ನವದೆಹಲಿ: ಇಸ್ರೇಲ್ನಲ್ಲಿ (Isreal) ಮತ್ತೆ ರಕ್ತಚರಿತ್ರೆಯ ಯುದ್ಧ ಆರಂಭವಾಗಿದೆ. ಹಮಾಸ್ ಬಂಡುಕೋರರ ಪೈಶಾಚಿಕ ದಾಳಿಗೆ ಇಸ್ರೇಲ್ ತಲ್ಲಣಿಸಿದೆ. ಹಮಾಸ್ ಉಗ್ರರ ಹಾಗೂ ಇಸ್ರೇಲ್ ಯುದ್ಧದಲ್ಲಿ ಇಸ್ರೇಲ್ ಪರ ಭಾರತ ನಿಂತಿದೆ. ಎರಡು ದೇಶದ ಮಧ್ಯೆ ಯುದ್ಧ ನಡೆದಾಗ ಸೈಲೆಂಟ್ ಆಗಿ ಜಾಣ ನಡೆ ಅನುಸರಿಸಿದ ಭಾರತ (India), ಇಸ್ರೇಲ್ ವಿಚಾರದಲ್ಲಿ ಮೃದುವಾಗಿದೆ. ಹಮಾಸ್ ಉಗ್ರರ (Hamas Terrorist) ಕೃತ್ಯವನ್ನು ಬಹಿರಂಗವಾಗಿ ಪ್ರಧಾನಿ ಮೋದಿ (Narendra Modi) ಖಂಡಿಸಿದ್ದಾರೆ. ಇಸ್ರೇಲ್ ಜೊತೆ ಭಾರತ ನಿಲ್ಲಲಿದೆ ಅಂತಾ ಸಂದೇಶ ರವಾನಿಸಿದ್ದಾರೆ.
ಪ್ರಧಾನಿ ಮೋದಿಯ ಜೊತೆಗೆ ಇಡೀ ಭಾರತದ ಸೋಷಿಯಲ್ ಮೀಡಿಯಾದಲ್ಲಿ (Social Media) ಜನರಿಂದ ಹಮಾಸ್ ಉಗ್ರರ ಪೈಶಾಚಿಕ ರಕ್ಕಸ ವರ್ತನೆಗೆ ವಿರೋಧ ವ್ಯಕ್ತವಾಗಿದೆ. ಭಾರತೀಯರ ಟ್ವೀಟ್ ಮಹಾಮಳೆಗೆ ಇಸ್ರೇಲ್ ಕೂಡ ಭಾವುಕವಾಗಿದೆ. ಭಯೋತ್ಪಾದನೆಯ ವಿರುದ್ಧದ ಹೋರಾಟದಲ್ಲಿ ಇಸ್ರೇಲ್ ಜೊತೆ ನಿಲ್ಲೋಣ ಅನ್ನುವ ಸಂದೇಶವನ್ನು ಭಾರತೀಯರು ನೀಡಿದ್ದು, ಭಯೋತ್ಪಾದನೆಯ ಹಾಗೂ ಮತಾಂಧತೆಯ ವಿರುದ್ಧ ಹೋರಾಡುವಂತೆ ಕರೆ ನೀಡಲಾಗಿದೆ.
Iphone 15 Bigg Update: ಐಫೋನ್ 15 ಸೀರೀಸ್ ಬಳಕೆದಾರರಿಗೆ ಬಿಗ್ ಅಪೆ ಡೇಟ್: ಏನಂತೀರಾ?!
ವಿ ಆರ್ ವಿತ್ ಇಸ್ರೇಲ್ ಕ್ಯಾಂಪೇನ್ ಮೂಲಕ ಭಾರತೀಯರಿಂದ ಇಸ್ರೇಲ್ ಪರ ಧ್ವನಿ ಎತ್ತಲಾಗಿದೆ. ಇತ್ತ ಭಾರತದ ಬೆಂಬಲ ನಡುವೆ ಕಾಂಗ್ರೆಸ್ (Congress) ಭಿನ್ನ ನಿಲುವು ತಾಳಿದೆ. ಯುದ್ಧವನ್ನು ವಿರೋಧಿಸುತ್ತಲೇ ಪ್ಯಾಲೆಸ್ತೇನ್ (Palestine) ಪರ ಬ್ಯಾಟಿಂಗ್ ಮಾಡಿದೆ. ಪ್ಯಾಲೆಸ್ತೇನಿ ಜನರ ಹಕ್ಕುಗಳ ಪರ ಸೋಮವಾರ ನಡೆದ ಸಿಡಬ್ಲ್ಯೂಸಿ ಸಭೆಯಲ್ಲಿ ಪಕ್ಷದ ನಿರ್ಧಾರ ಮಾಡಲಾಗಿದೆ. ಕದನ ವಿರಾಮದ ಜತೆಗೆ ಎರಡು ದೇಶಗಳ ನಡುವಿನ ಸಮಸ್ಯೆ ಇತ್ಯರ್ಥಕ್ಕೆ ಕೈ ನಾಯಕರು ಆಗ್ರಹಿಸಿದ್ದಾರೆ.
The post Narendra Modi: ಭಯೋತ್ಪಾದನೆಯ ವಿರುದ್ಧದ ಹೋರಾಟದಲ್ಲಿ ಇಸ್ರೇಲ್ ಜೊತೆ ನಿಲ್ಲೋಣ: ಪ್ರಧಾನಿ ಮೋದಿ appeared first on Ain Live News.