ಬೆಂಗಳೂರು: ಬೆಂಗಳೂರು ಮೆಟ್ರೋ ರೈಲು ನಿಗಮ (BMRCL)ವು ಫೆಬ್ರವರಿ 9, 2026ರಿಂದ ಜಾರಿಯಾಗಬೇಕಿದ್ದ ವಾರ್ಷಿಕ ಮೆಟ್ರೋ ದರ ಪರಿಷ್ಕರಣೆಯನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಿರುವುದಾಗಿ ಅಧಿಕೃತವಾಗಿ ತಿಳಿಸಿದೆ.
ಫೆಬ್ರವರಿ 5ರಂದು ಪ್ರಕಟಿಸಿದ್ದ ದರ ಪರಿಷ್ಕರಣೆ ಸಂಬಂಧಿಸಿದ ಮಾಧ್ಯಮ ಪ್ರಕಟಣೆಯನ್ನು ಮುಂದಿನ ಆದೇಶಗಳವರೆಗೆ ಜಾರಿಗೊಳಿಸಲಾಗುವುದಿಲ್ಲ ಎಂದು ಬಿಎಂಆರ್ಸಿಎಲ್ ಸ್ಪಷ್ಟಪಡಿಸಿದೆ.

ಪರಿಷ್ಕೃತ ದರ ಕುರಿತು ಬಿಎಂಆರ್ಸಿಎಲ್ ಬೋರ್ಡ್ ಪರಿಶೀಲನೆಯ ನಂತರ ಅಂತಿಮ ತೀರ್ಮಾನವನ್ನು ಪ್ರಕಟಿಸಲಾಗುವುದು ಎಂದು ಪ್ರಕಟಣೆಯಲ್ಲಿ ಹೇಳಲಾಗಿದೆ.
ನಗರದ ನಾಗರಿಕರಿಗೆ ಸುರಕ್ಷಿತ, ವಿಶ್ವಾಸಾರ್ಹ ಹಾಗೂ ಕೈಗೆಟುಕುವ ಸಾರಿಗೆ ಸೇವೆ ನೀಡಲು ಬಿಎಂಆರ್ಸಿಎಲ್ ಬದ್ಧವಾಗಿದೆ ಎಂದು ಸಂಸ್ಥೆ ತಿಳಿಸಿದೆ.
