ಹುಬ್ಬಳ್ಳಿ:
ದಾವಣಗೆರೆ ರೈಲು ನಿಲ್ದಾಣದ ಬಳಿ ಶನಿವಾರ ಕೆಲವು ಕಿಡಿಗೇಡಿಗಳು ಚಲಿಸುತ್ತಿದ್ದ ರೈಲಿಗೆ ಕಲ್ಲು ತೂರಾಟ ನಡೆಸಿದ ಪರಿಣಾಮ ವೇಗದ ವಂದೇ ಭಾರತ್ ಎಕ್ಸ್‌ಪ್ರೆಸ್‌ನ ಕಿಟಕಿ ಗಾಜು ಜಖಂಗೊಂಡಿದೆ.
ರೈಲು ಧಾರವಾಡದಿಂದ ಬೆಂಗಳೂರು ಕಡೆಗೆ ತೆರಳುತ್ತಿದ್ದಾಗ ಈ ಘಟನೆ ನಡೆದಿದೆ. ನೈಋತ್ಯ ರೈಲ್ವೆಯ ಅಧಿಕಾರಿಗಳು ಈ ಘಟನೆಯನ್ನು ರೈಲ್ವೇ ಪ್ರೊಟೆಕ್ಷನ್ ಫೋರ್ಸ್ (ಆರ್‌ಪಿಎಫ್) ಸಿಬ್ಬಂದಿಗೆ ವರದಿ ಮಾಡಿದ್ದಾರೆ ಮತ್ತು ಘಟನೆಯ ಬಗ್ಗೆ ತನಿಖೆಗೆ ಸೂಚಿಸಿದ್ದಾರೆ.
ದಾವಣಗೆರೆ ರೈಲು ನಿಲ್ದಾಣದ ಬಳಿ ಘಟನೆ ವರದಿಯಾಗಿದ್ದು, ಸಿ4 ಕೋಚ್‌ನ ಕಿಟಕಿಯ ಹಲಗೆಗೆ ಹಾನಿಯಾಗಿದೆ ಎಂದು ಎಸ್‌ಡಬ್ಲ್ಯೂಆರ್ ಮುಖ್ಯ ಸಾರ್ವಜನಿಕ ಸಂಪರ್ಕ ಅಧಿಕಾರಿ ಅನೀಶ್ ಹೆಗ್ಡೆ ತಿಳಿಸಿದ್ದಾರೆ.
ಕೋಚ್‌ಗೆ ಕಲ್ಲುಗಳು ತೂರಿಲ್ಲ ಮತ್ತು ಘಟನೆಯಲ್ಲಿ ಯಾವುದೇ ಪ್ರಯಾಣಿಕರು ಗಾಯಗೊಂಡಿಲ್ಲ ಎಂದು ಅವರು ಹೇಳಿದರು. ಅಪರಿಚಿತ ವ್ಯಕ್ತಿಯ ವಿರುದ್ಧ ಪ್ರಕರಣ ದಾಖಲಿಸಲಾಗಿದೆ. ಆದಾಗ್ಯೂ, ರೈಲು ಅಂತಿಮ ಗಮ್ಯ ತಲುಪಿದೆ.
ಎಸ್‌ಡಬ್ಲ್ಯೂಆರ್ ಅಧಿಕಾರಿಗಳು ರೈಲ್ವೆ ಆಸ್ತಿಗಳಿಗೆ ಹಾನಿ ಮಾಡುವ ಇಂತಹ ಘಟನೆಗೆ ನಡೆಸದಂತೆ ಸಾರ್ವಜನಿಕರಲ್ಲಿ ಮನವಿ ಮಾಡಿದ್ದಾರೆ. ಭಾರತೀಯ ರೈಲ್ವೇ ಇಂತಹ ಐಷಾರಾಮಿ ಸೇವೆಯನ್ನು ಒದಗಿಸಿರುವುದರಿಂದ ಸಾರ್ವಜನಿಕರು ಇದನ್ನು ಬಳಸಬೇಕು ಮತ್ತು ಯಾವುದೇ ಅನಾಹುತ ಸೃಷ್ಟಿಸಬಾರದು. ಕಿಡಿಗೇಡಿಗಳು ವಂದೇ ಭಾರತ್ ರೈಲು ಬೋಗಿಗಳಿಗೆ ಹಾನಿ ಮಾಡಿರುವುದು ಇದೇ ಮೊದಲಲ್ಲ. ರಾಜ್ಯದಲ್ಲಿಯೇ ಮೇ ತಿಂಗಳಲ್ಲಿ ವರದಿಯಾದ ಘಟನೆಗಳು. ಬೇರೆ ರಾಜ್ಯಗಳಲ್ಲೂ ಇಂತಹ ಘಟನೆಗಳು ವರದಿಯಾಗುತ್ತಿವೆ.