Home Uncategorized NDTV: ಎನ್​ಡಿಟಿವಿ ನಿರ್ದೇಶಕರ ಮಂಡಳಿಗೆ ಪ್ರಣಯ್ ರಾಯ್, ರಾಧಿಕಾ ರಾಯ್ ರಾಜೀನಾಮೆ

NDTV: ಎನ್​ಡಿಟಿವಿ ನಿರ್ದೇಶಕರ ಮಂಡಳಿಗೆ ಪ್ರಣಯ್ ರಾಯ್, ರಾಧಿಕಾ ರಾಯ್ ರಾಜೀನಾಮೆ

25
0

ನವದೆಹಲಿ: ಎನ್​​ಡಿಟಿವಿ (NDTV) ಸ್ಥಾಪಕರಾದ ಪ್ರಣಯ್ ರಾಯ್ (Prannoy Roy) ಮತ್ತು ಅವರ ಪತ್ನಿ ರಾಧಿಕಾ ರಾಯ್ (Radhika Roy) ಆರ್​ಆರ್​ಪಿಆರ್ ಹೋಲ್ಡಿಂಗ್ ಪ್ರೈವೇಟ್ ಲಿಮಿಟೆಡ್​ನ (RRPRH) ಆಡಳಿತ ನಿರ್ದೇಶಕರ ಮಂಡಳಿಗೆ ರಾಜೀನಾಮೆ ನೀಡಿದ್ದಾರೆ. ಇಬ್ಬರೂ ರಾಜೀನಾಮೆ ನೀಡಿದ್ದು, ನವೆಂಬರ್ 29ರಂದು ಇದು ಅಂಗೀಕೃತಗೊಂಡಿದೆ ಎಂಬುದಾಗಿ ಕಂಪನಿಯು ಹೂಡಿಕೆದಾರರಿಗೆ ತಿಳಿಸಿದೆ. ಆರ್​ಆರ್​ಪಿಆರ್ ಹೋಲ್ಡಿಂಗ್ ಪ್ರೈವೇಟ್ ಲಿಮಿಟೆಡ್ ಎನ್​ಡಿವಿಯ ಶೇಕಡಾ 29.18 ಪಾಲು ಹೊಂದಿದ್ದು, ಇದನ್ನು ಅದಾನಿ ಸಮೂಹ ಖರೀದಿಸಿದೆ. ಆರ್​ಆರ್​ಪಿಆರ್ ಹೋಲ್ಡಿಂಗ್ ಪ್ರೈವೇಟ್ ಲಿಮಿಟೆಡ್ ತಕ್ಷಣದಿಂದಲೇ ಜಾರಿಗೆ ಬರುವಂತೆ ಸುದೀಪ್ತ ಭಟ್ಟಾಚಾರ್ಯ, ಸಂಜಯ್ ಪುಗಲಿಯಾ ಹಾಗೂ ಸೆಂಥಿಲ್ ಸಿನ್ನಿಯಾ ಚೆಂಗಲವರಾಯನ್ ಅವರನ್ನು ನಿರ್ದೇಶಕರನ್ನಾಗಿ ನೇಮಕ ಮಾಡಿದೆ ಎಂದು ಎನ್​ಡಿಟಿವಿ ತಿಳಿಸಿದೆ.

ಎನ್​ಡಿಟಿವಿಯ ಶೇಕಡಾ 29.18ರಷ್ಟು ಷೇರುಗಳನ್ನು ಅದಾನಿ ಸಮೂಹ ಖರೀದಿ ಮಾಡಿದ್ದು, ಇನ್ನೂ ಶೇಕಡಾ 26ರಷ್ಟು ಷೇರುಗಳ ಖರೀದಿಗೆ ಉತ್ಸಾಹ ಹೊಂದಿರುವುದಾಗಿ ಈಗಾಗಲೇ ಘೋಷಿಸಿದೆ.

ಇದನ್ನೂ ಓದಿ: Forbes 100 Richest Indians: ಫೋರ್ಬ್ಸ್ ಶ್ರೀಮಂತ ಭಾರತೀಯರ ಪಟ್ಟಿ; ಅಗ್ರ ಸ್ಥಾನದಲ್ಲಿ ಗೌತಮ್ ಅದಾನಿ, ಮುಕೇಶ್ ಅಂಬಾನಿ

ಅದಾನಿ ಸಮೂಹವು ಆಗಸ್ಟ್​ನಲ್ಲಿ ಆರ್​ಪಿಆರ್ ಹೋಲ್ಡಿಂಗ್ ಪ್ರೈವೇಟ್ ಲಿಮಿಟೆಡ್​ ಅನ್ನು ಬಹುತೇಕ ನಿಯಂತ್ರಣಕ್ಕೆ ತೆಗೆದುಕೊಂಡಿತ್ತು. ಇನ್ನುಳಿದ ಶೇಕಡಾ 26ರಷ್ಟು ಷೇರುಗಳನ್ನು ಖರೀದಿಸುವಲ್ಲಿ ಯಶಸ್ವಿಯಾದರೆ ಒಟ್ಟು ಶೇಕಡಾ 55.18ರಷ್ಟು ಷೇರುಗಳು ಅದಾನಿ ಸಮೂಹದ ಪಾಲಾಗಲಿವೆ. ಇದರೊಂದಿಗೆ ಎನ್​ಡಿಟಿವಿ ಆಡಳಿತ ಮಂಡಳಿಯನ್ನು ಸಂಪೂರ್ಣ ನಿಯಂತ್ರಣಕ್ಕೆ ತೆಗೆದುಕೊಳ್ಳುವುದು ಅದಾನಿ ಸಮೂಹಕ್ಕೆ ಸಾಧ್ಯವಾಗಲಿದೆ. ರಾಯ್ ದಂಪತಿ ಎನ್​ಡಿಟಿವಿಯಲ್ಲಿ ಶೇಕಡಾ 32.26ರಷ್ಟು ಪಾಲು ಹೊಂದಿದ್ದಾರೆ.

ಏನಾಗುತ್ತಿದೆ ಎನ್​ಡಿಟಿವಿ ಆಡಳಿತ ಮಂಡಳಿಯಲ್ಲಿ?

ಆಗಸ್ಟ್ 23ರಂದು ಗೌತಮ್ ಅದಾನಿ ನೇತೃತ್ವದ ಅದಾನಿ ಸಮೂಹವು ಎನ್​ಡಿಟಿವಿಯ ಶೇಕಡಾ 29.18ರಷ್ಟು ಷೇರುಗಳನ್ನು ಖರೀದಿಸಿತ್ತು. ಇನ್ನೂ ಶೇಕಡಾ 26ರಷ್ಟು ಷೇರುಗಳ ಖರೀದಿಗೆ ಆಸಕ್ತಿ ಹೊಂದಿರುವುದಾಗಿ ಮಾರುಕಟ್ಟೆ ನಿಯಂತ್ರಕ ಸೆಬಿಗೆ ತಿಳಿಸಿತ್ತು. ನವೆಂಬರ್ 26ರಂದು ಅದಾನಿ ಸಮೂಹ ಷೇರು ಖರೀದಿಗೆ ಬಹಿರಂಗ ಆಫರ್ ಘೋಷಿಸಿತ್ತು. ಇದು ಡಿಸೆಂಬರ್ 5ರ ವರೆಗೆ ಮಾನ್ಯವಾಗಿರಲಿದೆ. ಸೆಬಿ ನಿಯಮಗಳ ಪ್ರಕಾರ, ನಿರ್ದಿಷ್ಟ ಕಂಪನಿಯ ಶೇಕಡಾ 25ಕ್ಕಿಂತಲೂ ಹೆಚ್ಚು ಷೇರುಗಳನ್ನು ಹೊಂದಿರುವವರು ಇನ್ನಷ್ಟು ಷೇರು ಖರೀದಿಗೆ ಬಹಿರಂಗ ಆಫರ್ ಘೋಷಿಸಿದೆ ಅದಕ್ಕೆ ಉತ್ತೇಜನ ನೀಡಬೇಕಾಗುತ್ತದೆ. ಹೀಗಾಗಿ ಎನ್​ಡಿಟಿವಿಯ ಹೆಚ್ಚಿನ ಷೇರು ಖರೀದಿಯ ಅದಾnಇ ಸಮೂಹದ ಆಸಕ್ತಿಗೆ ನಿಯಮಗಳ ಪ್ರಕಾರ ಅವಕಾಶ ದೊರೆಯಲಿದೆ. ಅಂದುಕೊಂಡಷ್ಟು ಷೇರುಗಳನ್ನು ಖರೀದಿಸಿದರೆ ಎನ್​ಡಿಟಿವಿಯ ಸಂಪೂರ್ಣ ನಿಯಂತ್ರಣ ಅದಾನಿ ಸಮೂಹದ ಪಾಲಾಗಲಿದೆ.

ಇನ್ನಷ್ಟು ವಾಣಿಜ್ಯ ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ

LEAVE A REPLY

Please enter your comment!
Please enter your name here