ಬೆಳಗಾವಿ: ಬೆಳಗಾವಿ ನಗರದ ಪಾಂಗುಳ ಗಲ್ಲಿಯಲ್ಲಿ ಅಶ್ವತ್ಥಾಮ ದೇವಸ್ಥಾನಕ್ಕೆ ಮುಸ್ಲಿಂ ಯುವಕ ಕಲ್ಲು ತೂರಾಟ ಮಾಡಿದ್ದರಿಂದ ಸ್ಥಳದಲ್ಲಿ ಕೆಲಕಾಲ ಉದ್ವಿಗ್ನ ಪರಿಸ್ಥಿತಿ ಉಂಟಾಯಿತು. ನೆರೆದಿದ್ದ ಜನರು ಯುವಕನನ್ನು ಹಿಡಿದು ಸ್ಥಳೀಯ ಪೊಲೀಸರಿಗೊಪ್ಪಿಸಿದ ಘಟನೆ ನಡೆದಿದೆ.
ಉಜ್ವಲ್ ನಗರದ ನಿವಾಸಿ ಯಾಸೀರ್ ಎಂಬಾತನೇ ನಿನ್ನೆ ರಾತ್ರಿ ದೇವಸ್ಥಾನಕ್ಕೆ ಕಲ್ಲು ಎಸೆದ ಯುವಕ. ತಕ್ಷಣವೇ ಧಾವಿಸಿ ಬಂದ ಸ್ಥಳೀಯರು ಯಾಸೀರ್ ರನ್ನು ಹಿಡಿದು ಕಂಬಕ್ಕೆ ಕಟ್ಟಿಹಾಕಿದ್ದಾರೆ. ಸ್ಥಳಿಯರು ಹೊಡೆಯಲು ಮುಂದಾದಾಗ ಯಾಸೀರ್, ತಪ್ಪು ಮಾಡಿದ್ದೇನೆ ಕ್ಷಮಿಸಿಬಿಡಿ. ಮಂದಿರಕ್ಕೆ ಕಲ್ಲು ಹೊಡೆದಿದ್ದೇನೆ. ಮೊನ್ನೆ ಒಬ್ಬ ಬುರ್ಕಾ ಹಾಕಿ ಡ್ಯಾನ್ಸ್ ಮಾಡಿದ್ದನಲ್ಲಾ ಅದಕ್ಕೆ ಎಂದಿದ್ದಾನೆ.
ಮೊನ್ನೆ ಹೋಳಿ ಹಬ್ಬದ ದಿನ ಕೆಲವರು ಬುರ್ಖಾ ಧರಿಸಿ ಡ್ಯಾನ್ಸ್ ಮಾಡಿದ್ದರು. ಅದಕ್ಕೆ ಸಿಟ್ಟಿನಿಂದ ದೇವಸ್ಥಾನಕ್ಕೆ ಕಲ್ಲುಹೊಡೆದಿರುವುದಾಗಿ ಮದ್ಯಪಾನದ ನಶೆಯಲ್ಲಿದ್ದ ಆರೋಪಿ ಯಾಸೀರ್ ಬಾಯಿಬಿಟ್ಟಿದ್ದಾನೆ. ಸ್ಥಳೀಯರು ಯಾಸೀರ್ನನ್ನು ಕಂಬಕ್ಕೆ ಕಟ್ಟಿಹಾಕಿ ಥಳಿಸಿ ನಂತರ ಬೆಳಗಾವಿಯ ಮಾರ್ಕೆಟ್ ಠಾಣೆ ಪೊಲೀಸರಿಗೆ ಒಪ್ಪಿಸಿದ್ದಾರೆ.