ಸಾಮಾನ್ಯವಾಗಿ ಎಲ್ಲಾರಿಗೂ ಬೆಳಿಗ್ಗೆ ತಿಂಡಿ ಏನು ಮಾಡೋದು?, ಪ್ರತಿದಿನ ಮಾಡಿದ್ದೇ ಮಾಡಿದ್ರೆ ಮಕ್ಕಳಿಗೆ ಇಷ್ಟವಾಗೊಲ್ಲ, ಕರಿದ ತಿಂಡಿ ಆರೋಗ್ಯಕ್ಕೆ ಹಾಳುʼ ಹೀಗೆ ಪ್ರತಿದಿನ ಬೆಳಿಗ್ಗೆ ಎದ್ದಾಕ್ಷಣ ತಿಂಡಿ ಏನು ಮಾಡೋದು ಎನ್ನುವುದೇ ಹಲವು ಗೃಹಿಣಿಯರನ್ನು ಕಾಡುವ ಸಮಸ್ಯೆ. ಅದಕ್ಕೆ ಇಲ್ಲಿದೆ ನೋಡಿ ಸೂಪರ್ ತಿಂಡಿ..
ವೆಜಿಟೇಬಲ್ ಪಲಾವ್ಗಿಂತಲೂ ಮೆಂತೆ ರೈಸ್ ಉತ್ತಮ. ಇದು ಆರೋಗ್ಯಕ್ಕೂ ಬೆಸ್ಟ್, ಸ್ವಲ್ಪ ತುಪ್ಪ ಜಾಸ್ತಿ ಹಾಕಿ ಮಾಡಿದ್ರೆ ಮಕ್ಕಳು ತರಕಾರು ತೆಗೆಯದೇ ತಿನ್ನುತ್ತವೆ. ಇದನ್ನು ಉಪಾಹಾರ ಹಾಗೂ ಊಟ ಎರಡೂ ಸಮಯದಲ್ಲಿ ಸೇವಿಸಲು ಸೂಕ್ತ. ಕಡಿಮೆ ಸಾಮಗ್ರಿ ಹಾಗೂ ತಯಾರಿಸಲು ಸಮಯವೂ ಕಡಿಮೆ ಸಾಕು.
ಬೇಕಾಗುವ ಪದಾರ್ಥಗಳು: ಮೆಂತ್ಯ ಸೊಪ್ಪು 1 ಕಟ್ಟು, ಅಕ್ಕಿ 1 ಲೋಟ, 3-4 ಟೊಮೆಟೊ, ಮೆಣಸಿನಕಾಯಿ – 2 ಕೆಂಪು, ಹಸಿಬಟಾಣಿ – ಸ್ವಲ್ಪ, ಲವಂಗ – 4, ಏಲಕ್ಕಿ – 2, ತುಪ್ಪ – 2 ಚಮಚ, ಈರುಳ್ಳಿ – 2, ಅರಿಶಿನ ಪುಡಿ – ಅರ್ಧ ಚಮಚ, ಬೆಳ್ಳುಳ್ಳಿ – 10 ರಿಂದ 12, ಶುಂಠಿ, ಪುದಿನಾ – ಸ್ವಲ್ಪ, ಕೊತ್ತಂಬರಿ ಸೊಪ್ಪು – ಸ್ವಲ್ಪ
ತಯಾರಿಸುವ ವಿಧಾನ: ಮೊದಲು ಮೆಂತ್ಯೆ ಸೊಪ್ಪನ್ನು ಚೆನ್ನಾಗಿ ತೊಳೆದು ಇರಿಸಿಕೊಳ್ಳಿ. ಈರುಳ್ಳಿ ಮತ್ತು ಟೊಮೆಟೊ ಹೆಚ್ಚಿಟ್ಟುಕೊಳ್ಳಿ. ಈಗ ಶುಂಠಿ, ಕೊತ್ತಂಬರಿ, ಪುದಿನಾ ಮತ್ತು ಹಸಿ ಮೆಣಸಿನಕಾಯಿ ಮಿಕ್ಸಿಗೆ ಜಾರಿಗೆ ಹಾಕಿ ನುಣ್ಣಗೆ ರುಬ್ಬಿ ಪೇಸ್ಟ್ ತಯಾರಿಸಿಕೊಳ್ಳಿ. ಕುಕ್ಕರ್ ಬಿಸಿ ಮಾಡಿ 2 ಚಮಚ ತುಪ್ಪ ಹಾಕಿ (ಎಣ್ಣೆ ಬಳಸಬಹುದು, ತುಪ್ಪ ಬಳಸಿದರೆ ರುಚಿ ಹೆಚ್ಚು). ತುಪ್ಪ ಬಿಸಿಯಾದಾಗ ಲವಂಗ,
ಏಲಕ್ಕಿ, ನಂತರ ಈರುಳ್ಳಿ ಹಾಕಿ 1 ನಿಮಿಷ ಹುರಿಯಿರಿ. ಅದಕ್ಕೆ ರುಬ್ಬಿಕೊಂಡ ಪೇಸ್ಟ್ ಹಾಕಿ ಕೈಯಾಡಿಸಿ. ನಂತರ ಟೊಮೆಟೊ ಸೇರಿಸಿ 2 ರಿಂದ 3 ನಿಮಿಷ ಫ್ರೈ ಮಾಡಿ. ಟೊಮೆಟೊ ಸ್ಮ್ಯಾಶ್ ಆದ ನಂತರ ಅಕ್ಕಿ ಸೇರಿಸಿ ಎಲ್ಲವನ್ನೂ ಮಿಕ್ಸ್ ಮಾಡಿ. ನಂತರ ಹೆಚ್ಚಿಟ್ಟುಕೊಂಡ ಮೆಂತ್ಯೆ ಸೊಪ್ಪು ಸೇರಿಸಿ ಮಿಶ್ರಣ ಮಾಡಿ ಅದಕ್ಕೆ ಅರಿಸಿನ, ರುಚಿಗೆ ತಕ್ಕಷ್ಟು ಉಪ್ಪು, ನೀರು ಸೇರಿಸಿ ಕುಕ್ಕರ್ ಮುಚ್ಚಳ ಮುಚ್ಚಿ 2 ವಿಶಲ್ ಕೂಗಿಸಿ. ಈಗ ನಿಮ್ಮ ಮುಂದೆ ಬಿಸಿ ಬಿಸಿ ಟೇಸ್ಟಿ ಮೆಂತ್ಯೆ ರೈಸ್ ಬಾತ್ ತಿನ್ನಲು ಸಿದ್ಧ.
The post Methi Pulao Recipe: ಬೆಳಗಿನ ಉಪಹಾರಕ್ಕೆ ಮಾಡಿ ಬಿಸಿ ಬಿಸಿ ಮೆಂತ್ಯೆ ಪಲಾವ್..! ಇಲ್ಲಿದೆ ವಿಧಾನ appeared first on Ain Live News.
