ಮಂಗಳೂರು:
ನಗರದ ಬಜ್ಪೆ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಕಳ್ಳ ಸಾಗಣೆ ಮಾಡುತ್ತಿದ್ದ 1.69 ಕೋಟಿ ರೂಪಾಯಿ ಮೌಲ್ಯದ ವಜ್ರದ ಹರಳುಗಳನ್ನು ಕೇಂದ್ರ ಕೈಗಾರಿಕಾ ಭದ್ರತಾ ಪಡೆ (ಸಿಐಎಸ್‌ಎಫ್) ಅಧಿಕಾರಿಗಳು ವಶಕ್ಕೆ ಪಡೆದು, ಪ್ರಯಾಣಿಕನೊಬ್ಬರನ್ನು ಬಂಧಿಸಿದ್ದಾರೆ. ಪ್ರಯಾಣಿಕನ ಅನುಮಾನಾಸ್ಪದ ವರ್ತನೆ ಹಿನ್ನೆಲೆಯಲ್ಲಿ ತಪಾಸಣೆ ನಡೆಸಿದಾಗ ಆತ ಒಳ ಉಡುಪಿನಲ್ಲಿ ವಜ್ರದ ಹರಳುಗಳನ್ನು ಸಾಗಿಸುತ್ತಿದ್ದದ್ದು ಕಂಡುಬಂದಿದೆ.
On 25.05.2023, Mangaluru Air Customs seized diamonds totally weighing 306.21ct valued at Rs. 1.69 cr seized from Dubai bound pax handed over by CISF. Pax arrested and investigation under progress. #IndianCustomsAtWork pic.twitter.com/SJL7dBUEhY
— Bengaluru Customs (@blrcustoms) May 27, 2023
ಮೇ 25ರಂದು ದುಬೈಗೆ ತೆರಳಲು ಏರ್‌ಪೋರ್ಟ್‌ಗೆ ಬಂದಿದ್ದ ಕೇರಳದ ಕಾಸರಗೋಡು ನಿವಾಸಿಯಿಂದ ವಜ್ರದ ಹರಳುಗಳನ್ನು ವಶಕ್ಕೆ ಪಡೆಯಲಾಗಿದೆ. ಒಳ ಉಡುಪಿನಲ್ಲಿ 13 ಪೌಚ್‌ಗಳಲ್ಲಿ ವಜ್ರಗಳನ್ನು ಅಡಗಿಸಿಡಲಾಗಿತ್ತು. ಹೀಗಾಗಿ ಆರೋಪಿ ಪ್ರಯಾಣಿಕನನ್ನು ಸಿಐಎಸ್‌ಎಫ್ ಅಧಿಕಾರಿಗಳು ಬಂಧಿಸಿ, ಕಸ್ಟಮ್ಸ್ ಅಧಿಕಾರಿಗಳಿಗೆ ಒಪ್ಪಿಸಿದ್ದಾರೆ.
ತಪಾಸಣೆ ವೇಳೆ ಪ್ರಯಾಣಿಕನ ಒಳ ಉಡುಪಿನಲ್ಲಿ 2 ಪ್ಯಾಕೆಟ್‌ಗಳು ಪತ್ತೆಯಾಗಿವೆ. ಅವುಗಳನ್ನು ತೆರೆದು ನೋಡಿದಾಗ 13 ಸಣ್ಣ ಪೊಟ್ಟಣಗಳಲ್ಲಿ ವಜ್ರದ ಹರಳುಗಳು ಇದ್ದವು. ಇವು 306.21 ಕ್ಯಾರೆಟ್ ತೂಕ ಇದ್ದು, 1.69 ಕೋಟಿ ರೂಪಾಯಿ ಬೆಲೆ ಬಾಳುತ್ತವೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.