Home Uncategorized Muniratna; ಬಿಜೆಪಿ-ಜೆಡಿಎಸ್ ಮೈತ್ರಿ, ಸಕಾಲದಲ್ಲಿ ಒಳ್ಳೆಯ ನಿರ್ಧಾರ – ಮುನಿರತ್ನ

Muniratna; ಬಿಜೆಪಿ-ಜೆಡಿಎಸ್ ಮೈತ್ರಿ, ಸಕಾಲದಲ್ಲಿ ಒಳ್ಳೆಯ ನಿರ್ಧಾರ – ಮುನಿರತ್ನ

38
0

ಬೆಂಗಳೂರು;- ಜೆಡಿಎಸ್-ಬಿಜೆಪಿ ಮೈತ್ರಿ ವಿರೋಧಿಸುವವರು ಯಡಿಯೂರಪ್ಪರನ್ನು ಇಳಿಸಿದಾಗ ಯಾಕೆ ಮೌನವಾಗಿದ್ದರು? ಎಂದು ಮಾಜಿ ಸಚಿವ ಮುನಿರತ್ನ ಪ್ರಶ್ನಿಸಿದ್ದಾರೆ.

ಈ ಸಂಬಂಧ ಮಾತನಾಡಿದ ಅವರು,ಬಿ.ಎಸ್.ಯಡಿಯೂರಪ್ಪರನ್ನು ಏಕಾಏಕಿ ರಾಜ್ಯ ನಾಯಕರ ಅಭಿಪ್ರಾಯ ಆಲಿಸದೇ ಕೆಳಗಿಳಿಸಿದಾಗ ಮೌನವಾಗಿದ್ದವರು ಈಗೇಕೆ ಮೈತ್ರಿ ವಿಚಾರದಲ್ಲಿ ನಮ್ಮ ಅಭಿಪ್ರಾಯ ಕೇಳಬೇಕಿತ್ತು ಎನ್ನುತ್ತಿದ್ದಾರೆ ಎಂದು ರಾಜ್ಯದಲ್ಲಿ ಜೆಡಿಎಸ್ ಬಿಜೆಪಿ ಮೈತ್ರಿ ವಿಚಾರದಲ್ಲಿ ಅಸಮಾಧಾನ ಹೊರಹಾಕಿರುವ ಕೇಂದ್ರದ ಮಾಜಿ ಸಚಿವ ಡಿ.ವಿ.ಸದಾನಂದ ಗೌಡರನ್ನು ಮಾಜಿ ಸಚಿವ ಮುನಿರತ್ನ ಪ್ರಶ್ನಿಸಿದ್ದಾರೆ.

ಯಡಿಯೂರಪ್ಪ ಬದಲಾವಣೆ ಬಗ್ಗೆ ಕೇಳದವರು, ಇಂದು ಮೈತ್ರಿ ಬಗ್ಗೆ ಯಾಕೆ ಕೇಳ್ತಾರೆ. ಸಿಎಂ ಬದಲಾವಣೆ ಮಾಡಿದಾಗಲೇ ಮಾತನಾಡಿಲ್ಲ. ಅಂದು ಕೂಡ ಹೈಕಮಾಂಡ್ ನಮ್ಮನ್ನೂ ಒಂದು ಮಾತು ಕೇಳಬೇಕಿತ್ತು ಎಂದು ಹೇಳಬಹುದಿತ್ತಲ್ಲ. ಈಗ ಮೈತ್ರಿ ಬಗ್ಗೆ ಹೈಕಮಾಂಡ್ ಕೇಳಬೇಕಿತ್ತು ಎಂದು ಯಾಕೆ ಹೇಳುತ್ತೀರಿ?. ಬಿಜೆಪಿ-ಜೆಡಿಎಸ್ ಮೈತ್ರಿ ವಿಚಾರದಲ್ಲಿ ಯಾರನ್ನೂ ಹೊರಗಿಟ್ಟಿಲ್ಲ. ಯಡಿಯೂರಪ್ಪ ಬದಲಾವಣೆ ವೇಳೆ ಯಾರನ್ನೂ ಕೇಳಲಿಲ್ಲ. ಆಗಲೂ ನಾವು ಒಪ್ಪಿದ್ದೇವೆ. ಯಡಿಯೂರಪ್ಪ ಮೇಲೆ ಅಭಿಮಾನ ಇದ್ದವರು ಕೇಳಬಹುದಿತ್ತು ಎಂದರು.

The post Muniratna; ಬಿಜೆಪಿ-ಜೆಡಿಎಸ್ ಮೈತ್ರಿ, ಸಕಾಲದಲ್ಲಿ ಒಳ್ಳೆಯ ನಿರ್ಧಾರ – ಮುನಿರತ್ನ appeared first on Ain Live News.

LEAVE A REPLY

Please enter your comment!
Please enter your name here