ಬೆಂಗಳೂರು:- ಡ್ರಾಪ್ ಪಡೆದು ರ‍್ಯಾಪಿಡೋ ಹುಡುಗನಿಗೆ ಬೆದರಿಸಿ ಹಣ ಸುಲಿಗೆ ಮಾಡಿದ್ದ ಆರೋಪಿಗಳನ್ನು ಬ್ಯಾಡರಹಳ್ಳಿ ಠಾಣಾ ಪೊಲೀಸರು ಅರೆಸ್ಟ್ ಮಾಡಿದ್ದಾರೆ.
ಪ್ರಭಾತ್ ಮತ್ತು ಪುನೀತ್ ಕುಮಾರ್ ಬಂಧಿತ ಆರೋಪಿಗಳು ಎಂದು ತಿಳಿದು ಬಂದಿದೆ. ಉತ್ತರ ಭಾರತದ ದೀನಬಂದು ನಾಯಕ್ ಎಂಬ ಯುವಕ ಬೆಂಗಳೂರಲ್ಲಿ ರ್ಯಾಪಿಡೋ ಬೈಕ್ ನಲ್ಲಿ ಕೆಲಸ ಮಾಡ್ತಿದ್ದ. ಒಮ್ಮೆ ಆರೋಪಿ ಪ್ರಭಾತ್ ರ್ಯಾಪಿಡೋ ಬುಕ್ ಮಾಡಿ ದೀನಬಂದುನಿಂದ ಡ್ರಾಪ್ ತೆಗೆದುಕೊಂಡಿದ್ದ. ಮರುದಿನ ನೇರವಾಗಿ ದೀನಬಂದು ಕರೆ ಮಾಡಿ ಸುಂಕದಕಟ್ಟೆಯಿಂದ ನೆಲಮಂಗಲಕ್ಕೆ ಡ್ರಾಪ್ ಕೊಡಲು ಕೇಳಿದ್ದ. ಅದರಂತೆ ದೀನಬಂಧು ರಾತ್ರಿ 11 ಗಂಟೆ ಸುಮಾರಿಗೆ ನೆಲಮಂಗಲಕ್ಕೆ ಆರೋಪಿಯನ್ನ ಡ್ರಾಪ್ ಮಾಡಿದ್ದ.
ಈ ವೇಳೆ ನೆಲಮಂಗಲದಲ್ಲಿ ತನ್ನ ಸ್ನೇಹಿತನನ್ನು ಆರೋಪಿ ಕರೆಯಿಸಿಕೊಂಡಿದ್ದ. ಬಳಿಕ ಆರೋಪಿಗಳು ದೀನಬಂದು ಬೈಕ್ ಕಸಿದು, ಆಟೋದಲ್ಲಿ ಆತನನ್ನ ತುಮಕೂರು ಕಡೆ ಕರೆದುಕೊಂಡು ಹೋಗಿದ್ರು. ದಾರಿಯುದ್ದಕ್ಕೂ ಆರೋಪಿಗಳು ಹಣ ಕೊಡುವಂತೆ ದೀನಬಂದು ಮೇಲೆ ಹಲ್ಲೆ ಮಾಡಿದ್ದಾರೆ. ಬಳಿಕ ಫೋನ್ ಪೇ ಮತ್ತು ಕ್ಯಾಶ್ ರೂಪದಲ್ಲಿ 8500 ಹಣ ಸುಲಿಗೆ ಮಾಡಿದ್ರು. ಕೊನೆಗೆ ಆತನನ್ನ ನೆಲಮಂಗಲದಲ್ಲಿ ಬಿಟ್ಟು ಬೈಕ್ ಜೊತೆ ಎಸ್ಕೇಪ್ ಆಗಿದ್ರು.
ಈ ಬಗ್ಗೆ ಬ್ಯಾಡರಹಳ್ಳಿ ಪೊಲೀಸರು ಕಾರ್ಯಚರಣೆ ನಡೆಸಿ, ಇದೀಗ ಆರೋಪಿಗಳನ್ನು ಅರೆಸ್ಟ್ ಮಾಡಿದ್ದಾರೆ. ಹೋಂಡಾ ಆ್ಯಕ್ಟಿವಾ ಹಾಗೂ ಕೃತ್ಯಕ್ಕೆ ಬಳಸಿದ್ದ ಆಟೋ ಕೂಡ ಪೊಲೀಸರು ಜಪ್ತಿ ಮಾಡಿದ್ದಾರೆ.