ಹೊಸದಿಲ್ಲಿ: ಕರ್ನಾಟಕ ಪ್ರದೇಶ ಯುವ ಕಾಂಗ್ರೆಸ್ ಕಾರ್ಯಾಧ್ಯಕ್ಷರಾಗಿ ಮಂಜುನಾಥ್ ಎಚ್.ಎಸ್. ಆಯ್ಕೆಯಾಗಿದ್ದಾರೆ. ವಿವಿಧ ರಾಜ್ಯಗಳ ಯುವ ಕಾಂಗ್ರೆಸ್ ಪದಾಧಿಕಾರಿಗಳ ಪಟ್ಟಿಯನ್ನು ಅಧ್ಯಕ್ಷ ಬಿ.ವಿ ಶ್ರೀನಿವಾಸ್ ಅವರು ಪ್ರಕಟಿಸಿದ್ದಾರೆ.
2024ರ ಲೋಕಸಭಾ ಚುನಾವಣೆಗೆ ಸನ್ನಿಹಿತವಾಗುತ್ತಿದ್ದಂತೆಯೇ, ಪಕ್ಷ ಸಂಘಟನೆಯನ್ನು ಬಲಪಡಿಸುವ ನಿಟ್ಟಿನಲ್ಲಿ ಕಾಂಗ್ರೆಸ್ ಮುಂದಾಗಿದೆ.

ಮಹಾರಾಷ್ಟ್ರ ಪ್ರದೇಶ ಯುವ ಕಾಂಗ್ರೆಸ್ ಅಧ್ಯಕ್ಷರಾಗಿ ಅಖಿಲೇಶ್ ಯಾದವ್ ಅವರನ್ನು ಆಯ್ಕೆ ಮಾಡಲಾಗಿದ್ದು, ತ್ರಿಪುರಾ ಘಟಕದ ಅಧ್ಯಕ್ಷರಾಗಿ ನೀಲ್ ಕಮಲ್ ಸಹಾ, ಕಾರ್ಯಾಧ್ಯಕ್ಷರಾಗಿ ರಾಹುಲ್ ಸಮದ್ದರ್ ಆಯ್ಕೆಯಾಗಿದ್ದಾರೆ.
ಹಿಮಾಚಲ ಪ್ರದೇಶ,ಮಹಾರಾಷ್ಟ್ರ, ಅಂಡಮಾನ್ ನಿಕೋಬಾರ್, ಗೋವಾ ಮತ್ತು ದಿಲ್ಲಿ ಘಟಕಗಳ ಕಾರ್ಯಾಧ್ಯಕ್ಷರಾಗಿ ಪ್ರದೀಪ್ ಸೂರ್ಯ, ಸುಫಿಯಾನ್ ಮೊಹ್ಸಿನ್ ಹೈದರ್, ಅಲ್ಸು ಇಳಯರಾಜ, ಮಹೇಶ್ ನಾಡಾರ್, ಶುಭಮ್ ಶರ್ಮ ಅವರು ಅನುಕ್ರಮವಾಗಿ ಆಯ್ಕೆಯಾಗಿದ್ದಾರೆ.