊಲೀಸ್ ಸಿಬ್ಬಂದಿಗಳಿಗೆ ಮಡಿಲಕ್ಕಿ ತುಂಬಿ ಸೀಮಂತ (Baby Shower) ಕಾರ್ಯ ಮಾಡಿದ್ದಾರೆ. ಕೆ.ಆರ್.ಪೇಟೆ ಪಟ್ಟಣ ಪೊಲೀಸ್ ಠಾಣೆಯಲ್ಲಿ ಅರ್ಥಪೂರ್ಣವಾಗಿ ಸೀಮಂತ ಕಾರ್ಯಕ್ರಮ ನಡೆಸಲಾಯಿತು. 

ಕೆ.ಆರ್.ಪೇಟೆ ಪಟ್ಟಣ ಪೊಲೀಸ್ ಠಾಣೆಯಲ್ಲಿ ಅರ್ಥಪೂರ್ಣವಾಗಿ ನಡೆದ ಸೀಮಂತ ಕಾರ್ಯಕ್ರಮ ಎಲ್ಲರ ಗಮನಸೆಳೆದಿದೆ. ಪೊಲೀಸ್ ಸಿಬ್ಬಂದಿ ಶಾರದಾ ಮತ್ತು ಅಸ್ಮಬಾನು ಎಂಬ ಇಬ್ಬರು ಗರ್ಭಿಣಿ ಮಹಿಳಾ ಪೇದೆಗಳಿಗೆ ಸೀಮಂತ ಮಾಡಲಾಗಿದೆ.

ಹಿಳಾ ಸಿಬ್ಬಂದಿಗಳಿಗೆ ಪೋಲಿಸ್ ಇನ್ಸ್ಪೆಕ್ಟರ್ ಸುಮಾರಾಣಿ ಸೀಮಂತ ಕಾರ್ಯ ಮಾಡಿ ಶುಭ ಹಾರೈಸಿ ಬೀಳ್ಕೊಟ್ಟರು. ಇಬ್ಬರು ಮಹಿಳಾ ಪೇದೆಗಳಿಗೆ ಉಡಿ ತುಂಬಿ, ಮಡಿಲಕ್ಕಿ ಹಾಕಿ, ಕೊಬ್ಬರಿ ಬೆಲ್ಲ, ತೆಂಗಿನಕಾಯಿ, ಅರಿಶಿಣ-ಕುಂಕುಮ ಹಾಗೂ ಬಳೆಗಳನ್ನು ನೀಡಿ ಸೀಮಂತ ಮಾಡಿದರು.

LEAVE A REPLY

Please enter your comment!
Please enter your name here