Home ಬೆಂಗಳೂರು ನಗರ ಮಿಜೋರಾಂ ಹಾಗೂ ಕರ್ನಾಟಕ ರಾಜ್ಯಗಳ ಆಹಾರ ಇಲಾಖೆಯ ಕುರಿತು ಸಚಿವರ ಚರ್ಚ

ಮಿಜೋರಾಂ ಹಾಗೂ ಕರ್ನಾಟಕ ರಾಜ್ಯಗಳ ಆಹಾರ ಇಲಾಖೆಯ ಕುರಿತು ಸಚಿವರ ಚರ್ಚ

6
0

ಬೆಂಗಳೂರು.24 ಮಿಜೋರಾಂ ರಾಜ್ಯದ ಆಹಾರ ನಾಗರಿಕ ಸರಬರಾಜು ಮತ್ತು ಗ್ರಾಹಕ ವ್ಯವಹಾರಗಳ ಸಚಿವರಾದ
ಬಿ.ಲಾಲ್ಚನ್ಜೋವಾ ಅವರು ಇಂದು ಆಹಾರ ನಾಗರಿಕ ಸರಬರಾಜು ಮತ್ತು ಗ್ರಾಹಕ ವ್ಯವಹಾರಗಳ ಸಚಿವರಾದ ಕೆ.ಹೆಚ್. ಮುನಿಯಪ್ಪ ಅವರನ್ನು ಭೇಟಿ ಮಾಡಿ ಆಹಾರ ಇಲಾಖೆಯ ಪ್ರಮುಖ ವಿಷಯಗಳ ಕುರಿತು ಚರ್ಚೆ ನಡೆಸಿದರು.

ರಾಜ್ಯದಲ್ಲಿ ಅಕ್ಕಿ ಸರಬರಾಜು ಹಾಗೂ ರಾಗಿ ,ಗೋದಿಯನ್ನು ಯಾವ ರೀತಿ ಖರೀದಿಯನ್ನು ಮಾಡುತ್ತೇವೆ ಎಂಬ ವಿಷಯಗಳ ಕುರಿತು ಮಿಜೋರಾಂ ಸಚಿವರೊಂದಿಗೆ ಚರ್ಚೆ ನಡೆಸಿದರು.

ಪಡಿತರ ಚೀಟಿಯ ಫಲಾನುಭವಿಗಳಿಗೆ 5ಕೆಜಿ ಅಕ್ಕಿ ಮತ್ತು ಉಳಿದ 5 ಕೆಜಿ ಅಕ್ಕಿ ಬದಲಿಗೆ 170 ರೂಗಳನ್ನು ಡಿಬಿಟಿ ಮೂಲಕ ನೇರವರ್ಗಾವಣೆ ಮಾಡುತ್ತಿದ್ದೇವೆ ಎಂದು ಅಧಿಕಾರಿಗಳು ವಿವರಿಸಿದರು.

ಮಿಜೋರಾಂ ರಾಜ್ಯದಲ್ಲಿ ಅಲ್ಲಿನ ನಾಗರಿಕರಿಗೆ 8 ಕೆಜಿ ಅಕ್ಕಿಯನ್ನು ವಿತರಿಸುತ್ತಿದ್ದೇವೆ ಎಂದು ಸಭೆಯಲ್ಲಿ ಸಚಿವರೊಂದಿಗೆ ಚರ್ಚೆ ನಡೆಸಿದರು.

ಈ ಸಂದರ್ಭದಲ್ಲಿ ಮಿಜೋರಾಂ ರಾಜ್ಯದ ಆಹಾರ ಇಲಾಖೆಯ ಕಾರ್ಯದರ್ಶಿ ಜೋಡಿಂಗ್‌ಪುಯಿ, ರಾಜ್ಯ ಆಹಾರ ಇಲಾಖೆಯ ಕಾರ್ಯದರ್ಶಿ ಟಿ.ಎಚ್. ಎನ್ ಕುಮಾರ್, ಆಯುಕ್ತರಾದ ವಾಸಿರೆಡ್ಡಿ ವಿಜಯಜೋತ್ನ್, ನಿಗಮ ನಿರ್ದೇಶಕ ಚಂದ್ರಕಾಂತ್, ಕಾನೂನು‌ ಮಾಪನ‌ ಇಲಾಖೆಯ ನಿಯಂತ್ರಕರಾದ ಅನಿತಾ ಲಕ್ಷ್ಮೀ, ಹಾಗೂ ಅಧಿಕಾರಿಗಳು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here