ಹುಬ್ಬಳ್ಳಿ: ಹೆಣ್ಣು ಮಕ್ಕಳನ್ನು ದೇವರು ಎಂದು ಪೂಜಿಸುವ ದೇಶ ನಮ್ಮದು. ತಪ್ಪು ಮಾಡಿರುವ ನನ್ನ ಮಗನಿಗೆ ಕಾನೂನಿನಲ್ಲಿ ಎಂಥ ಶಿಕ್ಷೆ ಕೊಟ್ಟರು ನಾನು ಸ್ವಾಗತಿಸುತ್ತೇನೆ ಎಂದು ಹಂತಕ ಫಯಾಜ್‌ನ ತಂದೆ ಬಾಬಾ ಸಾಹೇಬ್ ಹೇಳಿಕೆ ನೀಡಿದ್ದಾರೆ.
ಹುಬ್ಬಳ್ಳಿ ಯುವತಿ ನೇಹಾ ಹಿರೇಮಠ್ ಕೊಲೆಗೆ ಸಂಬಂಧಿಸಿದ್ದಂತೆ ಹಂತಕ ಫಯಾಜ್‌ನನ್ನು ಪೊಲೀಸರು ಬಂಧಿಸಿದ್ದಾರೆ. ಸದ್ಯ ಘಟನೆಯ ಬಗ್ಗೆ ಆತನ ತಂದೆ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ್ದಾರೆ. ಮಗನಿಗೆ ಯಾವುದೇ ದೊಡ್ಡ ಶಿಕ್ಷೆ ನೀಡಿದರು ಸ್ವಾಗತ ಎಂದಿದ್ದಾರೆ.
ಮಕ್ಕಳು ಎಂದರೆ ದೇವರೆಂದು ಭಾವಿಸುವ ದೇಶ ನಮ್ಮದು. ಹೆಣ್ಣು ಮಕ್ಕಳು ಎಂದರೆ ಪೂಜಿಸುತ್ತೇವೆ. ಈ ಘಟನೆಯಿಂದ ನಮ್ಮ ಊರಿಗೆ (ಮುನವಳ್ಳಿ) ಕಪ್ಪು ಚುಕ್ಕೆ ಬಂದಿದೆ. ರಾಜ್ಯದ ಜನತೆ ಹಾಗೂ ಮುನವಳ್ಳಿ ಯುವಕರು ಶಾಂತಿ ಕಾಪಾಡುಬೇಕು ಎಂದು ಮನವಿ ಮಾಡಿದರು.
2 ವರ್ಷದಿಂದ ನಮ್ಮ ಮಗ ನಮ್ಮ ಬಳಿ ಇಲ್ಲ. ಓದಲೆಂದು ಹುಬ್ಬಳ್ಳಿ ನಗರ ಪ್ರದೇಶಕ್ಕೆ ಹೋಗಿದ್ದನು. ನೇಹಾ ನನ್ನ ಮಗಳಿದ್ದ ಹಾಗೆ. ಅವರ ಮಗಳಿಗೆ ಆದ ಕೃತ್ಯ ನಮ್ಮ ಮಗಳ ಮೇಲೆಯೂ ಆಗಬಹುದು. ಘಟನೆ ಖಂಡಿಸಿ ನ್ಯಾಯಕ್ಕಾಗಿ ಪ್ರತಿಭಟನೆ ನಡೆಸೋದು ತಪ್ಪಲ್ಲ. ಯಾವ ಹೆಣ್ಣು ಮಕ್ಕಳ ಮೇಲೆ ಯಾರೂ ಕಣ್ಣು ಹಾಕಬಾರದು ಎಂದು ಕೃತ್ಯವನ್ನು ಖಂಡಿಸಿದರು.