ಬೆಂಗಳೂರು: ಸುಮ್ಮನೆ ಗುರಾಯಿಸಿದ್ದಕ್ಕೆ ವ್ಯಕ್ತಿಯೊಬ್ಬನ್ನನ್ನು ಭೀಕರವಾಗಿ ಕೊಲೆ ಮಾಡಿರುವ ಘಟನೆ ಬೆಂಗಳೂರಿನಲ್ಲಿ ನಡೆದಿದೆ. ಬಾರ್‌ನಲ್ಲಿ ಕುಳಿತು ಎಣ್ಣೆ ಹೊಡೆಯುವಾಗ ಒಬ್ಬ ವ್ಯಕ್ತಿ ಗುರಾಯಿಸಿದ್ದಾನೆ. ಇದರಿಂದಾಗಿ ಆಕ್ರೋಶಗೊಂಡ ಒಂದು ಗುಂಪು ಆತನಿಗೆ ಬಿಯರ್ ಬಾಟಲ್‌ಗಳಿಂದ ಹೊಡೆದು ಭೀಕರವಾಗಿ ಹತ್ಯೆ ಮಾಡಿದೆ.
ಬನ್ನೇರುಘಟ್ಟ ಸಮೀಪದ ಕಲ್ಕೆರೆಯಲ್ಲಿರುವ ಬೈಟ್ ಸಫಾರಿ ಬಾರ್‌ನಲ್ಲಿ ಕಳೆದ ರಾತ್ರಿ ನಡೆದಿದೆ. 35 ವರ್ಷದ ಹರ್ಷವರ್ದನ್ ಎಂಬಾತನೇ ಕೊಲೆಗೀಡಾದ ವ್ಯಕ್ತಿಯಾಗಿದ್ದಾನೆ. ನಿನ್ನೆ ಸಂಜೆ ಈತ ಬಾರ್‌ಗೆ ಕುಡಿಯಲೆಂದು ಹೋಗಿದ್ದಾನೆ. ಈತನ ಟೇಬಲ್ ಪಕ್ಕದಲ್ಲಿ ಬೇರೆ ಇಬ್ಬರು ಕುಳಿತಿದ್ದರು. ಅವರನ್ನು ನೋಡಿ ಹರ್ಷವರ್ದನ್ ಗುರಾಯಿಸಿದ್ದಾನೆ. ಯಾಕೋ ಗುರಾಯಿಸುತ್ತೀಯ ಎಂದು ಪ್ರಶ್ನೆ ಮಾಡಿದ್ದಾರೆ. ಅದು ಮಾತಿಗೆ ಮಾತು ಬೆಳೆದು ಆತನ ಮೇಲೆ ದಾಳಿ ಮಾಡಲಾಗಿದೆ.
ಆರೋಪಿಗಳಿಬ್ಬರೂ ಸೇರಿ ಬಿಯರ್ ಬಾಟಲ್‌ಗಳನ್ನು ಒಡೆದು ಅವುಗಳಿಂದ ಚುಚ್ಚಿ ಸಾಯಿಸಿದ್ದಾರೆ. ತಲೆಗೆ ಹೊಡೆದಿದ್ದರಿಂದ ಗಂಭೀರವಾಗಿ ಗಾಯಗೊಂಡ ಹರ್ಷವರ್ದನ್ ಸ್ಥಳದಲ್ಲೇ ಸಾವನ್ನಪ್ಪಿದ್ದಾನೆ ಎಂದು ತಿಳಿದುಬಂದಿದೆ.
ಪೊಲೀಸರು ಒಬ್ಬರ ಆರೋಪಿಯನ್ನು ಬಂಧಿಸಿದ್ದು, ಮತ್ತೊಬ್ಬ ಎಸ್ಕೇಪ್ ಆಗಿದ್ದಾನೆ..