Home Uncategorized New year celebration: ಹೊಸ ವರ್ಷಾಚರಣೆಗೆ ದಿನದ 24 ಗಂಟೆ ಹೋಟೆಲ್ ತೆರೆಯಲು ಗೃಹ ಇಲಾಖೆಗೆ...

New year celebration: ಹೊಸ ವರ್ಷಾಚರಣೆಗೆ ದಿನದ 24 ಗಂಟೆ ಹೋಟೆಲ್ ತೆರೆಯಲು ಗೃಹ ಇಲಾಖೆಗೆ ಮನವಿ

9
0

ಬೆಂಗಳೂರು: ಕೊರೊನಾ ಕಾರಣದಿಂದ ಕಳೆದ ಎರಡು ವರ್ಷ ಸಿಲಿಕಾನ್​ ಸಿಟಿ ಬೆಂಗಳೂರಲ್ಲಿ ಹೊಸವರ್ಷಾರಣೆ (New Year) ಕಳೆಗುಂದಿತ್ತು. ಈಗ ಕೊರೊನಾ (Covid) ಕಡೆಮೆಯಾಗಿದ್ದು, ಹೊಸವರ್ಷವನ್ನು ಅದ್ಧೂರಿಯಾಗಿ ಸ್ವಾಗತಿಸಲು ಜನರು ಸಿದ್ದರಾಗಿದ್ದಾರೆ. ಈ ಸಂಬಂಧ ಹೊಸವರ್ಷದ ಸಂಭ್ರಮಾಚಣೆಗೆ ದಿನದ 24 ಗಂಟೆ ಹೋಟೆಲ್  (Hotel) ತೆರೆಯಲು ಅನುಮತಿ ನೀಡುವಂತೆ ಹೋಟೆಲ್​ಗಳ ಸಂಘ (Hotel association) ರಾಜ್ಯ ಗೃಹ ಇಲಾಖೆಗೆ ಪತ್ರ ಬರೆದಿದೆ.

ಕಳೆದ ಎರಡು ವರ್ಷದಿಂದ ಹೊಸವರ್ಷ ಆಚರಣೆಗೆ ಕೊರೊನಾ ಅಡ್ಡಿಯಾಗಿತ್ತು. ಹೀಗಾಗಿ ಈ ಬಾರಿ ಹೊಸವರ್ಷಾಚರಣೆಯನ್ನು ಅದ್ದೂರಿಯಾಗಿ ಆಚರಿಸಲು ತೀರ್ಮಾನಿಸಿದ್ದೇವೆ. ಈ ಹಿನ್ನೆಲೆ ಬೆಳಗಿನ ಜಾವ 3 ಗಂಟೆವರೆಗು ಹೋಟೆಲ್, ರೆಸ್ಟೋರೆಂಟ್, ಬಾರ್ ಮತ್ತು ರೆಸ್ಟೋರೆಂಟ್, ಬೇಕರಿ, ಐಸ್ ಕ್ರೀಂ ಪಾರ್ಲರ್​ತೆರಯಲು ಅನುಮತಿ ನೀಡುವಂತೆ ಗೃಹ ಇಲಾಖೆಯ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ರಜನೀಶ್ ಗೋಯೆಲ್ ಅವರಿಗೆ ಹೋಟೆಲ್​ಗಳ ಸಂಘ ಪತ್ರ ಬರೆದಿದೆ.

ಇದನ್ನೂ ಓದಿ: ಬೆಂಗಳೂರು ವಿಮಾನ ನಿಲ್ದಾಣದ ಟರ್ಮಿನಲ್ 2 ಮೆಟಾವರ್ಸ್​​ನಲ್ಲಿ ಲಭ್ಯ; ಇದು ವಿಶ್ವದಲ್ಲೇ ಮೊದಲು

ಫಿಫಾ ವಿಶ್ವಕಪ್ ಸೆಮಿಪೈನಲ್: ಬೆಂಗಳೂರಿನಲ್ಲಿ ಬಾರ್ & ರೆಸ್ಟೋರೆಂಟ್, ಪಬ್​ಗಳ ಅವಧಿ ವಿಸ್ತರಣೆ

ಫಿಫಾ ವಿಶ್ವಕಪ್ ಸೆಮಿಪೈನಲ್ ಹಿನ್ನಲೆ ಬೆಂಗಳೂರಿನ ಪಬ್, ಬಾರ್ ಮತ್ತು ರೆಸ್ಟೋರೆಂಟ್​ಗಳ ಅವಧಿ ವಿಸ್ತರಣೆ ಮಾಡಲಾಗಿದೆ. ಡಿಸೆಂಬರ್ 14 ಹಾಗೂ 15 ರಂದು ಬೆಳಗಿನ ಜಾವ 3.30 ರ ತನಕ ತೆರೆಯಲು ಅವಕಾಶ ನೀಡಿ ಬೆಂಗಳೂರು ನಗರ  ಪೊಲೀಸ್ ಆಯುಕ್ತ ಪ್ರತಾಪ್ ರೆಡ್ಡಿ ಆದೇಶ ಆದೇಶ ಹೊರಡಿಸಿದ್ದಾರೆ.

ಇದುವರೆಗೆ ಮಧ್ಯರಾತ್ರಿ 1 ತನಕ ತೆರೆಯಲು ಮಾತ್ರ ಅವಕಾಶವಿತ್ತು. ಆದ್ರೆ, ಇದೀಗ ಫಿಫಾ ವಿಶ್ವಕಪ್ ಸೆಮಿಪೈನಲ್ ನಡೆಯುವ ಹಿನ್ನಲೆ ಎರೆಡು ದಿನ ಅವಧಿ ವಿಸ್ತರಿಸಲಾಗಿದೆ. ಅವಧಿ ವಿಸ್ತರಿಸುವಂತೆ ಪೆಡರೇಷನ್ ಆಫ್ ಕ್ಲಬ್ಸ್ ಕರ್ನಾಟಕ ಮನವಿ ಮಾಡಿದ್ದರು. ಮನವಿ ಮೇರೆಗೆ ಎರೆಡು ದಿನ ಅವಧಿ ವಿಸ್ತರಣೆ ಮಾಡಿ ನಗರ ಪೊಲೀಸ್ ಆಯುಕ್ತರು ಆದೇಶಿಸಿದ್ದಾರೆ.

ಮಂಗಳವಾರ ತಡರಾತ್ರಿ 12.30ಕ್ಕೆ ಅರ್ಜೆಂಟೀನಾ ಹಾಗೂ ಕ್ರೊವೇಷ್ಯಾ ಮಧ್ಯೆ ಮೊದಲ ಸೆಮೀಸ್​ ನಡೆಯಲಿದ್ದು, ಬುಧವಾರ ಫ್ರಾನ್ಸ್ ಮತ್ತು ಮೊರೊಕ್ಕೋ ನಡುವೆ ಎರಡನೇ ಸೆಮಿಫೈನಲ್ ಪಂದ್ಯ ನಡೆಯಲಿದೆ.

ಕತಾರ್​ನಲ್ಲಿ ನಡೆಯುತ್ತಿರುವ 22ನೇ ಆವೃತ್ತಿಯ ಫಿಫಾ ವಿಶ್ವಕಪ್​ ಟೂರ್ನಿಯ ಸೆಮಿಫೈನಲ್ ಹಂತಕ್ಕೆ ಬಂದು ತಲುಪಿದೆ. ಒಟ್ಟು 32 ತಂಡಗೊಂದಿಗೆ ನವೆಂಬರ್ 20ರಂದು ಟೂರ್ನಿ ಆರಂಭಗೊಂಡಿದ್ದು, ಇದೀಗ ನಾಲ್ಕು ತಂಡಗಳು ಕಣದಲ್ಲಿವೆ. ಅರ್ಜೆಂಟೀನಾ-ಕ್ರೊವೇಷ್ಯಾ ಮೊದಲ ಸೆಮೀಸ್​ನಲ್ಲಿ ಎದುರಾಗಲಿದ್ದು, 2ನೇ ಸೆಮಿಫೈನಲ್​ನಲ್ಲಿ ಫ್ರಾನ್ಸ್-ಮೊರೊಕ್ಕೋ ತಂಡಗಳ ನಡುವೆ ಅಂತಿಮ ನಾಲ್ಕರ ಘಟ್ಟದಲ್ಲಿ ಪರಸ್ಪರ ಎದುರಾಗಲಿವೆ. ಸೆಮಿಫೈನಲ್​ನಲ್ಲಿ ಹೊರಬೀಳುವ ತಂಡಗಳು ಇದೇ ಶನಿವಾರ 3ನೇ ಸ್ಥಾನಕ್ಕೆ ಕಾದಾಡಲಿವೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

LEAVE A REPLY

Please enter your comment!
Please enter your name here