ಬೆಳಗಾವಿ:
ಲಿಂಗಾಯತ ಸಮಾಜದ ಅನೇಕ ರಾಜಕಾರಣಿಗಳು ಮುಖ್ಯಮಂತ್ರಿಯಾಗಿದ್ದಾರೆ, ಆದರೆ ಬಸವರಾಜ ಬೊಮ್ಮಾಯಿ ಅವರಂತಹ ಭ್ರಷ್ಟ ಮುಖ್ಯಮಂತ್ರಿಯನ್ನು ನಾನು ನೋಡಿಲ್ಲ’ ಎಂದು ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಅವರು ಮಂಗಳವಾರ ಆರೋಪಿಸಿದ್ದಾರೆ.
ನಿನ್ನೆಯಷ್ಟೇ ಬೆಳಗಾವಿ ಜಿಲ್ಲೆಯ ಕಾಗವಾಡ ತಾಲೂಕಿನ ಉಗಾರ ಖುರ್ದ ಗ್ರಾಮಕ್ಕೆ ಭೇಟಿ ನೀಡಿದ ಅವರು, ಈ ಸಂದರ್ಭದಲ್ಲಿ ಕಾಂಗ್ರೆಸ್ ಅಭ್ಯರ್ಥಿ ರಾಜು ಕಾಗೆ ಅವರ ಪರ ಪ್ರಚಾರ ನಡೆಸಿದರು.
ಪ್ರಚಾರದ ವೇಳೆ ಮೇ 10ರಂದು ನಡೆಯಲಿರುವ ಚುನಾವಣೆಯಲ್ಲಿ ಕಾಗವಾಡ ಕ್ಷೇತ್ರದಿಂದ ಸ್ಪರ್ಧಿಸಿರುವ ರಾಜು ಕಾಗೆ ಅವರನ್ನು ಬೆಂಬಲಿಸುವಂತೆ ಜನತೆಗೆ ಕರೆ ನೀಡಿದರು.
ಬೆಳಗಾವಿ ಜಿಲ್ಲೆಯ ರಾಯಭಾಗದಲ್ಲಿ ಇಂದು ಆಯೋಜಿಸಿದ್ದ ಚುನಾವಣಾ ಪ್ರಚಾರ ಸಭೆಯಲ್ಲಿ ಪಾಲ್ಗೊಂಡು, ಭ್ರಷ್ಟಾಚಾರ, ಕೋಮುವಾದ, ಕಮಿಷನ್ ಹಗರಣದಲ್ಲಿ ಮುಳುಗಿರುವ ಬಿಜೆಪಿಯನ್ನು ಅಧಿಕಾರದಿಂದ ದೂರವಿಡಲು ಕಾಂಗ್ರೆಸ್ ಅಭ್ಯರ್ಥಿ ಮಹಾವೀರ ಮೊಹಿತೆ ಅವರನ್ನು ಗೆಲ್ಲಿಸಿ, ನಿಮಗಾಗಿ ದುಡಿಯುವ ನಮ್ಮ ಕೈಗಳನ್ನು ಬಲಪಡಿಸಿ ಎಂದು ಮತದಾರರಲ್ಲಿ ಮನವಿ ಮಾಡಿದೆ. pic.twitter.com/yaHpPVMt7Q
— Siddaramaiah (@siddaramaiah) April 25, 2023
ನಿಮ್ಮ ಉತ್ಸಾಹವನ್ನು ನೋಡಿದರೆ ರಾಜು ಕಾಗೆ ಗೆಲ್ಲುತ್ತಾರೆಂಬ ವಿಶ್ವಾಸ ಬರುತ್ತಿದೆ, ಇಡೀ ರಾಜ್ಯದಲ್ಲಿ ಕಾಂಗ್ರೆಸ್ ಪರ ಅಲೆ ಎದ್ದಿದೆ ಎಂದು ಹೇಳಿದರು.
ನಾನು ಮುಖ್ಯಮಂತ್ರಿಯಾಗಿದ್ದಾಗ 7 ಕೆಜಿ ಅಕ್ಕಿ ನೀಡಿದ್ದೆ. ಆದರೆ, ಬಿಜೆಪಿ ಇದನ್ನು 5 ಕೆಜಿಗೆ ಇಳಿಸಿದೆ, ಯಡಿಯೂರಪ್ಪ ಅವರನ್ನು ಯಾಕೆ ಹೀಗೆ ಕಡಿಮೆ ಮಾಡಿದ್ದೀರಿ ಎಂದು ಕೇಳಿದ್ದೆ, ಇದಕ್ಕೆ ಅವರು ಪ್ರತಿಕ್ರಿಯೆ ನೀಡಲಿಲ್ಲ. ಈ ವೇಳೆ ಅಕ್ಕಿಯನ್ನಲ್ಲ, ಲಂಚವನ್ನು ಕಡಿಮೆ ಮಾಡಿ ಎಂದು ಹೇಳಿದ್ದೆ. ಚುನಾವಣೆ ಬಂತೆಂದು ಅಮಿತ್ ಶಾ, ಮೋದಿ ರಾಜ್ಯಕ್ಕೆ ಬರುತ್ತಿದ್ದಾರೆ. ಪ್ರವಾಸ ಬಂದಾಗ ಇವರು ಎಲ್ಲಿದ್ದರು ಎಂದು ಪ್ರಶ್ನಿಸಿದರು.
ಮಾಜಿ ಉಪಮುಖ್ಯಮಂತ್ರಿ ಲಕ್ಷ್ಮಣ ಸವದಿ ಮಾತನಾಡಿ, ಶೀಘ್ರದಲ್ಲಿಯೇ ತಮ್ಮ ಕ್ಷೇತ್ರವನ್ನು ಭ್ರಷ್ಟಾಚಾರದಿಂದ ಮುಕ್ತಗೊಳಿಸುವುದಾಗಿ ಶಾಸಕ ಶ್ರೀಮಂತ ಪಾಟೀಲ ಭರವಸೆ ನೀಡಿದ್ದಾರೆ. ಆದರೆ, ಅವರಿಗೆ ಸೇರಿದ ಕಾಗವಾಡ ಕ್ಷೇತ್ರದಲ್ಲಿ ಭ್ರಷ್ಟಾಚಾರ ತುಂಬಿ ತುಳುಕುತ್ತಿದೆ ಎಂಬ ಮಾಹಿತಿ ಬಂದಿದೆ ಎಂದು ಹೇಳಿದರು.
ನಾನು ಮತ್ತು ರಾಜು ಕಾಗೆ ಉತ್ತಮ ಸ್ನೇಹಿತರು. ಒಟ್ಟಿಗೆ ರಾಜಕೀಯಕ್ಕೆ ಬಂದೆವು. ನಾವಿಬ್ಬರೂ ಒಂದೇ ನಾಣ್ಯದ ಎರಡು ಮುಖಗಳಿದ್ದಂತೆ ಎಂದು ತಿಳಿಸಿದರು.