ಬೆಂಗಳೂರು:
ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ಬಳಿಕ ಲೋಡ್ ಶೆಡ್ಡಿಂಗ್ ತೀವ್ರಗೊಂಡಿದೆ. ಎಲ್ಲಾ ಇಲಾಖೆಯಲ್ಲಿ ಅಭಿವೃದ್ಧಿ ಶೂನ್ಯ ಪರಿಸ್ಥಿತಿ ತಲೆದೋರಿದೆ ಎಂದು ಮಾಜಿ ಸಚಿವ ಮುರುಗೇಶ್ ನಿರಾಣಿ ಅವರು ತಿಳಿಸಿದ್ದಾರೆ.
ಕಾಂಗ್ರೆಸ್ ಶಾಸಕರೇ ಸರಕಾರದ ಕಾರ್ಯವೈಖರಿ ವಿರುದ್ಧ ಛೀಮಾರಿ ಹಾಕುವ ಕೆಲಸ ಮಾಡ್ತಿದ್ದಾರೆ. ವಿಶೇಷವಾಗಿ ಕೈಗಾರಿಕೆಗಳು ಎಂಎಸ್‍ಎಂಇ, ಸಣ್ಣ ಕೈಗಾರಿಕೆದಾರರು ತೊಂದರೆಗೆ ಸಿಲುಕಿದ್ದಾರೆ. ಸರ್ಕಾರ ವಿದ್ಯುತ್ ದರ ಗಣನೀಯವಾಗಿ ಹೆಚ್ಚಳ ಮಾಡಿದೆ. ಎಲ್ಲಾ ಕೈಗಾರಿಕೆದಾರರ ಸಂಘಗಳು, ಸಣ್ಣ- ಗುಡಿ ಕೈಗಾರಿಕೆಗಳು ವಿದ್ಯುತ್ ದರ ಇಳಿಸಲು ಸರ್ಕಾರಕ್ಕೆ ಮನವಿ ಮಾಡಿವೆ. ಹಿಂದೆ ಕರ್ನಾಟಕದಲ್ಲಿ ಬೆಂಗಳೂರನ್ನು ಇಡೀ ವಿಶ್ವವೇ ತಿರುಗಿ ನೋಡುವ ಸ್ಥಿತಿ ಇತ್ತು. ಈಗ ಎಲ್ಲಾ ಕೈಗಾರಿಕೆಗಳು ಬೇರೆ ರಾಜ್ಯದತ್ತ ಮುಖ ಮಾಡಿವೆ. ಹೊಸದಾಗಿ ಬರಬೇಕಿದ್ದ ಕೈಗಾರಿಕೆಗಳೂ ಈಗ ಬೇರೆ ಕಡೆ ಹೋಗುವ ಪರಿಸ್ಥಿತಿ ಇದೆ ಎಂದು ಅವರು ತಿಳಿಸಿದ್ದಾರೆ.
ಸರಕಾರವು ಕೂಡಲೇ ಎಚ್ಚೆತ್ತುಕೊಳ್ಳಬೇಕು. ಮೊದಲ ದರದಲ್ಲೇ ವಿದ್ಯುತ್ ಪೂರೈಕೆ ಮಾಡಬೇಕು ಎಂದಿರುವ ಅವರು, ಸರ್ಕಾರ ಬಿಟ್ಟಿ ಭಾಗ್ಯ ಕೊಟ್ಟಿದ್ದು, ಅದನ್ನು ಸ್ವಾಗತ ಮಾಡುತ್ತೇವೆ. ಅವು ಜನರಿಗೆ ಸರಿಯಾಗಿ ಮುಟ್ಟಿಲ್ಲ. ಬಿಟ್ಟಿ ಭಾಗ್ಯದ ಹೆಸರಲ್ಲಿ ಅಭಿವೃದ್ಧಿ ಕಾರ್ಯ ಆಗಿಲ್ಲ. ಇವರ ಬಳಿ ಅನುದಾನ ಇಲ್ಲ ಎಂದು ಟೀಕಿಸಿದ್ದಾರೆ.
ನಮ್ಮ ಕ್ಷೇತ್ರದ ವಿಚಾರವಾಗಿ ಹೇಳಬೇಕಿದ್ದರೆ, ನಮ್ಮ ಶಾಸಕ ಜಿ.ಟಿ ಪಾಟೀಲ್ ಎಲ್ಲಾ ಕಂಟ್ರಾಕ್ಟ್, ಪ್ರಾಜೆಕ್ಟ್ ಎಲವನ್ನೂ ಮೌಕಿಕವಾಗಿ ಸ್ಥಗಿತಗೊಳಿಸಿದ್ದಾರೆ. ಅತ್ಯಂತ ಪ್ರಾಮಾಣಿಕ ಶಾಸಕ ಅಂತಾರೆ. ಅವರು ಎಲ್ಲರನ್ನೂ ಕರೆದು ಇಷ್ಟು ಪಸರ್ಂಟೇಜ್ ಬೇಕು ಅಂತ ಕೇಳಿದ್ದಾರೆ. ಮುಂದಿನ ಬಾರಿ ಎಂಎಲ್‍ಎ ಗೆ ನಿಲ್ಲೋದಿಲ್ಲ. ನನಗೆ ದುಡ್ಡು ಕೊಟ್ರೇನೇ ಕೆಲಸ ಮಾಡಿಕೊಡೋದು ಎಂದು ಮುಕ್ತವಾಗಿ ಅಧಿಕಾರಿಗಳು ಹಾಗೂ ಕಂಟ್ರಾಕ್ಟರ್ಸ್ ಬಳಿ ಹೇಳಿದ್ದಾರೆ. ಇದರ ತನಿಖೆ ಮಾಡಬೇಕು ಎಂದು ಆಗ್ರಹಿಸಿದ್ದಾರೆ. ಮತದಾರರು ಕೂಡ ಎಚ್ಚೆತ್ತುಕೊಳ್ಳಬೇಕು ಎಂದು ಕಿವಿಮಾತು ಹೇಳಿದ್ದಾರೆ.
ಕೃμÁ್ಣ ಜಲಭಾಗ್ಯ ನಿಗಮದಿಂದ, ಆಲಮಟ್ಟಿಯಿಂದ ಸಾಕಷ್ಟು ಅಭಿವೃದ್ಧಿ ಪಡೆದಿದ್ದೇವೆ. ಎಲ್ಲಾ ಅಭಿವೃದ್ಧಿ ಯೋಜನೆ ಮುಂದುವರೆಸಬೇಕು. ಇಲ್ಲವಾದರೆ ಉಗ್ರ ಹೋರಾಟ ಮಾಡುತ್ತೇವೆ. ಬೀಳಗಿ ಶಾಸಕ ಜಿ.ಟಿ ಪಾಟೀಲ್ ಮತ್ತು ಅವರ ಪಿ.ಎ ಪ್ರಕಾಶ್ ಅವರ ಮೇಲೆ ಆರೋಗ್ಯ ಇಲಾಖೆ ಎಫ್‍ಐಆರ್ ಹಾಕಿದ್ದಾರೆ. ಅವರ ಮೇಲೆ ಕೇಸ್ ಆಗಿದೆ. ಪ್ರಾಮಾಣಿಕ ಶಾಸಕರು ಅಂತ ಹೇಳಿಕೊಂಡು ತಮ್ಮ ಪಿಎ ಮೂಲಕ ಹಗಲು ದರೋಡೆ ಮಾಡ್ತಿದ್ದಾರೆ. ಕೂಡಲೇ ಅದನ್ನು ನಿಲ್ಲಿಸಬೇಕು ಎಂದಿದ್ದಾರೆ.
ಮತ್ತೆ ಹಿಂದಿನ ಸರ್ಕಾರದ ರೀತಿ ಅಭಿವೃದ್ಧಿ ಮಾಡಬೇಕು. ಬಾಗಲಕೋಟೆಯಲ್ಲಿ ಹಗಲು ದರೋಡೆ ಆಗುತ್ತಿದೆ. ಸರ್ಕಾರದ ಎಲ್ಲಾ ಸ್ಕೀಮ್ ನಲ್ಲಿ ಪಸೆರ್ಂಟೇಜ್ ಇಟ್ಟುಕೊಂಡೇ ಹಣ ಕೊಡುತ್ತಿದ್ದಾರೆ. ಇದರಲ್ಲಿ ಯಾರಿಗೆ ಏನು ಮುಟ್ಟಿಸಬೇಕೋ ಅದನ್ನು ಮುಟ್ಟಿಸಿದರೆ ಆಯಿತೆಂಬ ದುಸ್ಥಿತಿ ಇದೆ ಎಂದು ಟೀಕಿಸಿದ್ದಾರೆ.