ಬೆಂಗಳೂರು:
ರಾಜ್ಯ ವಿಧಾನಸಭಾ ಚುನಾವಣೆಗೆ ದಿನಗಣನೆ ಆರಂಭವಾಗಿರುವಂತೆಯೇ ಪ್ರಚಾರದ ಅಖಾಡ ರಂಗೇರಿದೆ. ಪ್ರಮುಖ ರಾಜಕೀಯ ಪಕ್ಷಗಳಾದ ಬಿಜೆಪಿ, ಕಾಂಗ್ರೆಸ್ ಹಾಗೂ ಜೆಡಿಎಸ್ ನಡುವಣ ಆರೋಪ, ಪ್ರತ್ಯಾರೋಪ, ವಾಕ್ಸಮರ ತಾರಕಕ್ಕೇರಿದೆ.
ಕುಡಚಿಯಲ್ಲಿ ರೋಡ್ ಶೋ ಬಳಿಕ ನಡೆದ ಚುನಾವಣಾ ಪ್ರಚಾರ ಸಭೆಯಲ್ಲಿ ಮಾತನಾಡಿದ ಎಐಸಿಸಿ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ವಾದ್ರಾ, ಪ್ರಧಾನಿ ನರೇಂದ್ರ ಮೋದಿ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದರು.
ನನ್ನನ್ನು ನಿಂದಿಸುತ್ತಿದ್ದಾರೆ ಎಂದು ಜನರ ಮುಂದೆ ಗೋಳಾಡುವ ಮೊದಲ ಪ್ರಧಾನಿಯನ್ನು ನೋಡುತ್ತಿದ್ದೇನೆ. ಪ್ರಧಾನಿಗಳ ಬಳಿ ಸಾರ್ವಜನಿಕರ ಸಮಸ್ಯೆಗಳ ಪಟ್ಟಿ ಇಲ್ಲ. ಬೈಗುಳಗಳ ಪಟ್ಟಿ ಇದೆ. ಮೋದಿಯವರೇ ನನ್ನ ಸಹೋದರನಿಂದ ಕಲಿಯಿರಿ, ಅವನು ಹೇಳುತ್ತೇನೆ- ನಾನು ದೇಶಕ್ಕಾಗಿ ಬೈಗುಳವನ್ನೆಲ್ಲ ಗುಂಡೇಟು ತಿನ್ನಲ್ಲೂ ಸಿದ್ದನಿದ್ದೇನೆ ಎಂದು ಪ್ರಿಯಾಂಕಾ ಗಾಂಧಿ ಹೇಳಿದ್ದಾರೆ. ಈ ವಿಡಿಯೋವನ್ನು ರಾಜ್ಯ ಕಾಂಗ್ರೆಸ್ ಟ್ವೀಟರ್ ಖಾತೆಯಲ್ಲಿ ಹಂಚಿಕೊಂಡಿದೆ.
ನನ್ನನ್ನು ನಿಂದಿಸುತ್ತಿದ್ದಾರೆ ಎಂದು ಜನರ ಮುಂದೆ ಗೋಳಾಡುವ ಮೊದಲ ಪ್ರಧಾನಿಯನ್ನು ನೋಡುತ್ತಿದ್ದೇನೆ!
— Karnataka Congress (@INCKarnataka) April 30, 2023
ಪ್ರಧಾನಿಗಳ ಬಳಿ ಸಾರ್ವಜನಿಕರ ಸಮಸ್ಯೆಗಳ ಪಟ್ಟಿ ಇಲ್ಲ, ಬೈಗುಳಗಳ ಪಟ್ಟಿ ಇದೆ.
ಮೋದಿಯವರೇ,
ನನ್ನ ಸಹೋದರನಿಂದ ಕಲಿಯಿರಿ,
ಅವನು ಹೇಳುತ್ತೇನೆ – ನಾನು ದೇಶಕ್ಕಾಗಿ ಬೈಗುಳವನ್ನಲ್ಲ ಗುಂಡೇಟು ತಿನ್ನಲೂ ಸಿದ್ಧನಿದ್ದೇನೆ!
– @priyankagandhi pic.twitter.com/pfjvPiBpLX
ಜನರ ನೋವು ಕೇಳದೆ ತನ್ನ ಸಮಸ್ಯೆಗಳನ್ನು ಹೇಳಿ ಮತ ಕೇಳುವ ನರೇಂದ್ರ ಮೋದಿ ಅವರೇ, ಪ್ರಧಾನಿ ಹುದ್ದೆ ಇರುವುದು ಜನರ ಸಂಕಷ್ಟಗಳ ಬಗ್ಗೆ ಮಾತನಾಡಲು ಹಾಗೂ ಬಗೆಹರಿಸಲು ಎಂಬುದನ್ನು ಮರೆತಿದ್ದೇಕೆ? ಎಂದು ಕಾಂಗ್ರೆಸ್ ಪ್ರಶ್ನಿಸಿದ್ದು, ನಾಯಕರಾದ ಸಿದ್ದರಾಮಯ್ಯ, ಪರಮೇಶ್ವರ್ ಅವರ ಮೇಲೆ ನಿಮ್ಮವರಿಂದ ದೈಹಿಕವಾಗಿ ದಾಳಿಯಾಗಿದೆ. ನಾವೆಂದೂ ಅದನ್ನು ದಾಳ ಮಾಡಿಕೊಂಡಿಲ್ಲ ಎಂದಿದೆ.