Home ಮಂಗಳೂರು ಮಂಗಳೂರಿನಲ್ಲಿ ವಿದ್ಯಾರ್ಥಿಗಳಿಗೆ ಡ್ರಗ್ ಬೆರೆಸಿದ ಚಾಕೊಲೇಟ್ ಮಾರಾಟ,ಇಬ್ಬರ ಬಂಧನ

ಮಂಗಳೂರಿನಲ್ಲಿ ವಿದ್ಯಾರ್ಥಿಗಳಿಗೆ ಡ್ರಗ್ ಬೆರೆಸಿದ ಚಾಕೊಲೇಟ್ ಮಾರಾಟ,ಇಬ್ಬರ ಬಂಧನ

38
0
Mangalore: Two arrested for selling drug-laced chocolate to students
Mangalore: Two arrested for selling drug-laced chocolate to students

ಮಂಗಳೂರು:

ವಿದ್ಯಾರ್ಥಿಗಳು ಹಾಗೂ ಯುವ ಜನತೆಯನ್ನು ಗುರಿಯಾಗಿಸಿಕೊಂಡು ಮಾದಕ ವಸ್ತು ಬೆರೆಸಿದ ಚಾಕೊಲೇಟ್ ಮಾರಾಟ ಮಾಡುತ್ತಿದ್ದ ಇಬ್ಬರನ್ನು ದಕ್ಷಿಣ ಕನ್ನಡ ಜಿಲ್ಲೆಯ ಮಂಗಳೂರು ನಗರದಲ್ಲಿ ಬಂಧಿಸಲಾಗಿದೆ ಎಂದು ಪೊಲೀಸರು ಶುಕ್ರವಾರ ತಿಳಿಸಿದ್ದಾರೆ.

ಬಂಧಿತರನ್ನು ಉತ್ತರ ಪ್ರದೇಶದ ಬೆಚಾನ್ ಸೊನಾರ್(45) ಹಾಗೂ ಮಂಗಳೂರಿನ ಮನೋಹರ್ ಸೇಠ್ (49) ಎಂದು ಗುರುತಿಸಲಾಗಿದೆ. ಮಂಗಳೂರು ದಕ್ಷಿಣ ಪೊಲೀಸರು ಆರೋಪಿಗಳನ್ನು ಬಂಧಿಸಿದ್ದಾರೆ. ಸಣ್ಣ ಅಂಗಡಿ ಇಟ್ಟುಕೊಂಡಿದ್ದ ಸೊನಾರ್, ಡ್ರಗ್ ಬೆರೆಸಿದ ಚಾಕೊಲೇಟ್ ಮಾರಾಟ ಮಾಡುತ್ತಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.

‘ಆನಂದ ಚೂರ್ಣ’ ಮಹಾಶಕ್ತಿ ಮುನಾಕ್ಕಾ, ಬಮ್ ಬಮ್ ಮುನಾಕ್ಕಾ ವಾಟಿ ಮತ್ತಿತರ ಹೆಸರುಗಳಿಂದ ಮಾರಾಟ ಮಾಡಲಾಗುತ್ತಿದ್ದ ಸುಮಾರು ರೂ. 5,500 ಮೊತ್ತದ ಚಾಕೊಲೇಟ್ ನ್ನು ವಶಕ್ಕೆ ಪಡೆಯಲಾಗಿದೆ ಎಂದು ಅವರು ಮಾಹಿತಿ ನೀಡಿದ್ದಾರೆ. ಮಂಗಳೂರಿನ ಹೈಲ್ಯಾಂಡ್ ಜಂಕ್ಷನ್ ಬಳಿ ಸೊನಾರ್ ಅಂಗಡಿ ಇಟ್ಟುಕೊಂಡಿದ್ದರೆ, ಮತ್ತೋರ್ವ ಆರೋಪಿ, ಮನೋಹರ್ ಮಂಗಳೂರು ಉತ್ತರ ಪೊಲೀಸ್ ಠಾಣೆ ವ್ಯಾಪ್ತಿಯ ಕಾರು ಸ್ಟ್ರೀಟ್ ನಲ್ಲಿ ಚಾಕೊಲೇಟ್ ಮಾರಾಟ ಮಾಡುತ್ತಿದ್ದ. ಅವರಿಂದ ಮೂರು ಬ್ಯಾಗ್ ಗಳಲ್ಲಿ ಸಂಗ್ರಹವಾಗಿದ್ದ ರೂ.48,000 ಮೊತ್ತದ ಚಾಕೊಲೇಟ್ ನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.

ಮಾದರಿಗಳನ್ನು ಪ್ರಯೋಗಾಲಯಕ್ಕೆ ಕಳುಹಿಸಲಾಗಿದೆ. ಆರೋಪಿಗಳು ಅವುಗಳನ್ನು ಕಾಲೇಜು ವಿದ್ಯಾರ್ಥಿಗಳು ಮತ್ತು ಯುವ ಕಾರ್ಮಿಕರಿಗೆ ಮಾರಾಟ ಮಾಡುತ್ತಿದ್ದರು. ಸಾಗಣೆದಾರರ ಜಾಲವನ್ನು ಭೇದಿಸಲು ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಮುಂದಿನ ತನಿಖೆ ನಡೆಯುತ್ತಿದೆ.

LEAVE A REPLY

Please enter your comment!
Please enter your name here