Home Uncategorized MCD exit polls 2022: ಗುಜರಾತ್, ಹಿಮಾಚಲದಲ್ಲಿ ಗೆಲುವಿನ ವಿಶ್ವಾದಲ್ಲಿರುವ ಬಿಜೆಪಿಗೆ ದಿಲ್ಲಿಯಲ್ಲಿ AAP...

MCD exit polls 2022: ಗುಜರಾತ್, ಹಿಮಾಚಲದಲ್ಲಿ ಗೆಲುವಿನ ವಿಶ್ವಾದಲ್ಲಿರುವ ಬಿಜೆಪಿಗೆ ದಿಲ್ಲಿಯಲ್ಲಿ AAP ಶಾಕ್

19
0

ನವದೆಹಲಿ: ಗುಜರಾತ್ ಹಾಗೂ ಹಿಮಾಚಲ ಪ್ರದೇಶ ವಿಧಾನಸಭಾ ಚುನಾವಣೆಯ ಚುನಾವಣೋತ್ತರ ಸಮೀಕ್ಷೆಗಳು(Gujarat And himachal pradesh Exit Poll Result 2022)   ಹೊರಬಿದ್ದಿವೆ. ವಿವಿಧ ವಾಹಿನಿಗಳ ಈ ಮತದಾನೋತ್ತರ ಸಮೀಕ್ಷೆಗಳ ಪ್ರಕಾರ ಗುಜರಾತ್ ಹಾಗೂ ಹಿಮಾಚಲ ಪ್ರದೇಶದಲ್ಲಿ ಮತ್ತೊಮ್ಮೆ ಬಿಜೆಪಿ(BJP) ಅಧಿಕಾರದ ಗದ್ದುಗೆ ಹಿಡಿಯಲಿದೆ ಎಂದು ಅಂದಾಜಿಸುವೆ. ಇದರ ಮಧ್ಯೆ ದೆಹಲಿ ಮಹಾನಗರ ಪಾಲಿಕೆ ಚುನಾವಣೆಯಲ್ಲಿ(Delhi civic polls) ಬಿಜೆಪಿ ಹಾಗೂ ಕಾಂಗ್ರೆಸ್​​ಗೆ ಎಎಪಿ ಮಣ್ಣುಮುಕ್ಕಿಸಲಿದೆ ಎಂದು ಎಕ್ಸಿಟ್​ ಪೋಲ್​ಗಳು (MCD elections exit polls )ತಿಳಿಸಿವೆ.

ಇದನ್ನೂ ಓದಿ: Gujarat Exit Poll 2022 ಗುಜರಾತ್‌ನಲ್ಲಿ ಮತ್ತೆ ಕೇಸರಿ ಬಾವುಟ ಹಾರಾಡೋದು ಫಿಕ್ಸ್, ಸಮೀಕ್ಷೆಯಲ್ಲಿ ಯಾವ ಪಕ್ಷಕ್ಕೆ ಎಷ್ಟು ಸ್ಥಾನ?

ಹೌದು.. ದೆಹಲಿ ಮಹಾನಗರ ಪಾಲಿಕೆ ಚುನಾವಣೆಯಲ್ಲಿ ಆಮ್ ಆದ್ಮಿ ಪಾರ್ಟಿ ಅಧಿಕಾರಕ್ಕೆ ಏರಲಿದೆ ಎಂದು ಸಮೀಕ್ಷೆಗಳು ಹೇಳುತ್ತಿವೆ. ಸದ್ಯ ದೆಹಲಿ ಮಹಾನಗರ ಪಾಲಿಕೆಯಲ್ಲಿ ಬಿಜೆಪಿ ಅಧಿಕಾರದಲ್ಲಿದೆ. ದೆಹಲಿ ಆಳುತ್ತಿರುವ ಆರವಿಂದ್ ಕೇಜ್ರಿವಾಲ್ ನೇತೃತ್ವದ ಆಪ್, ಇದೀಗ ಮಹಾನಗರ ಪಾಲಿಕೆಯನ್ನು ಕೈವಶ ಮಾಡಲಿದೆ ಎಂದು ಚುನಾವಣೆ ಸಮೀಕ್ಷೆಗಳು ಭವಿಷ್ಯ ನುಡಿದಿವೆ.

ದೆಹಲಿ ಮಹಾನಗರ ಪಾಲಿಗೆ ಚುನಾವಣೆಯ ಪೋಲ್ ಆಫ್ ಎಕ್ಸಿಟ್ ಪೋಲ್ಸ್ ನಲ್ಲಿ ಆಪ್ ಭರ್ಜರಿ ಬಹುಮತ ಸಾಧಿಸಲಿದೆ ಎನ್ನಲಾಗಿದೆ. ಒಟ್ಟು 250 ವಾರ್ಡ್‌ಗಳಲ್ಲಿ ಬಹುಮತಕ್ಕೆ 126 ಸ್ಥಾನಗಳ ಅಗತ್ಯವಿದೆ. ಎಕ್ಸಿಟ್ ಪೋಲ್‌ಗಳು ಆಪ್ 155 ಸ್ಥಾನಗಳಲ್ಲಿ ಗೆದ್ದು ಅಧಿಕಾರ ಹಿಡಿಯುತ್ತದೆ ಎಂದು ಚುನಾವಣೋತ್ತರ ಸಮೀಕ್ಷೆಗಳು ಅಂದಾಜಿಸಿವೆ.

ಇದನ್ನೂ ಓದಿ: Himachal Pradesh Exit Poll 2022: ಸರ್ವೆಯಲ್ಲಿ ಬಹುತೇಕ ಹಿಮಾಚಲ ಪ್ರದೇಶದಲ್ಲಿ ಬಿಜೆಪಿಯೇ ಅಧಿಕಾರಕ್ಕೆ

ದೆಹಲಿಯಲ್ಲಿ ಅಧಿಕಾರಕ್ಕೆ ಬಂದ ಆಮ್ ಆದ್ಮಿ ಪಾರ್ಟಿ ಇದೀಗ ನಿಧನಾವಾಗಿ ದೇಶದಲ್ಲಿ ಇತರ ರಾಜ್ಯಗಳಲ್ಲಿ ಅಧಿಕಾರಕ್ಕೆ ಬರುತ್ತಿದೆ. ಇದೀಗ ದೆಹಲಿಯ ಮಹಾನಗರ ಪಾಲಿಕೆಯನ್ನೂ ಕೈವಶ ಮಾಡಿಕೊಳ್ಳುವ ಸೂಚನೆಯನ್ನು ಸಮೀಕ್ಷೆಗಳು ನೀಡುತ್ತಿದೆ. ಆದರೆ ಕಾಂಗ್ರೆಸ್ ಕೇವಲ 3 ರಿಂದ 7 ವಾರ್ಡ್‌ಗಳಲ್ಲಿ ಸ್ಥಾನ ಉಳಿಸಿಕೊಳ್ಳಲಿದೆ ಎಂದರೆ, ಇತರರು 5 ರಿಂದ 9 ವಾರ್ಡ್‌ಗಳಲ್ಲಿ ಸ್ಥಾನ ಉಳಿಸಿಕೊಳ್ಳಲಿದೆ ಎಂದಿದೆ.

ಇಂಡಿಯಾ ಟುಡೆ ಸರ್ವೆ

250 ವಾರ್ಡ್‌ಗಳ ಮುನಿಸಿಪಲ್ ಕಾರ್ಪೊರೇಷನ್ ಚುನಾವಣೆಯಲ್ಲಿ ಆಮ್ ಆದ್ಮಿ ಪಕ್ಷ 149- 171 ಸೀಟುಗಳಲ್ಲಿ ಗೆಲ್ಲುವ ಸಾಧ್ಯತೆ ಇದೆ ಎಂದು ಇಂಡಿಯಾ ಟುಡೆ- ಆಕ್ಸಿಸ್ ಮೈ ಇಂಡಿಯಾ ನಡೆಸಿರುವ ಸಮೀಕ್ಷೆ ಹೇಳಿದೆ. ಆಡಳಿತಾರೂಢ ಬಿಜೆಪಿ ಸೀಟುಗಳು 69- 91 ವಾರ್ಡ್‌ಗಳಿಗೆ ಕುಸಿಯಲಿದೆ ಎಂದು ಹೇಳಿದೆ. ಕಾಂಗ್ರೆಸ್ 3 ರಿಂದ 7 ಹಾಗೂ ಇತರರು 5- 9 ವಾರ್ಡ್‌ಗಳಲ್ಲಿ ಗೆಲ್ಲಬಹುದು.

ಟೈಮ್ಸ್‌ ನೌ ಸಮೀಕ್ಷೆ

ಇನ್ನೂ ಟೈಮ್ಸ್‌ ನೌ- ಇಟಿಜಿ ಸಮೀಕ್ಷೆ ಕೂಡ ಎಎಪಿ ಪಕ್ಷ ಗೆಲ್ಲಲಿದೆ ಎಂದು ಅಂದಾಜಿಸಿದೆ. ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರ ಎಎಪಿ ಪಕ್ಷವು 146- 156 ವಾರ್ಡ್‌ಗಳಲ್ಲಿ ಗೆಲುವು ಸಾಧಿಸಲಿದೆ ಎಂದು ಟೈಮ್ಸ್ ನೌ ಹೇಳಿದೆ. ಬಿಜೆಪಿ 84- 94 ವಾರ್ಡ್‌ಗಳಲ್ಲಿ ಗೆಲ್ಲಲಿದೆ ಎಂದು ತಿಳಿಸಿದೆ. ಇನ್ನು ಕಾಂಗ್ರೆಸ್ 6-10 ವಾರ್ಡ್‌ಗಳು ಹಾಗೂ ಇತರರು 0-4 ಸೀಟುಗಳಲ್ಲಿ ಗೆಲ್ಲುವ ಸಾಧ್ಯತೆ ಇದೆ ಎನ್ನಲಾಗಿದೆ.

ಒಟ್ಟು 250 ವಾರ್ಡ್‌ಗಳಿಗೆ ಚುನಾವಣೆ ನಡೆದಿತ್ತು. ಚುನಾವಣೆಯಲ್ಲಿ 1,349 ಅಭ್ಯರ್ಥಿಗಳು ಸ್ಪರ್ಧಿಸಿದ್ದರು. ಒಟ್ಟು 13,638 ಮತಗಟ್ಟೆಗಳಲ್ಲಿ 1.45 ಕೋಟಿ ಮತದಾರರು ಹಕ್ಕು ಚಲಾಯಿಸಬೇಕಿತ್ತು. ಆದರೆ ಶೇ.50 ಮತದಾರರು ಮತ ಚಲಾಯಿಸಿದ್ದಾರೆ. 2017 ರಲ್ಲಿ ಬಿಜೆಪಿ 181 ಸ್ಥಾನಗಳಲ್ಲಿ ಗೆದ್ದಿದ್ದರೆ ಆಮ್‌ಆದ್ಮಿ ಪಕ್ಷ 48 ಹಾಗೂ ಕಾಂಗ್ರೆಸ್‌ 27 ಸ್ಥಾನಗಳಲ್ಲಿ ಗೆದ್ದಿದ್ದವು.

ಈ ಬಾರಿ ಎಎಪಿ, ಬಿಜೆಪಿ ಹಾಗೂ ಕಾಂಗ್ರೆಸ್ ಎಷ್ಟು ಸ್ಥಾನಗಳಲ್ಲಿ ಗೆಲುವು ಸಾಧಿಸಲಿವೆ ಎನ್ನುವುದು ಬುಧವಾರ (ಡಿಸೆಂಬರ್ 7) ಪ್ರಕಟವಾಗು ಫಲಿತಾಂಶದ ಬಳಿಕ ತಿಳಿಯಲಿದೆ.

ಇನ್ನಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ

LEAVE A REPLY

Please enter your comment!
Please enter your name here