ಮಂಗಳೂರು : ಮುಸ್ಲಿಂ ಶಿಕ್ಷಣ ಸಂಸ್ಥೆಗಳ ಒಕ್ಕೂಟ ದ.ಕ. ಹಾಗೂ ಉಡುಪಿ ಜಿಲ್ಲೆ (MEIF ) ವತಿಯಿಂದ ಉಡುಪಿ ಮತ್ತು ದ.ಕ. ಜಿಲ್ಲಾ ಮಟ್ಟದ ಅಂತರ್ ಶಾಲಾ ಪ್ರತಿಭಾ ಸ್ಪರ್ಧೆ ” Talent Hunt -2023″ ಉದ್ಘಾಟನಾ ಕಾರ್ಯಕ್ರಮ ಪ್ರೆಸ್ಟೀಜ್ ಶಾಲೆ ಜೆಪ್ಪಿನಮೊಗರುನಲ್ಲಿ ಮಂಗಳವಾರ ನಡೆಯಿತು.
ಅಂಜುಮನ್ ವಿದ್ಯಾಸಂಸ್ಥೆ ಜೋಕಟ್ಟೆ ವಿದ್ಯಾರ್ಥಿಗಳ ಪ್ರಾರ್ಥನೆಯೊಂದಿಗೆ ಕಾರ್ಯಕ್ರಮ ಆರಂಭಗೊಂಡಿತು. ಕಾರ್ಯಕ್ರಮದ ಉದ್ಘಾಟನೆಯನ್ನು ಪ್ರೆಸ್ಟೀಜ್ ಶಾಲೆ ಜೆಪ್ಪಿನಮೊಗರು ಚೇರ್ಮನ್ ಹೈದರ್ ಅಲಿ ನೆರವೇರಿಸಿದರು.
ಮುಖ್ಯ ಅತಿಥಿಗಳಾಗಿ ಜಿಲ್ಲಾ ವಾರ್ತಾಧಿಕಾರಿ ಖಾದರ್ ಶಾಹ್ ಭಾಗವಹಿಸಿದ್ದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು MEIF ಅಧ್ಯಕ್ಷರಾದ ಮೂಸಬ್ಬ ಪಿ. ಬ್ಯಾರಿ ಜೋಕಟ್ಟೆ ವಹಿಸಿದ್ದರು. ಕನ್ವೀನರ್ ಪರ್ವೇಝ್ ಅಲಿ ಸ್ವಾಗತಿಸಿದರು. MEIF ಪ್ರೋಗ್ರಾಮ್ ಕಾರ್ಯದರ್ಶಿ ಮುಹಮ್ಮದ್ ಶಾರಿಕ್ ಪ್ರತಿಭಾ ಸ್ಪರ್ಧೆಗಳನ್ನು ಸಂಯೋಜಿಸಿದರು.
ಈ ಕಾರ್ಯಕ್ರಮದಲ್ಲಿ ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಗಳ ಒಟ್ಟು 54 ವಿದ್ಯಾ ಸಂಸ್ಥೆಗಳ 500 ವಿದ್ಯಾರ್ಥಿಗಳು ಭಾಗವಹಿಸಿದ್ದರು. ಚಿತ್ರಕಲಾ ಸ್ಪರ್ಧೆ, ಪಿಕ್ ಆ್ಯಂಡ್ ಸ್ಪೀಕ್ ಸ್ಪರ್ಧೆ, ಪ್ರಬಂಧ ಸ್ಪರ್ಧೆ, ಕಿರಾಅತ್ ಸ್ಪರ್ಧೆ, ಸೈನ್ಸ್ ಮೊಡೆಲ್ ಸ್ಪರ್ಧೆ ಮತ್ತು ಅತ್ಯಂತ ಮನರಂಜನೆ ರೂಪದಲ್ಲಿ ಲಯನ್ಸ್ ಜಿಲ್ಲಾ ಮಾಜಿ ರಾಜ್ಯಪಾಲ M B ಸದಾಶಿವ ಸುಳ್ಯ ನೇತೃತ್ವದ ತಾಂತ್ರಿಕ ತಂಡ ಮುನ್ನಡೆಸಿದ ‘ಕೌನ್ ಬನೆಗಾ MEIF ಚಾಂಪ್’ ಕ್ವಿಝ್ ಸ್ಪರ್ಧೆಯು ನಡೆಯಿತು.
ಎಲ್ಲಾ ಸ್ಪರ್ಧೆಗಳು ಅತ್ಯಂತ ಆಕರ್ಷಣೀಯವಾಗಿ ಮೂಡಿಬಂದವು. ಸ್ಪರ್ಧೆಗಳ ನಂತರ ಸಮಾರೋಪ ಸಮಾರಂಭ ಜರುಗಿತು. ಮುಖ್ಯ ಅತಿಥಿಗಳಾಗಿ ಮಂಗಳೂರು ಪೊಲೀಸ್ ಉಪ ಆಯುಕ್ತರಾದ ಸಿದ್ದಾರ್ಥ್ ಗೋಯಲ್, ಸುಲ್ತಾನ್ ಗೋಲ್ಡ್ ನ ಮಾಲಕರಾದ ರೌಫ್ ಸುಲ್ತಾನ್ ಭಾಗವಹಿಸಿದ್ದರು. MEIF ಉಪಾಧ್ಯಕ್ಷ ಮಮ್ತಾಝ್ ಅಲಿ ಸ್ವಾಗತಿಸಿ, ಪ್ರಧಾನ ಕಾರ್ಯದರ್ಶಿ ರಿಯಾಝ್ ಅಹ್ಮದ್ ಧನ್ಯವಾದ ಸಲ್ಲಿಸಿದರು. ವಿಜೇತರಿಗೆ ಬಹುಮಾನಗಳನ್ನು ನೀಡಿ ಪುರಸ್ಕರಿಸಲಾಯಿತು.
ವಿಜೇತರ ವಿವರ –
ಚಿತ್ರಕಲೆ :-
ಪ್ರಥಮ :- ಸಾರಾ ತಹಾನಿ (ಸಹರಾ ಆಂಗ್ಲ ಮಾಧ್ಯಮ ಅಡ್ಡೂರು)
ದ್ವಿತೀಯ :- ಶಾಝಿನ್ (ದಾರುನ್ನೂರ್ ಶಾಲೆ ಕಾಶಿಪಟ್ನ)
ತೃತೀಯ :- ರಿಫ ಫಾತಿಮಾ (ಈಡನ್ ಗ್ಲೋಬಲ್ ಶಾಲೆ ಬೇಲಂದೂರ್, ಪುತ್ತೂರು)
ಪಿಕ್ ಆ್ಯಂಡ್ ಸ್ಪೀಕ್ ಸ್ಪರ್ಧೆ
ಪ್ರಥಮ :- ಫಾತಿಮಾ ಅನ್ಸಂ (ಸಿರಾತ್ ಸ್ಕೂಲ್ ಪಡೀಲ್)
ದ್ವಿತೀಯ :- ಮುಹಮ್ಮದ್ ಅಬೂಬಕ್ಕರ್ ಶಮ್ಮಾಝ್ (ತಖ್ವಾ ಪಬ್ಲಿಕ್ ಸ್ಕೂಲ್ ಪಂಪ್ವೆಲ್)
ತೃತೀಯ :- ಶೇಕ್ ಇಂಶ ಅರಾ (ಕ್ರೆಸೆಂಟ್ ಇಂಟರ್ನ್ಯಾಷನಲ್ ಸ್ಕೂಲ್ ಕಾಪು)
ಪ್ರಬಂಧ ಸ್ಪರ್ಧೆ
ಪ್ರಥಮ :- ಖದೀಜ ಅನ್ಸ್ವಿಫ (ತೌಹೀದ್ ಸ್ಕೂಲ್ ಬಂಟ್ವಾಳ್)
ದ್ವಿತೀಯ :- ಆಯಿಷತುಲ್ ತಾಫ್ಸೀನ (ನೊಬೆಲ್ ಸ್ಸ್ಕೂಲ್ ಕುಂಜತ್ ಬೈಲ್)
ತೃತೀಯ :- ಹಫ್ಸಾ ಇರ್ಷಾದ್ (ಕ್ರೆಸೆಂಟ್ ಇಂಟರ್ನ್ಯಾಷನಲ್ ಸ್ಕೂಲ್ ಕಾಪು)
ಕಿರಾಅತ್ ಸ್ಪರ್ಧೆ
ಪ್ರಥಮ :- ಅಬ್ದುಲ್ ರಹಿಮಾನ್ ಶಾಬಾಝ್ (ಬಾಮಿ ಸ್ಕೂಲ್ ಗುರುಪುರ)
ದ್ವಿತೀಯ :- ಸುಬೈಲ್ (ಇಕ್ರ ಅರೇಬಿಕ್ ಸ್ಕೂಲ್ ಕಂಕನಾಡಿ)
ತೃತೀಯ :- ಹಸನ್ ನಝೀಉಲ್ ಹಕ್ (ಅಲ್ ಫರ್ಖಾನ್ ಸ್ಕೂಲ್ ಮೂಡಬಿದ್ರೆ)
ಸೈನ್ಸ್ ಮೊಡೆಲ್ ಸ್ಪರ್ಧೆ:-
ಪ್ರಥಮ :- ಅನ್ಸಾರ್ ಸ್ಕೂಲ್ ಬಜ್ಪೆ
ದ್ವಿತೀಯ :- ಸಿರಾತ್ ಸ್ಕೂಲ್ ಪಡೀಲ್
ತೃತೀಯ :- ಹಝ್ರತ್ ಅಂಗ್ಲ ಮಾಧ್ಯಮ ಸ್ಕೂಲ್ ಅಲೇಕಲ, ಉಳ್ಳಾಲ.
ಕೌನ್ ಬನೆಗ MEIF ಚಾಂಪ್’ ಕ್ವಿಝ್ ಸ್ಪರ್ಧೆ
ಪ್ರಥಮ :- ತೌಹೀದ್ ಸ್ಕೂಲ್ ಬಂಟ್ವಾಳ್
ದ್ವಿತೀಯ :- ಎಂ. ಸಿ. ಟಿ ಸ್ಕೂಲ್ ಮುಲ್ಕಿ
ತೃತೀಯ :- ಜೆಮ್ ಸ್ಕೂಲ್ ಗೋಳ್ತಮಜಲು, ಬಂಟ್ವಾಳ
ಕಾರ್ಯಕ್ರಮದ ಪ್ರಾಯೋಜಕತ್ವವನ್ನು ಬಿ. ಎಂ. ಶರೀಫ್ ಮಾಲಕತ್ವದ ವೈಟ್ ಸ್ಟೋನ್ ಕಂಪನಿ ಸೌದಿ ಅರೇಬಿಯಾ ವಹಿಸಿತ್ತು. ಉಪಾಧ್ಯಕ್ಷ ಮುಸ್ತಫಾ ಸುಳ್ಯ, ಶಾಬಿಹ್ ಖಾಝಿ, ಕಾರ್ಯದರ್ಶಿ ಅನ್ವರ್ ಗೂಡಿನಬಳಿ, ಸಮಿತಿ ಸದಸ್ಯರು ಶೇಕ್ ರಹ್ಮತುಲ್ಲಾಹ್, ಹೈದರ್ ಮಾರ್ದಾಲ, ಅಬ್ದುಲ್ ರಹಿಮಾನ್ ಹೀರಾ, ಅಬ್ದುಲ್ ರಝಾಕ್ ಗೋಳ್ತಮಜಲು, B A ಇಕ್ಬಾಲ್ , ಬಿ ಎ. ನಝೀರ್ , ಶಂಸುದ್ದೀನ್ ಕ್ರೆಸೆಂಟ್, ಬಶೀರ್ ಕುಂಬ್ರ, ಶಹಾಂ ಅಲ್ ಫರ್ಖಾನ್, ಸಿರಾಜ್ ಮನೆಗರ ಕಾರ್ಯಕ್ರಮ ದಲ್ಲಿ ಉಪಸ್ಥಿತರಿದ್ದರು. ಹೀರಾ ಬಬ್ಬುಕಟ್ಟೆ ಶಾಲಾ ಶಿಕ್ಷಕಿ ಸಿನೋರಿಯಾ ಕಾರ್ಯಕ್ರಮ ನಿರೂಪಿಸಿದರು.