ಶಿವಮೊಗ್ಗ:
ಪ್ರಧಾನಿ ನರೇಂದ್ರ ಮೋದಿ ಅವರು ‘ಆಪರೇಷನ್ ಕಾವೇರಿ’ ಮೂಲಕ ಸುಡಾನ್‌ನಿಂದ ಕರೆತರಲಾದ ಹಕ್ಕಿಪಿಕ್ಕಿ ಬುಡಕಟ್ಟು ಜನರೊಂದಿಗೆ ಸಂವಾದ ನಡೆಸಿದ್ದಾರೆ.
ಈ ಸಂದರ್ಭದಲ್ಲಿ ಸುಡಾನ್ ನಲ್ಲಿ ತಮ್ಮ ಸಮಯೋಚಿತ ಹಾಗೂ ಸುರಕ್ಷಿತ ಸ್ಥಳಾಂತರಕ್ಕೆ ಕೇಂದ್ರ ಸರ್ಕಾರ ತೆಗೆದುಕೊಂಡ ಕ್ರಮಕ್ಕಾಗಿ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಸ್ಥಳಾಂತರಿಸಲ್ಪಟ್ಟವರು ಕೃತಜ್ಞತೆ ಸಲ್ಲಿಸಿದರು. ಅಲ್ಲದೇ ಸುಡಾನ್‌ನಲ್ಲಿ ಎದುರಿಸಿದ ಕಠಿಣ ಸಂದರ್ಭಗಳು ಮತ್ತು ತಮ್ಮ ಸುರಕ್ಷತೆ ಖಾತ್ರಿಗೆ ಸರ್ಕಾರ ಮತ್ತು ಭಾರತೀಯ ರಾಯಭಾರ ಕಚೇರಿ ಹೇಗೆ ಸ್ಪಂದಿಸಿದವು ಎಂಬುದನ್ನು ವಿವರಿಸಿದರು ಎಂದು ಅಧಿಕಾರಿಯೊಬ್ಬರು ತಿಳಿಸಿದರು.
In Shivamogga, I had a memorable interaction with members of the Hakki Pikki tribe who safely came home from Sudan. pic.twitter.com/T7mdl59YnW
— Narendra Modi (@narendramodi) May 7, 2023
ಇಡೀ ಜಗತ್ತಿನಲ್ಲಿ ಯಾವುದೇ ಭಾರತೀಯರು ಯಾವುದೇ ರೀತಿಯ ತೊಂದರೆಯಲ್ಲಿದ್ದರೆ, ಸಮಸ್ಯೆ ಬಗೆಹರಿಯುವವರೆಗೂ ಸರ್ಕಾರ ವಿರಮಿಸುವುದಿಲ್ಲ ಎಂದು ಪ್ರಧಾನಿ ಒತ್ತಿ ಹೇಳಿದರು.