ಬೆಂಗಳೂರು/ಶಿವಮೊಗ್ಗ: ಪ್ರಧಾನಿ ನರೇಂದ್ರ ಮೋದಿಯವರ 75ನೇ ಜನ್ಮದಿನದ ಅಂಗವಾಗಿ ಸೇವಾ ಪಾಕ್ಷಿಕ ಅಭಿಯಾನದಡಿ ಬಿಜೆಪಿ ಯುವ ಮೋರ್ಚಾ ವತಿಯಿಂದ ‘ನಶಾಮುಕ್ತ ಭಾರತಕ್ಕಾಗಿ – ನಮೋ ಯುವ ರನ್’ ಬೃಹತ್ ಮ್ಯಾರಥಾನ್ವನ್ನು ಶಿವಮೊಗ್ಗದಲ್ಲಿ ಭಾನುವಾರ ಆಯೋಜಿಸಲಾಯಿತು.
ಮ್ಯಾರಥಾನ್ಗೆ ಬಿಜೆಪಿ ರಾಜ್ಯಾಧ್ಯಕ್ಷ ಹಾಗೂ ಶಾಸಕ ವಿಜಯೇಂದ್ರ ಯಡಿಯೂರಪ್ಪ ಚಾಲನೆ ನೀಡಿದರು. ಈ ಸಂದರ್ಭದಲ್ಲಿ ಅವರು ಯುವಶಕ್ತಿಯ ಪ್ರತಿಬಿಂಬವಾಗಿರುವ ಈ ಮ್ಯಾರಥಾನ್ ನಶಾಮುಕ್ತ ಭಾರತದತ್ತ ಸಮಾಜವನ್ನು ಒಗ್ಗೂಡಿಸುವ ಸಂಕಲ್ಪವಾಗಿದೆ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಸಂಸದ ಬಿ.ವೈ. ರಾಘವೇಂದ್ರ, ಶಾಸಕ ಅರಗ ಜ್ಞಾನೇಂದ್ರ, ಚನ್ನಬಸಪ್ಪ, ಯುವ ಮೋರ್ಚಾ ರಾಜ್ಯಾಧ್ಯಕ್ಷ ಹಾಗೂ ಶಾಸಕ ಧೀರಜ್ ಮುನಿರಾಜು, ವಿಧಾನ ಪರಿಷತ್ ಸದಸ್ಯ ಡಿ.ಎಸ್. ಅರುಣ್, ಡಾ. ಧನಂಜಯ ಸರ್ಜಿ, ಮಾಜಿ ಶಾಸಕರಾದ ಆರ್.ಕೆ. ಸಿದ್ದರಾಮಣ್ಣ ಮತ್ತು ಕುಮಾರಸ್ವಾಮಿ, ಯುವ ಮೋರ್ಚಾ ರಾಜ್ಯ ಪ್ರಧಾನ ಕಾರ್ಯದರ್ಶಿ ಸಂದೀಪ್ ರವಿ ಹಾಜರಿದ್ದರು.
Also Read: Namo Youth Run Marathon Marks PM Narendra Modi’s 75th Birthday in Shivamogga
ಅದೇ ರೀತಿ ಚಿತ್ರನಟರು ಕು. ಕಾರುಣ್ಯ ರಾಮ್ ಮತ್ತು ಗೌರಿಶಂಕರ್, ಅಂತರರಾಷ್ಟ್ರೀಯ ಅಥ್ಲೆಟಿಕ್ ಕ್ರೀಡಾಪಟು ಸೌಮ್ಯ ಸಾವಂತ್, ಜಿಲ್ಲಾ ಬಿಜೆಪಿ ಅಧ್ಯಕ್ಷ ಜಗದೀಶ್, ಪ್ರಮುಖರು, ಕಾರ್ಯಕರ್ತರು ಮತ್ತು ವಿದ್ಯಾರ್ಥಿಗಳು ಉತ್ಸಾಹದಿಂದ ಭಾಗವಹಿಸಿದರು.
ಮ್ಯಾರಥಾನ್ನ ಮುಖ್ಯ ಉದ್ದೇಶ ಯುವ ಶಕ್ತಿಗೆ ದಾರಿ ತೋರಿಸುವುದು, ಫಿಟ್ನೆಸ್ ಬಗ್ಗೆ ಜಾಗೃತಿ ಮೂಡಿಸುವುದು ಮತ್ತು ನಶಾಮುಕ್ತ ಭಾರತ ನಿರ್ಮಾಣದ ಸಂದೇಶವನ್ನು ಹರಡುವುದಾಗಿತ್ತು.
