Home ಆರೋಗ್ಯ Influenza panel test: ರಾಜ್ಯದಲ್ಲಿ ಇನ್‌ಫ್ಲುಯೆಂಜಾ ಪ್ಯಾನಲ್ ಪರೀಕ್ಷೆಗೆ ಖಾಸಗಿ ಲ್ಯಾಬ್‌ಗಳಲ್ಲಿ ಗರಿಷ್ಟ ಶುಲ್ಕ ₹1,700...

Influenza panel test: ರಾಜ್ಯದಲ್ಲಿ ಇನ್‌ಫ್ಲುಯೆಂಜಾ ಪ್ಯಾನಲ್ ಪರೀಕ್ಷೆಗೆ ಖಾಸಗಿ ಲ್ಯಾಬ್‌ಗಳಲ್ಲಿ ಗರಿಷ್ಟ ಶುಲ್ಕ ₹1,700 ನಿಗದಿ

48
0
Covid

ಬೆಂಗಳೂರು: ಸಾರ್ವಜನಿಕ ಆರೋಗ್ಯದ ದೃಷ್ಟಿಯಿಂದ ಇನ್‌ಫ್ಲುಯೆಂಜಾ ಹಾಗೂ ಸೀಸನಲ್ ವೈರಲ್ ಸೋಂಕುಗಳ ಪತ್ತೆಗಾಗಿ ರಾಜ್ಯ ಸರ್ಕಾರ ಮಹತ್ವದ ನಿರ್ಧಾರ ಕೈಗೊಂಡಿದ್ದು, ಖಾಸಗಿ ಪ್ರಯೋಗಶಾಲೆಗಳಲ್ಲಿ ಇನ್‌ಫ್ಲುಯೆಂಜಾ ಪ್ಯಾನಲ್ ಪರೀಕ್ಷೆಗೆ ಗರಿಷ್ಠ ₹1,700 ಮಾತ್ರ ಶುಲ್ಕ ವಿಧಿಸಬಹುದೆಂದು ನಿಗದಿ ಮಾಡಲಾಗಿದೆ.

ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಸರ್ಕಾರದ ಆದೇಶ ಸಂಖ್ಯೆ 287, ದಿನಾಂಕ 24.07.2025ರಂತೆ, ಎಲ್ಲಾ ಸರ್ಕಾರಿ ಹಾಗೂ ಖಾಸಗಿ ವೈದ್ಯಕೀಯ ಕಾಲೇಜುಗಳು, ಜಿಲ್ಲಾಸ್ಪತ್ರೆಗಳು ಮತ್ತು ಆರೋಗ್ಯ ಕೇಂದ್ರಗಳು ಈ ನಿಗದಿತ ದರದಲ್ಲಿ ಪರೀಕ್ಷೆ ಮಾಡಿಸಲು ಸಂಬಂಧಪಟ್ಟ ಖಾಸಗಿ ಲ್ಯಾಬ್‌ಗಳಿಗೆ ರೆಫರ್ ಮಾಡಬೇಕು ಎಂದು ಸೂಚನೆ ನೀಡಲಾಗಿದೆ.

ಈಗೂ ಮುನ್ನ ಖಾಸಗಿ ಲ್ಯಾಬ್‌ಗಳು ಈ ಪರೀಕ್ಷೆಗೆ ₹8,000 ರಿಂದ ₹10,000 ವರೆಗೆ ವಿಧಿಸುತ್ತಿದ್ದ ಬಗ್ಗೆ ವರದಿಯಾಗಿತ್ತು. ಈಗ ನಿಗದಿಪಡಿಸಲಾದ ₹1,700 ಗರಿಷ್ಠ ದರದಿಂದ ಸಾರ್ವಜನಿಕರಿಗೆ ಖರ್ಚುಬಾರದ ಪರೀಕ್ಷೆ ಲಭ್ಯವಾಗಲಿದೆ.

Karnataka Government Caps Private Lab Rates for Influenza Panel Tests at ₹1,700 for Suspected Cases
Karnataka Government Caps Private Lab Rates for Influenza Panel Tests at ₹1,700 for Suspected Cases

ಇನ್‌ಫ್ಲುಯೆಂಜಾ ಪ್ಯಾನಲ್ ಪರೀಕ್ಷೆ ಹಲವು ಉಸಿರಾಟದ ವೈರಸ್‌ಗಳನ್ನು ಪತ್ತೆಹಚ್ಚುವಲ್ಲಿ ಸಹಾಯ ಮಾಡುತ್ತದೆ. ಇವುಗಳನ್ನು ಸಮುದಾಯ ಮಟ್ಟದಲ್ಲಿ ಪತ್ತೆಹಚ್ಚಲು ಮತ್ತು ತುರ್ತು ನಿರ್ವಹಣೆಗೆ ಬಳಸಲಾಗುತ್ತದೆ. ಎಲ್ಲಾ SARI (Severe Acute Respiratory Infection) ಮತ್ತು ILI (Influenza Like Illness) ಪ್ರಕರಣಗಳ ವಿವರವನ್ನು HHIP ಪೋರ್ಟಲ್‌ನಲ್ಲಿ SRF ID ಸಹಿತ ಅಪ್‌ಲೋಡ್ ಮಾಡಬೇಕೆಂದು ಆರೋಗ್ಯ ಸಂಸ್ಥೆಗಳಿಗೆ ಸೂಚನೆ ನೀಡಲಾಗಿದೆ.

Also Read: Karnataka Government Caps Private Lab Rates for Influenza Panel Tests at ₹1,700 for Suspected Cases

ಜಿಲ್ಲಾ ಆರೋಗ್ಯಾಧಿಕಾರಿಗಳು, ನಿಗಾವಹಣಾಧಿಕಾರಿಗಳು, ವೈದ್ಯಕೀಯ ಕಾಲೇಜುಗಳ ಪ್ರಾಂಶುಪಾಲರು ಮತ್ತು ಆಸ್ಪತ್ರೆಗಳ ಅಧಿಕೃತರು ಈ ಸೂಚನೆಗಳನ್ನು ಕಟ್ಟುನಿಟ್ಟಾಗಿ ಅನುಸರಿಸಬೇಕೆಂದು ಆದೇಶದಲ್ಲಿ ತಿಳಿಸಲಾಗಿದೆ.

ಈ ಕ್ರಮದ ಮೂಲಕ ಸಾರ್ವಜನಿಕರಿಗೆ ಸುಲಭ ಹಾಗೂ ಕಡಿಮೆ ವೆಚ್ಚದ ಇನ್‌ಫ್ಲುಯೆಂಜಾ ಪರೀಕ್ಷೆ ಲಭ್ಯವಾಗುವ ಜೊತೆಗೆ ರಾಜ್ಯದಲ್ಲಿ ಆರೋಗ್ಯ ನಿಗಾವಹಿಕೆ ವ್ಯವಸ್ಥೆ ಮತ್ತಷ್ಟು ಬಲವಾಗಲಿದೆ.

LEAVE A REPLY

Please enter your comment!
Please enter your name here