ಬೆಂಗಳೂರು: ಮಾರ್ಚ್ 1 ರಂದು ನಡೆದಿದ್ದ ಕುಂದಲಹಳ್ಳಿಯ ರಾಮೇಶ್ವರಂ ಕೆಫೆಯಲ್ಲಿನ ಬಾಂಬ್ ಸ್ಫೋಟ ಪ್ರಕರಣದ ಪ್ರಮುಖ ಆರೋಪಿಯನ್ನು ಅರೆಸ್ಟ್ ಮಾಡಲಾಗಿದೆ. ಕೊನೆಗೂ ಶಂಕಿತ ಉಗ್ರ ಸಿಕ್ಕಿಬಿದ್ದಿದ್ದಾನೆ.
ರಾಮೇಶ್ವರಂ ಕೆಫೆ ಬಳಿ ಸ್ಫೋಟ ಮಾಡಿದ ಬಾಂಬ್ ತಯಾರಿಸಿದ್ದ ಪ್ರಮುಖ ಆರೋಪಿ ಮುಜಾಮುಲ್ ಶರೀಫ್ ಎಂಬಾತನೇ ಬಂದಿತ. ಎನ್‌ಐಎ (NIA) ಅಧಿಕಾರಿಗಳು ಇಂದು ಆರೋಪಿಯನ್ನು ಬಂಧಿಸಿದ್ದು ವಿಚಾರಣೆ ನಡೆಸುತ್ತಿದ್ದಾರೆ. ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್‌ಐಎ) ಮೂರು ರಾಜ್ಯಗಳ ಹಲವು ಸ್ಥಳಗಳಲ್ಲಿ ದಾಳಿ ನಡೆಸಲಾಗಿದೆ. ಅನಂತರ ಪ್ರಮುಖ ಸಂಚುಕೋರನನ್ನು ಬಂಧಿಸಿದ್ದಾರೆ. ಈ ಬಗ್ಗೆ ಎನ್‌ಐಎ ಅಧಿಕೃತವಾಗಿ ಟ್ವೀಟ್ ಮಾಡಿ ಮಾಹಿತಿ ಹಂಚಿಕೊಂಡಿದೆ.
NIA Arrests 1 in Rameshwaram Cafe Blast Conspiracy After Massive Multi-State Raids pic.twitter.com/QI4ZpvBpQV
— NIA India (@NIA_India) March 28, 2024
ಕರ್ನಾಟಕದ 12, ತಮಿಳುನಾಡಿನ 5 ಮತ್ತು ಉತ್ತರ ಪ್ರದೇಶದ 1 ಸೇರಿದಂತೆ 18 ಸ್ಥಳಗಳಲ್ಲಿ ಎನ್‌ಐಎ ದಾಳಿ ಮಾಡಿ ಪರಿಶೀಲನೆ ಮಾಡಿತ್ತು. ಈ ವೇಳೆ ಬಾಮಬ್ ತಯಾರಿಸಿದ ಪ್ರಮುಖ ಆರೋಪಿ ಸಿಕ್ಕಿಬಿದ್ದಿದ್ದಾನೆ.. ರಾಮೇಶ್ವರಂ ಕೆಫೆ ಪ್ರಕರಣದಲ್ಲಿ ಇಬ್ಬರು ಪ್ರಮುಖ ಆರೋಪಿಗಳಿಗೆ ಮುಜಾಮಿಲ್ ಶರೀಫ್ ಕೀ ಕಾಂನ್ಸಪರೇಟರ್ ಆಗಿದ್ದ ಎಂದು ಗೊತ್ತಾಗಿದೆ.. ಬಂಧಿತನ ಬಳಿ ಇದ್ದ ವಿವಿಧ ಸಾಧನಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಎನ್‌ಐಎ ಮಾಹಿತಿ ನೀಡಿದೆ.
ಕೀ ಕಾಂನ್ಸಪರೇಟರ್ ಆಗಿದ್ದ ಆರೋಪಿ ಮುಜಾಮಿಲ್ ಶರೀಫ್, ರಾಮೇಶ್ವರಂ ಕೆಫ್ ಬ್ಲಾಸ್ಟ್ ಆದ ಬಾಂಬ್ ತಯಾರಿಕೆಯ ಪ್ರಮುಖ ಆರೋಪಿ ಎಂಬುದು ಖಚಿತವಾಗಿದೆ. ಅಲ್ಲದೇ ಮುಸಾವೀರ್ ಹುಸೇನ್ಗೆ ತುಂಬಾ ಆಪ್ತನಾಗಿದ್ದ ಎಂದು ತಿಳಿದುಬಂದಿದೆ.