Home ಬೆಂಗಳೂರು ನಗರ ರಾಜ್ಯಕ್ಕೆ ನವೀನ್ ಪಾರ್ಥಿವ ಶರೀರ ತರಲು ಆದ್ಯತೆ: ಮುಖ್ಯಮಂತ್ರಿ

ರಾಜ್ಯಕ್ಕೆ ನವೀನ್ ಪಾರ್ಥಿವ ಶರೀರ ತರಲು ಆದ್ಯತೆ: ಮುಖ್ಯಮಂತ್ರಿ

15
0
Indian student Indian student killed in Ukranian city of Kharkiv killed in Ukranian city of Kharkiv
pic source: twitter handle Nasir Khuehami (ناصر کہویہامی) @NasirKhuehami

ಬೆಂಗಳೂರು:

ಉಕ್ರೇನ್ ನಲ್ಲಿ ಮೃತಪಟ್ಟಿರುವ ನವೀನ್ ಪಾರ್ಥಿವ ಶರೀರವನ್ನು ತಾಯ್ನಾಡಿಗೆ ತರುವುದು ಸರ್ಕಾರದ ಪ್ರಥಮ ಆದ್ಯತೆಯಾಗಿದೆ. ನವೀನ್ ಕುಟುಂಬಕ್ಕೆ ಎಲ್ಲ ಸಹಾಯ, ಸಹಕಾರ ನೀಡ ಲಾಗುವುದು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಭರವಸೆ ನೀಡಿದರು.

ಅವರು ಇಂದು ತಮ್ಮ ನಿವಾಸದ ಬಳಿ ಮಾಧ್ಯಮದವರೊಂದಿಗೆ ಮಾತನಾಡಿದರು.

ಉಕ್ರೇನ್ ನಲ್ಲಿ ಮೃತಪಟ್ಟ ನವೀನ್ ಗ್ಯಾನಗೌಡರ್ ಅವರು ಹಾಕಿಕೊಂಡಿರುವ ಬಟ್ಟೆಗಳನ್ನು ಹೋಲುವ ಕೆಲವು ಛಾಯಾಚಿತ್ರಗಳನ್ನು ಆತನ ಸ್ನೇಹಿತರು ಕಳುಹಿಸಿಕೊಟ್ಟಿದ್ದಾರೆ. ಶೆಲ್ ದಾಳಿ ನಿಂತ ಮೇಲೆ ನವೀನ್ ಜೊತೆಗಿದ್ದವರು ತೆಗೆದ ಚಿತ್ರಗಳವು ಅವು. ಈ ಬಗ್ಗೆ ವಿದೇಶಾಂಗ ಸಚಿವರೊಂದಿಗೆ ಹಾಗೂ ಉಕ್ರೇನಿನಲ್ಲಿರುವ ಭಾರತೀಯ ರಾಯಭಾರಿ ಕಚೇರಿಗೂ ಮಾತನಾಡಿ ನವೀನ್ ಪಾರ್ಥಿವ ಶರೀರವನ್ನು ಪಡೆಯಲು ಗಂಭೀರ ಪ್ರಯತ್ನ ಮಾಡಲಾಗುವುದು ಎಂದರು.

ಭಾರತ ಸರ್ಕಾರ ಉಕ್ರೇನ್ ನಲ್ಲಿ ಸಿಲುಕಿರುವ ಭಾರತೀಯರನ್ನು ತೆರವು ಮಾಡಲು ತೀವ್ರ ಪ್ರಯತ್ನ ಮಾಡುತ್ತಿದೆ. ಸುಮಾರು 26 ವಿಮಾನಗಳು ಮುಂದಿನ 2-3 ದಿನಗಳಲ್ಲಿ ಕರೆತರುತ್ತಿದ್ದು, ಇಂಪೈಕಿ ಕನ್ನಡಿಗರನ್ನು ಕರೆತರಲು ಗರಿಷ್ಠ ಪ್ರಯತ್ನ ಮಾಡಲಾಗುವುದು.
ಬೇರೆ ಬೇರೆ ನಗರಗಳಲ್ಲಿ ಇರುವವರನ್ನು ಬೇರೆ ಬೇರೆ ದಿಕ್ಕಿನಲ್ಲಿ ಬರಲು ತಿಳಿಸಲಾಗಿದೆ. ವನ್ನು ನಿರಂತರವಾಗಿ ಸಮನ್ವಯ ಮಾಡಲಾಗುತ್ತಿದೆ.

ಯುದ್ಧ ನಡೆಯುತ್ತಿರುವುದರಿಂದ ಸ್ವಲ್ಪ ಕಷ್ಟವಾಗಿದೆ. ಭಾರತ ಸರ್ಕಾರ ಉಕ್ರೇನ್ ಸರ್ಕಾರದೊಂದಿಗೆ ಮಾತನಾಡಿ ಸುರಕ್ಷಿತ ವಲಯಗಳಿಗೆ ಹೇಗೆ ಹೋಗಬೇಕೆನ್ನುವುದನ್ನು ಯೋಜಿಸಿ ಗುಂಪಿನಲ್ಲಿ ತೆರಳಲು ನಿರ್ದೇಶನ ನೀಡಿದೆ. ಹತ್ತಿರದ ರೈಲ್ವೆ ನಿಲ್ದಾಣದಲ್ಲಿ ಪಶ್ಚಿಮ ದಿಕ್ಕಿನತ್ತ ಬರಲು ಯೋಜಿಸಿದೆ. ಯುದ್ಧ ಭೂಮಿಯಿಂದ ಕನ್ನಡಿಗರನ್ನು ಹೊರತರುವ ಪ್ರಯತ್ನ ನಡೆದಿದೆ.

ನವೀನ್ ಜೊತೆಗಿದ್ದವರ ಬಗ್ಗೆ ವಿಚಾರಣೆ

ನವೀನ್ ಜೊತೆಗಿದ್ದ ಗಾಯಾಳು ವಿದ್ಯಾರ್ಥಿಯ ಸ್ಥಿತಿಗತಿಯ ಬಗ್ಗೆ ವಿಚಾರಣೆ ನಡೆದಿದೆ.ಒಂದು ವರದಿಯ ಪ್ರಕಾರ ಜೊತೆಗಿದ್ದ ಎಂದು, ಮತ್ತೊಂದರ ಪ್ರಕಾರ ಇರಲಿಲ್ಲ. ಸುರಕ್ಷಿತವಾಗಿದ್ದಾನೆ ಎಂಬ ಮಾಹಿತಿಗಳಿವೆ. ಈ ಬಗ್ಗೆ ಖಚಿತಪಡಿಸಿಕೊಳ್ಳಲಾಗುತ್ತಿದೆ ಎಂದರು.

LEAVE A REPLY

Please enter your comment!
Please enter your name here