ಚಿಕ್ಕಬಳ್ಳಾಪುರ-ಹುಬ್ಬಳ್ಳಿಯಲ್ಲಿ ಲೀಥಿಯಂ ಬ್ಯಾಟರಿ ಘಟಕಗಳ ಸ್ಥಾಪನೆ ಆಗುತ್ತಿವೆ ಎಂದ ಡಿಸಿಎಂ
ಬೆಂಗಳೂರು:
ವಾಯುಮಾಲಿನ್ಯವನ್ನು ನಿವಾರಿಸುವ ನಿಟ್ಟಿನಲ್ಲಿ ಮುಂದಿನ ದಿನಗಳಲ್ಲಿ ಎಲೆಕ್ಷ್ರಿಕ್ ವಾಹನಗಳಿಗೆ ಹೆಚ್ಚು ಉತ್ತೇಜನ ನೀಡಲಾಗುವುದು. ಈ ನಿಟ್ಟಿನಲ್ಲಿ ರಾಜ್ಜದಲ್ಲಿ ಎರಡು ಲೀಥಿಯಂ ಬ್ಯಾಟರಿ ಘಟಕಗಳು ಸ್ಥಾಪನೆಯಾಗುತ್ತಿವೆ ಎಂದು ಉಪ ಮುಖ್ಯಮಂತ್ರಿ ಡಾ.ಸಿ.ಎನ್.ಅಶ್ವತ್ಥನಾರಾಯಣ ಹೇಳಿದರು.
ವಿಧಾನಸೌಧದ ಪೂರ್ವಧ್ವಾರದಲ್ಲಿಶನಿವಾರ ರೋಟರಿ ಕ್ಲಬ್ ಹಮ್ಮಿಕೊಂಡಿದ್ದ ಎಲೆಕ್ಟ್ರಿಕ್ ವಾಹನಗಳ rallyಗೆ ರ್ಯಾಲಿಗೆ ಚಾಲನೆ ನೀಡಿದ ನಂತರ ಮಾತನಾಡಿದ ಅವರು, ಲೀಥಿಯಂ ಬ್ಯಾಟರಿಗಳನ್ನು ತಯಾರಿಸುವ ಬೃಹತ್ತಾದ ಎರಡು ಕೈಗಾರಿಕೆಗಳ ಪೈಕಿ ಒಂದು ಹುಬ್ಬಳ್ಳಿ ಭಾಗದಲ್ಲಿ, ಇನ್ನೊಂದು ಚಿಕ್ಕಬಳ್ಳಾಪುರ ಕಡೆ ಸ್ಥಾಪನೆಯಾಗುತ್ತಿವೆ. ಇದರ ಜತೆಗೆ, ಅತ್ಯುತ್ತಮವಾದ ಇಂಧನ ನೀತಿಯನ್ನು ರಾಜ್ಯ ಸರಕಾರ ರೂಪಿಸುತ್ತಿದೆ ಎಂದರು.
2018ರಲ್ಲಿಯೇ ರಾಜ್ಯವೂ ದೇಶದಲ್ಲೇ ಮೊದಲಿಗೆ ಎಲೆಕ್ಟ್ರಿಕ್ ವಾಹನಗಳ ನೀತಿಯನ್ನು ರೂಪಿಸಿ ಜಾರಿಗೆ ತಂದಿದೆ. ಚಾರ್ಚಿಂಗ್ ಸ್ಟೇಷನ್ಗಳಲ್ಲಿ ಗ್ರಾಹಕರಿಗೆ ರಿಯಾಯಿತಿ ನೀಡಲಾಗುತ್ತಿದ್ದು; ವಾಣಿಜ್ಯ ಬಳಕೆಯ ವಿದ್ಯುತ್ ನ ಪ್ರತಿ ಯೂನಿಟ್ ಗೆ 9 ರೂ. ಇದ್ದರೆ, ಎಲೆಕ್ಟ್ರಿಕ್ ವಾಹನಗಳಿಗೆ 5 ರೂ.ದರದಲ್ಲಿಯೇ ನೀಡಲಾಗುತ್ತಿದೆ ಎಂದರು.
ಬೆಂಗಳೂರಿನಲ್ಲಿ ಈ ಕ್ಷೇತ್ರದಲ್ಲಿ ಸಾಕಷ್ಟು ಆವಿಷ್ಕಾರಗಳು ನಡೆಯುತ್ತಿದ್ದು, ಮುಂದಿನ ದಿನಗಳಲ್ಲಿ ತಯಾರಕರು ವಾಹನವನ್ನು ಮಾತ್ರ ನೀಡಲಿದ್ದಾರೆ. ಗ್ರಾಹಕರು ಬ್ಯಾಟರಿಯನ್ನು ಬಾಡಿಗೆಗೆ ಪಡೆದುಕೊಂಡು ವಾಹನ ಚಾಲನೆ ಮಾಡುವ ದಿನಗಳು ದೂರವಿಲ್ಲ. ರಸ್ತೆಗಳ ಉದ್ದಗಲಕ್ಕೂ ʼಬ್ಯಾಟರಿ ಬ್ಯಾಂಕ್ʼ ಗಳು ಕೂಡ ಸ್ಥಾಪನೆಯಾಗಲಿದ್ದು, ಅವು ಕೂಡ ಪೆಟ್ರೋಲ್ ಬಂಕ್ ಗಳಂತೆ ಕೆಲಸ ಮಾಡಲಿವೆ. ಮೊದಲೇ ಅವುಗಳನ್ನು ಚಾರ್ಚ್ ಮಾಡಿ ಇಟ್ಟಿರಲಾಗುತ್ತದೆ. ಬ್ಯಾಟರಿಯನ್ನು ವಾಹನಕ್ಕೆ ಅಳವಡಿಸಿಕೊಂಡು ಹೋಗುವ ವ್ಯವಸ್ಥೆ ಅತಿ ಬೇಗನೇ ರಾಜ್ಯದಲ್ಲಿ ಕಾಣಬಹುದು. ಇದರಿಂದ ಎಲೆಕ್ಟ್ರಿಕ್ ವಾಹನಗಳ ದರವೂ ತುಂಬಾ ಕಡಿಮೆ ಇರುತ್ತದೆ ಎಂದರು ಡಿಸಿಎಂ.
ಲೀಥಿಯಂ ಬ್ಯಾಟರಿಗಳ ಉತ್ಪಾದನಾ ಘಟಕಗಳನ್ನು ಹುಬ್ಬಳ್ಳಿ ಹಾಗೂ ಕೋಲಾರದಲ್ಲಿ ಸ್ಥಾಪಿಸಲು ಸರ್ಕಾರದ ಯೋಜನೆಯಿದೆ.
— Dr. Ashwathnarayan C. N. (@drashwathcn) January 30, 2021
ಭವಿಷ್ಯದ ದೃಷ್ಟಿಯಿಂದ ಇಂತಹ ದೂರದೃಷ್ಟಿ ಯೋಜನೆಗಳ ಸಮರ್ಪಕ ಅನುಷ್ಠಾನಕ್ಕಾಗಿ ಕೈಜೋಡಿಸೋಣ.@CMofKarnataka @KarnatakaVarthe
2/2
ಎಲೆಕ್ಟ್ರಿಕ್ ವಾಹನಗಳ ಉದ್ಯಮ ಬೆಳೆಯುತ್ತಿರುವ ವೇಗವನ್ನು ನೋಡಿದರೆ, ಇನ್ನು ಕೇವಲ ಹತ್ತು ವರ್ಷಗಳಲ್ಲಿ ಪೆಟ್ರೋಲ್, ಡೀಸೆಲ್ ಚಾಲಿತ ವಾಹನಗಳು ಕಣ್ಮರೆಯಾಗಬಹುದು. ರಾಜ್ಯದಲ್ಲಿ ಈ ಕ್ಷೇತ್ರಕ್ಕೆ ಸರಕಾರ ಹೆಚ್ಚು ಉತ್ತೇಜನ ನೀಡುತ್ತಿದೆ. ಹೆಚ್ಚಿನ ಪ್ರಮಾಣದಲ್ಲಿ ಚಾರ್ಚಿಂಗ್ ಸ್ಟೇಷನ್ ಗಳನ್ನು ಮಾಡಲು ಬೆಸ್ಕಾಂ ನೋಡೆಲ್ ಏಜೆನ್ಸಿಯಾಗಿ ಕೆಲಸ ಮಾಡುತ್ತಿದೆ. ಈಗಾಗಲೇ ಬೆಸ್ಕಾಂ ವತಿಯಿಂದ 150 ಚಾರ್ಚಿಂಗ್ ಸ್ಟೇಷನ್ ಗಳನ್ನು ಮಾಡಲಾಗಿದೆ. ಇನ್ನೂ 150 ಚಾರ್ಚಿಂಗ್ ಸ್ಟೇಷನ್ ಗಳನ್ನು ಸ್ಥಾಪಿಸಲು ಎನ್ಟಿಪಿಸಿ ಜತೆ ಕೈಜೋಡಿಸಲಾಗಿದೆ ಎಂದು ಡಾ.ಅಶ್ವತ್ಥನಾರಾಯಣ ನುಡಿದರು.