ಬೆಂಗಳೂರು: ಬೈಯ್ಯಪ್ಪನಹಳ್ಳಿಯಿಂದ ಕೆ.ಆರ್.ಪುರಂ ವಿಸ್ತೃತ ಮಾರ್ಗದಲ್ಲಿ ನಿನ್ನೆಯಿಂದ ನಮ್ಮ ಮೆಟ್ರೋ ಸಂಚಾರ ನಡೆಸುತ್ತಿದ್ದು ನಿನ್ನೆ ಒಂದೇ ಮಾರ್ಗದಲ್ಲಿ ಸಾವಿರಾರು ಜನರು ಸಂಚಾರ ಮಾಡಿದ್ದಾರೆ. ಬೈಯ್ಯಪ್ಪನಹಳ್ಳಿಯಿಂದ ವೈಟ್ಫೀಲ್ಡ್ವರೆಗೆ ನಿನ್ನೆ ಒಂದೇ ದಿನ 61,179 ಪ್ರಯಾಣಿಕರು ಮೆಟ್ರೋದಲ್ಲಿ ಓಡಾಡಿದ್ದಾರೆ.
Online Froud Case: ಆನ್‌ಲೈನ್ ವಂಚಕರ ಮೋಸದ ಜಾಲಕ್ಕೆ ಸಿಲುಕಬೇಡಿ, ಹುಷರಾಗಿರಿ: ಪೊಲೀಸ್ ಆಯುಕ್ತ ಬಿ.ದಯಾನಂದ ಮನವಿ!
ಟ್ರಾಫಿಕ್ ಜಾಮ್ ನಿಂದ ಕಂಗೆಟ್ಟಿರುವ ಬೆಂಗಳೂರಿಗರು ಇಂದಿನಿಂದ ನಿಟ್ಟುಸಿರು ಬಿಡಬಹುದಾಗಿದೆ. ನಮ್ಮ ಮೆಟ್ರೋ (Namma Metro) ರಾಜಧಾನಿ ಮಂದಿಗೆ ಗುಡ್ ನ್ಯೂಸ್ ಕೊಟ್ಟಿದ್ದು, ಇಂದಿನಿಂದ ಬಹು ನಿರೀಕ್ಷಿತ ಬೈಯಪ್ಪನಹಳ್ಳಿ (Baiyappanahalli) ಮತ್ತು ಕೆ ಆರ್ ಪುರ (K.R Pura) ನಡುವಿನ ಹಾಗೂ ಕೆಂಗೇರಿ ಮತ್ತು ಚಲಘಟ್ಟ ನಡುವೆ ಮೆಟ್ರೋ ರೈಲು ಓಡಾಟ ಆರಂಭ ಆಗಿದೆ.
ವೈಟ್‍ಫೀಲ್ಡ್ ನಿಂದ ಪಟ್ಟಂದೂರು ಅಗ್ರಹಾರ ನಿಲ್ದಾಣಕ್ಕೆ 10 ನಿಮಿಷ, ಪಟ್ಟಂದೂರು ಅಗ್ರಹಾರದಿಂದ ಮೈಸೂರು ರಸ್ತೆ ನಿಲ್ದಾಣಕ್ಕೆ 5 ನಿಮಿಷ, ಮೆಜೆಸ್ಟಿಕ್‍ನಿಂದ ಎಂಜಿ ರೋಡ್ ನಿಲ್ದಾಣಕ್ಕೆ 3 ನಿಮಿಷ ಮತ್ತು ಮೈಸೂರು ರಸ್ತೆಯಿಂದ ಚಲಘಟ್ಟಕ್ಕೆ (Challaghatta) 10 ನಿಮಿಷ ಬೇಕಾಗುತ್ತದೆ. ಎಲ್ಲಾ ಟರ್ಮಿನಲ್ ನಿಲ್ದಾಣಗಳಿಂದ ಬೆಳಗ್ಗೆ 5ಕ್ಕೆ ಮೆಟ್ರೋ ರೈಲು ಆರಂಭವಾದ್ರೇ, ಕೊನೆಯ ರೈಲು ವೈಟ್ ಫಿಲ್ಡ್ ನಿಂದ ರಾತ್ರಿ 10.45ಕ್ಕೆ ಹಾಗೂ ಉಳಿದ ಟರ್ಮಿನಲ್ ನಿಲ್ದಾಣಗಳಿಂದ ರಾತ್ರಿ 11.05ಕ್ಕೆ ಹೊರಡುತ್ತದೆ. ನೇರಳೆ ಮಾರ್ಗದ ಒಟ್ಟು ಪ್ರಯಾಣಕ್ಕೆ 60 ರೂಪಾಯಿ ಪ್ರಯಾಣ ದರವನ್ನು ಬೆಂಗಳೂರು ಮೆಟ್ರೋ ರೈಲು ನಿಗಮ ನಿಯಮಿತ (BMRCL) ನಿಗದಿ ಮಾಡಿದೆ.
The post Namma Metro: ಬೈಯ್ಯಪ್ಪನಹಳ್ಳಿಯಿಂದ ವೈಟ್ಫೀಲ್ಡ್ವರೆಗೆ ನಿನ್ನೆ ಒಂದೇ ದಿನ 61,179 ಪ್ರಯಾಣಿಕರ ಸಂಚಾರ appeared first on Ain Live News.