Home ಅಪರಾಧ Bengaluru: ಇಬ್ಬರು ಮಕ್ಕಳನ್ನ ಕೊಂದಿದ್ದ ತಾಯಿ ಜೈಲಿನಲ್ಲಿ ಆತ್ಮಹತ್ಯೆಗೆ ಶರಣು

Bengaluru: ಇಬ್ಬರು ಮಕ್ಕಳನ್ನ ಕೊಂದಿದ್ದ ತಾಯಿ ಜೈಲಿನಲ್ಲಿ ಆತ್ಮಹತ್ಯೆಗೆ ಶರಣು

36
0
Mother who killed two children committed suicide in Bengaluru jail

ಬೆಂಗಳೂರು: ತನ್ನ ಇಬ್ಬರು ಮಕ್ಕಳನ್ನು ಕೊಂದು ಪರಪ್ಪನ ಅಗ್ರಹಾರ ಸೇರಿದ್ದ ತಾಯಿ ಗಂಗಾದೇವಿ ಜೈಲಿನಲ್ಲಿ ಆತ್ಮಹತ್ಯೆಗೆ ಶರಣಾಗಿದ್ದಾಳೆ.

ಆರೋಪಿ ಗಂಗಾದೇವಿ ಮಂಗಳವಾರ ರಾತ್ರಿ ಜಾಲಹಳ್ಳಿ ಗ್ರಾಮದಲ್ಲಿ ತನ್ನ ಇಬ್ಬರು ಮಕ್ಕಳನ್ನು ಉಸಿರುಗಟ್ಟಿಸಿ ಸಾಯಿಸಿದ್ದಳು. ಬಳಿಕ ಬುಧವಾರ ಬೆಳಗ್ಗೆ 112ಕ್ಕೆ ಫೋನ್ ಮಾಡಿ ವಿಷಯ ತಿಳಿಸಿ ಆತ್ಮಹತ್ಯೆ ಮಾಡಿಕೊಳ್ಳು ವುದಾಗಿ ಹೇಳಿದ್ದಳು. ವಿಷಯ ತಿಳಿದ ತಕ್ಷಣ ಜಾಲಹಳ್ಳಿ ಪೊಲೀಸರು ಸ್ಥಳಕ್ಕೆ ತೆರಳಿ ಆಕೆಯನ್ನು ಬಂಧಿಸಿದ್ದರು.

ಗುರುವಾರ ಪರಪ್ಪನ ಅಗ್ರಹಾರಕ್ಕೆ ಗಂಗಾದೇವಿಯನ್ನು ಬಿಡಲಾಗಿತ್ತು. ಅದೇ ದಿನ ರಾತ್ರಿ ಜೈಲಿನಲ್ಲಿನ ಶೌಚಾಲಯದಲ್ಲಿ ತಾನು ಧರಿಸಿದ್ದ ಸೀರೆಯಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ.

ಆಸ್ಪತ್ರೆಗೆ ಸಾಗಿಸುತ್ತಿದ್ದ ಮಧ್ಯೆ ಗಂಗಾದೇವಿ ಸಾವನ್ನಪ್ಪಿದ್ದಾಳೆ. ಇಂದು ಮರಣೋತ್ತರ ಪರೀಕ್ಷೆ ಮಾಡಿ ಸಂಬಂಧಿಕರಿಗೆ ಮೃತದೇಹ ಹಸ್ತಾಂತರಿಸಲಾಗಿದೆ. ಈ ಕುರಿತು ಪರಪ್ಪನ ಅಗ್ರಹಾರ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.

LEAVE A REPLY

Please enter your comment!
Please enter your name here