Home Uncategorized Mythri Movie Makers: ‘ಪುಷ್ಪ 2’ ನಿರ್ಮಾಪಕರ ಮೇಲೆ ಐಟಿ ದಾಳಿ; ಸಂಕಷ್ಟದಲ್ಲಿ ‘ಮೈತ್ರಿ ಮೂವೀ...

Mythri Movie Makers: ‘ಪುಷ್ಪ 2’ ನಿರ್ಮಾಪಕರ ಮೇಲೆ ಐಟಿ ದಾಳಿ; ಸಂಕಷ್ಟದಲ್ಲಿ ‘ಮೈತ್ರಿ ಮೂವೀ ಮೇಕರ್ಸ್​’ ಸಂಸ್ಥೆ

25
0

ತೆಲುಗಿನ ಖ್ಯಾತ ನಿರ್ಮಾಣ ಸಂಸ್ಥೆ ‘ಮೈತ್ರಿ ಮೂವೀ ಮೇಕರ್ಸ್​’ (Mythri Movie Makers) ಮೇಲೆ ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ಸೋಮವಾರ (ಡಿ.12) ಈ ದಾಳಿ ನಡೆದಿದ್ದು, ಮಂಗಳವಾರ ಕೂಡ ಪರಿಶೀಲನೆ ಮುಂದುವರಿದಿದೆ. ಈ ಸಂಸ್ಥೆ ಮೇಲೆ ಜಿಎಸ್​ಟಿ ವಂಚನೆ ಆರೋಪ ಎದುರಾಗಿದೆ. ಅಲ್ಲು ಅರ್ಜುನ್​ ನಟನೆಯ ‘ಪುಷ್ಟ 2’ (Pushpa 2) ಸೇರಿದಂತೆ ಅನೇಕ ಸಿನಿಮಾಗಳನ್ನು ಪ್ಯಾನ್​ ಇಂಡಿಯಾ ಮಟ್ಟದಲ್ಲಿ ನಿರ್ಮಿಸುತ್ತಿರುವ ಈ ಸಂಸ್ಥೆಯ ಹಣಕಾಸಿನ ವ್ಯವಹಾರದ ಮೇಲೆ ಐಟಿ ಅಧಿಕಾರಿಗಳು ಕಣ್ಣಿಟ್ಟಿದ್ದಾರೆ. ಬೆಂಗಳೂರು, ಹೈದರಾಬಾದ್​ ಕಚೇರಿ ಸೇರಿ 15 ಕಡೆಗಳಲ್ಲಿ ಏಕಕಾಲಕ್ಕೆ ದಾಳಿ (IT Raid) ಮಾಡಲಾಗಿದೆ. ‘ಮೈತ್ರಿ ಮೂವೀ ಮೇಕರ್ಸ್​’ನಲ್ಲಿ ವಿದೇಶಿ ಹಣ ಹೂಡಿಕೆ ಆಗಿದೆ ಎಂಬ ಮಾಹಿತಿ ಆಧರಿಸಿ ಅಧಿಕಾರಿಗಳು ಪರಿಶೀಲನೆ ನಡೆಸುತ್ತಿದ್ದಾರೆ.

‘ಮೈತ್ರಿ ಮೂವೀ ಮೇಕರ್ಸ್​’ ಸಂಸ್ಥೆಯ ಪ್ರಮುಖರಾದ ಎರ್ನೇನು ನವೀನ್​, ಚೆರುಕುರಿ ಮೋಹನ್​, ಯಲಮಂಚಿಲಿ ರವಿಶಂಕರ್​ ಅವರ ನಿವಾಸ ಮೇಲೂ ಐಟಿ ದಾಳಿ ಮಾಡಲಾಗಿದೆ. ಟಾಲಿವುಡ್​ನಲ್ಲಿ ಪ್ರತಿಷ್ಠಿತ ನಿರ್ಮಾಣ ಸಂಸ್ಥೆಯಾಗಿ ‘ಮೈತ್ರಿ ಮೂವೀ ಮೇಕರ್ಸ್​’ ಬೆಳೆದು ನಿಂತಿದೆ. ‘ಶ್ರೀಮಂತುಡು’, ‘ರಂಗಸ್ಥಲಂ’, ‘ಜನತಾ ಗ್ಯಾರೇಜ್​’, ‘ಉಪ್ಪೆನಾ’, ‘ಪುಷ್ಪ’, ‘ಸರ್ಕಾರು ವಾರಿ ಪಾಟ’ ಸೇರಿದಂತೆ ಅನೇಕ ಸಿನಿಮಾಗಳು ಈ ಸಂಸ್ಥೆ ಮೂಲಕ ಮೂಡಿಬಂದಿದೆ.

ಇದನ್ನೂ ಓದಿ: Pushpa 2: ‘ಪುಷ್ಪ 2’ ಚಿತ್ರಕ್ಕೆ ಭಯಾನಕ ವಿಲನ್​ ಎಂಟ್ರಿ? ವಿದೇಶಿ ನಟನಿಗೆ ಮಣೆ ಹಾಕಿದ ನಿರ್ದೇಶಕ ಸುಕುಮಾರ್​

ಸಾಲು ಸಾಲು ಸಿನಿಮಾಗಳಿಗೆ ‘ಮೈತ್ರಿ ಮೂವೀ ಮೇಕರ್ಸ್​’ ಬಂಡವಾಳ ಹೂಡುತ್ತಿದೆ. ‘ವೀರ ಸಿಂಹ ರೆಡ್ಡಿ’, ‘ವಾಲ್ತೇರ್​ ವೀರಯ್ಯ’, ‘ಖುಷಿ’, ‘ಉಸ್ತಾದ್​ ಭಗತ್​ ಸಿಂಗ್​’, ‘ಪುಷ್ಪ 2’ ಮುಂತಾದ ಸಿನಿಮಾಗಳು ಈ ಸಂಸ್ಥೆ ಮೂಲಕ ತಯಾರಾಗುತ್ತಿವೆ. ಎಲ್ಲ ಸೇರಿ ಒಟ್ಟು 700 ಕೋಟಿ ರೂಪಾಯಿ ಬಂಡವಾಳ ಹೂಡಲಾಗುತ್ತಿದೆ. ಇದರ ಆದಾಯದ ಮೂಲದ ಬಗ್ಗೆ ಸೂಕ್ತ ದಾಖಲೆ ಒದಗಿಸಿಲ್ಲ ಎಂದು ಹೇಳಲಾಗುತ್ತಿದೆ. ಆ ಹಿನ್ನೆಲೆಯಲ್ಲಿ ಐಟಿ ದಾಳಿ ಮಾಡಲಾಗಿದೆ.

ಇದನ್ನೂ ಓದಿ: Pushpa 2: ‘ಪುಷ್ಪ 2’ ಚಿತ್ರಕ್ಕೆ ಸಂಭಾವನೆ ಪಡೆಯಲ್ವಾ ನಿರ್ದೇಶಕ ಸುಕುಮಾರ್? ಇಲ್ಲಿದೆ ದೊಡ್ಡ ಪ್ಲ್ಯಾನ್​

ಈ ಸಂಸ್ಥೆಯಿಂದ ಕಳೆದ ವರ್ಷ ನಡೆದ ಹಣಕಾಸಿನ ವ್ಯವಹಾರದ ದಾಖಲೆಗಳನ್ನು ಪರಿಶೀಲಿಸಲಾಗುತ್ತಿದೆ. 2022-23ನೇ ಸಾಲಿನ ಐಟಿ ರಿಟರ್ನ್ಸ್​ನಲ್ಲಿ ಆದಾಯದ ಮೂಲದ ಬಗ್ಗೆ ಸರಿಯಾಗಿ ಮಾಹಿತಿ ಒದಗಿಸಿಲ್ಲ. ಆ ಕಾರಣದಿಂದಲೇ ಐಟ ದಾಳಿ ನಡೆದಿದೆ ಎಂದು ವರದಿ ಆಗಿದೆ. ಈ ದಾಳಿಯಿಂದಾಗಿ ಮುಂಬರುವ ಸಿನಿಮಾಗಳ ನಿರ್ಮಾಣದ ಮೇಲೆ ಪರಿಣಾಮ ಬೀರುವ ಸಾಧ್ಯತೆ ಇದೆ.

‘ಜನ ಸೇನಾ’ ಪಕ್ಷದ ಮುಖಂಡ ಪವನ್​ ಕಲ್ಯಾಣ್​ ಅವರ ‘ಉಸ್ತಾದ್​ ಭಗತ್​ ಸಿಂಗ್​’ ಸಿನಿಮಾಗೆ ‘ಮೈತ್ರಿ ಮೂವೀ ಮೇಕರ್ಸ್​’ ಬಂಡವಾಳ ಹೂಡುತ್ತಿದೆ. ಈ ಚಿತ್ರಕ್ಕೆ ಭಾನುವಾರ (ಡಿ.11) ಮುಹೂರ್ತ ಮಾಡಲಾಗಿತ್ತು. ಅದರ ಬೆನ್ನಲ್ಲೇ ಐಟಿ ದಾಳಿ ನಡೆದಿದೆ.

ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.

LEAVE A REPLY

Please enter your comment!
Please enter your name here