ಧಾರವಾಡ : ಬರಗಾಲದಿಂದ ಕರ್ನಾಟಕದ ಜಲಾಶಯ ಬರಿದಾಗಿದ್ದು, ನಮ್ಮಲ್ಲಿಯೇ ನೀರು ಇಲ್ಲ.. ಇನ್ನೂ ತಮಿಳುನಾಡಿಗೆ ಎಲ್ಲಿಂದ ನೀರು ಬಿಡಬೇಕು ಎಂದು ನವಲಗುಂದ ಶಾಸಕ ಎನ್ ಎಚ್ ಕೋನರೆಡ್ಡಿ ಹೇಳಿದರು. ನಗರದಲ್ಲಿ ಮಾದ್ಯಮದವರ ಜೋತೆ ಮಾತನಾಡಿದ ಅವರು, ಕರ್ನಾಟಕ ರಾಜ್ಯದವರು ತಾಯಿ ಹೃದಯ ಇದ್ದವರು ಯಾವಾಗ ಹೇಳ್ತಾರೋ ಆವಾಗ ನೀರು ಬಿಡಲಾಗಿದೆ. ಈಗ ಕಾವೇರಿ ತೀರದಲ್ಲಿ ನೀರು ಇಲ್ಲ. ಪ್ರಧಾನ ಮಂತ್ರಿ ನರೇಂದ್ರ ಮೋದಿ ಕಾವೇರಿ ನದಿ ತೀರಕ್ಕೆ ಭೇಟಿ ನೀಡಿ ಪರಿಶೀಲನೆ ಮಾಡಲಿ.
ಈ ಸಮಸ್ಯೆ ನಿವಾರಣೆಗೆ ಮುಂದಾಗಲಿ ಎಂದು ಆಗ್ರಹಿಸಿದರು. ಕಾವೇರಿ ನೀರು ತಮಿಳುನಾಡಿಗೆ ಯಾವುದೇ ಕಾರಣಕ್ಕೂ ಬಿಡಬಾರದು. ಮಹಾದಾಯಿ ಕಳಸಾ ಬಂಡೂರಿ ನೀರಿಲ್ಲದೇ ಕರ್ನಾಟಕ ಜನರು ಪರದಾಡುವ ಸ್ಥಿತಿ ಇದೆ. ಮಾನ್ಯ ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಏನು ಮಾಡುತ್ತಿದ್ದಾರೆ ಎಂದು ಪ್ರಶ್ನಿಸಿದ್ದರು. ಕಾವೇರಿ ವಿಚಾರದಲ್ಲಿ ಪದೇ ಪದೇ ರಾಜ್ಯಕ್ಕೆ ಅನ್ಯಾಯ ಆಗುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಮಗಳ ಮೇಲೆ ಅತ್ಯಾಚಾರಕ್ಕೆ ಕುಮ್ಮಕ್ಕು ನೀಡಿದ ತಾಯಿ..! ‘ತಾಯ್ತನಕ್ಕೆ ಕಳಂಕ’ ಎಂದ ಹೈಕೋರ್ಟ್
ನಾವು ಕರ್ನಾಟಕದವರು ಬರಿ ನೀರು ಕೊಡಲು ಇರುವಂತಾಗಿದ್ದು, ಮಹಾದಾಯಿ ಕಳಸಾ ಬಂಡೂರಿ ಯೋಜನೆ ಇಲ್ಲದೇ ಉತ್ತರ ಕರ್ನಾಟಕ ಭಾಗದಲ್ಲಿ ನೀರಿನ ಸಮಸ್ಯೆ ಎದುರಿಸುತ್ತಿದ್ದೇವೆ. ಮೇಕೆದಾಟು ಯೋಜನೆಗೆ ಅನುಮತಿ ನೀಡುತ್ತಿಲ್ಲ, ನಾವು ಮೊದಲು ಬದುಕಬೇಕು ಆಗ ಇನ್ನೊಬ್ಬರಿಗೆ ಸಹಾಯ ಮಾಡಬಹುದು ಕರ್ನಾಟಕದ ವಿಚಾರದಲ್ಲಿ ಕೇಂದ್ರ ಸರ್ಕಾರ ಮಲತಾಯಿ ಧೋರಣೆ ತೋರುತ್ತಿರುವುದು ಖಂಡನೀಯ ಎಂದು ತಿಳಿಸಿದರು.
The post NH Konreddy: ನಮ್ಮಲ್ಲಿಯೇ ನೀರು ಇಲ್ಲ… ತಮಿಳುನಾಡಿಗೆ ಎಲ್ಲಿಂದ ಬಿಡಬೇಕು: ಶಾಸಕ ಎನ್ ಎಚ್ ಕೋನರೆಡ್ಡಿ appeared first on Ain Live News.