ಟೆಲ್ ಅವಿವ್: ಇಸ್ರೇಲ್ ಮತ್ತು ಹಮಾಸ್ ಉಗ್ರರ ನಡುವಿನ ಸಂಘರ್ಷದಲ್ಲಿ ಪ್ಯಾಲೆಸ್ಟೀನ್ ಅನ್ನು ಬೆಂಬಲಿಸಿರುವ ಮಾಜಿ ನೀಲಿ ಚಿತ್ರ ತಾರೆ ಮಿಯಾ ಖಲೀಫಾ ವಿವಾದಕ್ಕೆ ಸಿಲುಕಿದ್ದಾರೆ. ಈ ಕಾರಣಕ್ಕೆ ತಮ್ಮ ಮಹತ್ವದ ಒಪ್ಪಂದಗಳನ್ನು ಕಳೆದುಕೊಂಡಿದ್ದಾರೆ.
ವಯಸ್ಕರ ಸಿನಿಮಾಗಳ ಮೂಲಕ ಜನಪ್ರಿಯರಾಗಿರುವ ಮಿಯಾ ಖಲೀಫಾ, ಇಸ್ರೇಲ್ ಹಾಗೂ ಪ್ಯಾಲೆಸ್ಟೀನ್ ಕುರಿತು ತಮ್ಮ ಅಭಿಪ್ರಾಯ ಹಂಚಿಕೊಂಡಿದ್ದರು. ಇದರಲ್ಲಿ ಅವರು ಪ್ಯಾಲೆಸ್ಟೀನ್ ಪರ ನಿಲುವು ಪ್ರದರ್ಶಿಸಿದ್ದು ಸಾಮಾಜಿಕ ಜಾಲತಾಣದಲ್ಲಿ ಆಕ್ರೋಶಕ್ಕೆ ಕಾರಣವಾಗಿದೆ.
Iphone 15 Bigg Update: ಐಫೋನ್ 15 ಸೀರೀಸ್ ಬಳಕೆದಾರರಿಗೆ ಬಿಗ್ ಅಪೆ ಡೇಟ್: ಏನಂತೀರಾ?!
“ನೀವು ಪ್ಯಾಲೆಸ್ಟೀನ್‌ನ ಸನ್ನಿವೇಶ ನೋಡುವುದು ಸಾಧ್ಯವಾದರೆ ಮತ್ತು ಪ್ಯಾಲೆಸ್ಟೀನ್ ಪರವಾಗಿ ನಿಲ್ಲದೆ ಹೋದರೆ, ನೀವು ತಾರತಮ್ಯದ ತಪ್ಪಾದ ಜಾಗದಲ್ಲಿದ್ದೀರಿ ಎಂದರ್ಥ ಹಾಗೂ ಇತಿಹಾಸವು ಅದನ್ನು ಪ್ರತಿಫಲಿಸುತ್ತದೆ” ಎಂದು ಮಿಯಾ ಖಲೀಫಾ ಇಸ್ರೇಲ್ ಮೇಲೆ ಹಮಾಸ್ ಉಗ್ರರು ದಾಳಿ ನಡೆಸಿದ ಟ್ವೀಟ್ ಮಾಡಿದ್ದರು. ಸಾಮಾಜಿಕ ಜಾಲತಾಣ ಬಳಕೆದಾರರು ಮಿಯಾ ಖಲೀಫಾ ವಿರುದ್ಧ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದರು. ಇದು ನಾಚಿಕೆಗೇಡಿನ ಸಂಗತಿ ಎಂದು ಟೀಕಿಸಿದ್ದರು.
“ಇಸ್ರೇಲ್‌ನಲ್ಲಿನ ಪರಿಸ್ಥಿತಿಯನ್ನು ನೀವು ನೋಡುವುದು ಸಾಧ್ಯವಾದರೆ ಮತ್ತು ನಿಮ್ಮ ಧಾರ್ಮಿಕ ಪಕ್ಷಪಾತ ಹಾಗೂ ಧರ್ಮಾಂಧತೆಗೆ ಈಗಲೂ ಕುರುಡಾಗಿದ್ದರೆ, ನೀವು ಪ್ರತಿಯೊಂದರ ತಪ್ಪಾದ ಜಾಗದಲ್ಲಿ ಇದ್ದೀರಿ” ಎಂದು ಅವರದೇ ದಾಟಿಯಲ್ಲಿ ಒಬ್ಬರು ಪ್ರತಿಕ್ರಿಯೆ ನೀಡಿದ್ದರು. ಸಾಮಾಜಿಕ ಜಾಲತಾಣದಲ್ಲಿ ಮಿಯಾ ಖಲೀಫಾ ಪರ- ವಿರೋಧ ಚರ್ಚೆಗಳು ನಡೆಯುತ್ತಿವೆ. ಮಿಯಾ ಜತೆಗಿನ ತಮ್ಮ ಬಿಜಿನೆಸ್ ಒಪ್ಪಂದವನ್ನು ರದ್ದುಗೊಳಿಸಿರುವುದಾಗಿ ಕೆನಡಾದ ಬ್ರಾಡ್‌ಕಾಸ್ಟರ್ ಹಾಗೂ ರೇಡಿಯೋ ನಿರೂಪಕ ಟಾಡ್ ಶಪಿರೋ ಪ್ರಕಟಿಸಿದ್ದಾರೆ.
The post Mia Khalifa: ಇಸ್ರೇಲ್-ಹಮಾಸ್ ಸಂಘರ್ಷ: ಟ್ವೀಟ್ ಮಾಡಿ ಇಕ್ಕಟ್ಟಿಗೆ ಸಿಲುಕಿದ ಮಿಯಾ ಖಲೀಫಾ..! appeared first on Ain Live News.