Home Uncategorized Mysore: ಇಸ್ರೇಲ್ ಯುದ್ಧದಲ್ಲಿ ಸಿಲುಕಿರುವ ಕನ್ನಡಿಗ: ವಿಡಿಯೋ ಕಾಲ್ ಮೂಲಕ ಕಣ್ಣೀರು

Mysore: ಇಸ್ರೇಲ್ ಯುದ್ಧದಲ್ಲಿ ಸಿಲುಕಿರುವ ಕನ್ನಡಿಗ: ವಿಡಿಯೋ ಕಾಲ್ ಮೂಲಕ ಕಣ್ಣೀರು

14
0

ಮೈಸೂರು: ಇಸ್ರೇಲ್ ಯುದ್ಧದಲ್ಲಿ ನಂಜನಗೂಡು ತಾಲೂಕಿನ ದೇವನೂರು ಗ್ರಾಮದ ನಿವಾಸಿ ಕುಟುಂಬ ಸಮೇತ ಸಿಲುಕಿದ್ದು, ರಕ್ಷಣೆಗೆ ಮುಂದಾಗುವಂತೆ ಸರ್ಕಾರವನ್ನು ಕುಟುಂಬಸ್ಥರು ಆಗ್ರಹಿಸಿದ್ದಾರೆ. ಚೇತನ್, ಪತ್ನಿ ಶಿಲ್ಪಾ ಹಾಗೂ ಎರಡು ವರ್ಷದ ಮಗು ಇಸ್ರೇಲ್​ನ ರಹೋತ್ನದಲ್ಲಿ ಸಿಲುಕಿದ್ದು, ಬಂಕರ್​ನಲ್ಲಿ ಆಶ್ರಯ ಪಡೆದಿರುವುದಾಗಿ ತಿಳಿದುಬಂದಿದೆ. ಪ್ಯಾಲೆಸ್ತೀನ್​ನ ಹಮಾಸ್​ ಉಗ್ರರ ಗಂಪು ಇಸ್ರೇಲ್​ ಮೇಲೆ ದಾಳಿ ಮಾಡಿದಾಗಿನಿಂದ ಇಸ್ರೇಲ್​-ಹಮಾಸ್​ ನಡುವೆ ಯುದ್ಧ ಆರಂಭವಾಗಿದೆ. ಈಗಾಗಲೇ ಯುದ್ಧದಲ್ಲಿ ಸಾವಿರಾರು ಮಂದಿ ಪ್ರಾಣ ಕಳೆಕೊಂಡಿದ್ದಾರೆ. ಜೀವ ಕಳೆದುಕೊಂಡವರಲ್ಲಿ ವಿದೇಶಿ ಪ್ರಜೆಗಳೂ ಇದ್ದಾರೆ. ಇದೀಗ ಚೇತನ್​ ಕುಟುಂಬ ಸಹ ಆತಂಕಕ್ಕೀಡಾಗಿದೆ.

ಕ್ಯಾನ್ಸರ್​​ ರೋಗದ ಕುರಿತು ಉನ್ನತ ಶಿಕ್ಷಣಕ್ಕಾಗಿ ಎರಡು ವರ್ಷದ ಹಿಂದೆ ಚೇತನ್ ಇಸ್ರೇಲ್​ಗೆ ತೆರಳಿದ್ದಾರೆ. ವೈಸ್ ಮ್ಯಾನ್ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿಯಲ್ಲಿ ವಿದ್ಯಾಭ್ಯಾಸ ಮಾಡುತ್ತಿದ್ದು, ಕಳೆದ ಮಾರ್ಚ್​ ತಿಂಗಳಲ್ಲಿ ಪತ್ನಿ ಮತ್ತು ಮಗುವನ್ನು ಕರೆಸಿಕೊಂಡಿದ್ದರು. ಇದೀಗ ಇಸ್ರೇಲ್​ನಲ್ಲಿ ಯುದ್ಧದ ಪರಿಸ್ಥಿತಿ ಆವರಿಸಿದ್ದು, ಇಡೀ ಕುಟುಂಬ ಆತಂಕದಲ್ಲಿದೆ.ವಿಡಿಯೋ ಕಾಲ್ ಮೂಲಕ ಚೇತನ್ ಪರಿಸ್ಥಿತಿಯನ್ನು ವಿವರಿಸಿದ್ದಾರೆ. ಆತಂಕದಲ್ಲಿ ಸಮಯ ಕಳೆಯುತ್ತಿರುವುದಾಗಿ ಮತ್ತು ಆದಷ್ಟು ಬೇಗ ತಮ್ಮನ್ನು ರಕ್ಷಣೆ ಮಾಡುವಂತೆ ಸರ್ಕಾರಕ್ಕೆ ಮನವಿ ಮಾಡಿದ್ದಾರೆ. ಚೇತನ್​ ಬಗ್ಗೆ ಸ್ಥಳೀಯ ಜಿಲ್ಲಾಡಳಿತಕ್ಕೆ ಮಾಹಿತಿ ಇಲ್ಲ. ಯಾರೂ ಕೂಡ ನಮ್ಮನ್ನು ಸಂಪರ್ಕಿಸಿಲ್ಲ ಎಂದು ಜಿಲ್ಲಾಡಳಿತ ಹಾಗೂ ಸರ್ಕಾರದ ವಿರುದ್ಧ ಚೇತನ್​ ಕುಟುಂಬಸ್ಥರು ಬೇಸರ ಹೊರಹಾಕಿದ್ದಾರೆ.

The post Mysore: ಇಸ್ರೇಲ್ ಯುದ್ಧದಲ್ಲಿ ಸಿಲುಕಿರುವ ಕನ್ನಡಿಗ: ವಿಡಿಯೋ ಕಾಲ್ ಮೂಲಕ ಕಣ್ಣೀರು appeared first on Ain Live News.

LEAVE A REPLY

Please enter your comment!
Please enter your name here