ಬೆಂಗಳೂರು: ಹಣ ಅಂದ್ರೆ ಹೆಣ ಕೂಡ ಬಾಯಿ ಬಿಡುತ್ತೆ ಅನ್ನುವ ಮಾತು ನೂರಕ್ಕೆ ನೂರರಷ್ಟು ಸತ್ಯವಾಗಿದೆ. ಕೆಲವರು ಡಬಲ್ ಮತ್ತು ತ್ರಿಬಲ್ ಹಣ ಸಿಗುತ್ತೆ ಎಂಬ ಆಸೆಗೆ ಬಿದ್ದಿದ್ದಾರೆ. ಈ ಕಾರಣದಿಂದಾಗಿ ಲಕ್ಷ ಲಕ್ಷ ಹಣ ಕಳ್ಕೊಂಡಿದ್ದಾರೆ. ಹಣ ತ್ರಿಪಲ್ ಮಾಡಲು ಕೊಡ್ತೀವಿ ಎಂದು ಭಾರಿ ಲಾಭದ ಆಶೆಯೊಂದಿಗೆ ನಾಮ ಹಾಕಿದ ಖದೀಮರು, ಮೋಸ ಮಾಡುವವರಿದ್ದಾರೆ ಎಂಬುದು ಸತ್ಯ.
ಹಣ ಡಬ್ಲಿಂಗ್ ಎಂಬ ಬಣ್ಣದ ಮಾತಿಗೆ ಮರುಳಾದ ಗುತ್ತಿಗೆದಾರ ರಮೇಶ್, 28 ಲಕ್ಷ ರೂಪಾಯಿಗಳನ್ನು ಕಳೆದುಕೊಂಡಿದ್ದಾರೆ. ಈ ಸಂಬಂಧ ಪೊಲೀಸರು ಮೂವರನ್ನು ಬಂಧಿಸಿ, 40 ಲಕ್ಷ ರೂ. ಹಣವನ್ನು ವಶಪಡಿಸಿಕೊಂಡಿದ್ದಾರೆ.

ಬಾಗಲಕುಂಟೆ ಠಾಣೆ ವ್ಯಾಪ್ತಿಯಲ್ಲಿ ನಡೆದ ಈ ಪ್ರಕರಣದಲ್ಲಿ, ಮಧುಗಿರಿ ಮೂಲದ ವಿಜಯ್, ಕೆರೆಗುಡ್ಡದ ಹಳ್ಳಿ ಕೃಷ್ಣ ಸಿಂಗ್ ಮತ್ತು ಚಾಲಕ ನವೀನ್ ಬಂಧಿತರಾಗಿದ್ದಾರೆ. ಆರೋಪಿಗಳು, ‘ನಮ್ಮ ಬಳಿ ದುಡ್ಡಿದೆ, ಆದರೆ 90 ದಿನಗಳಲ್ಲಿ ನಾರ್ಮಲ್ ಕಾಗದವಾಗುತ್ತದೆ’ ಎಂದು ನಂಬಿಸಿ, ಗುತ್ತಿಗೆದಾರನನ್ನು ಮೋಸ ಮಾಡಿದ್ದಾರೆ.
ಗುತ್ತಿಗೆದಾರ ರಮೇಶ್, 28 ಲಕ್ಷ ರೂ. ಹಣವನ್ನು ಎಂಟನೇ ಮೈಲಿ ಬಳಿ ನೀಡಿದಾಗ, ಆರೋಪಿಗಳು ಹಣವನ್ನು ಚೆಕ್ ರೂಪಕ್ಕೆ ಬದಲಾಯಿಸುತ್ತೇವೆ ಎಂದು ಪರಾರಿಯಾಗಿದ್ದಾರೆ.
ಈಗಾಗಲೇ 40 ಲಕ್ಷ ರೂ. ವಶಪಡಿಸಲಾಗಿದೆ, ಆದರೆ ಇನ್ನೂ 18 ಲಕ್ಷ ರೂ. ಕಳೆದುಕೊಂಡ ಮತ್ತೊಬ್ಬ ವ್ಯಕ್ತಿಯ ಪ್ರಕರಣವೂ ಬೆಳಕಿಗೆ ಬಂದಿದೆ. ಜನರು ಹಣ ಡಬ್ಲಿಂಗ್ ಬಗ್ಗೆ ಎಷ್ಟು ನಂಬಿಕೆ ಇಟ್ಟಿದ್ದಾರೆ ಎಂಬುದು ಬೇಸರದ ವಿಷಯವಾಗಿದೆ.
