ಬೆಂಗಳೂರು:
ಕೆ.ಜಿ.ಹಳ್ಳಿ ಗಲಭೆ ಪ್ರಕರಣದ ಪ್ರಮುಖ ಆರೋಪಿ ಸೈಯದ್ ಅಬ್ಬಾಸ್‌ನನ್ನು (38) ರಾಷ್ಟ್ರೀಯ ತನಿಖಾ ದಳದ (ಎನ್‌ಐಎ) ಅಧಿಕಾರಿಗಳು ಬುಧವಾರ ಬಂಧಿಸಿದ್ದಾರೆ.
ಅಬ್ಬಾಸ್ ಸೋಷಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾದ (ಎಸ್‌ಡಿಪಿಐ) ನಾಗವಾರ ವಿಭಾಗದ ಅಧ್ಯಕ್ಷ. ಈಗಾಗಲೇ ಪ್ರಕರಣದಲ್ಲಿ ಚಾರ್ಚ್‌ಶೀಟ್‌ನಲ್ಲಿರುವ ಆರೋಪಿಗಳೂ ಎಸ್‌ಡಿಪಿಐ ಘಟಕದ ಪದಾಧಿಕಾರಿಗಳು ಎಂದು ತನಿಖೆ ವೇಳೆ ತಿಳಿದುಬಂದಿದೆ.
NIA arrests a key conspirator in K G Halli riot case of Bangalore pic.twitter.com/fjkD58qnC2
— NIA India (@NIA_India) June 30, 2021
ಗೋವಿಂದಪುರ ನಿವಾಸಿಯಾಗಿರುವ ಅಬ್ಬಾಸ್, ಆಗಸ್ಟ್ 11ರಂದು ಕೆ.ಜಿ.ಹಳ್ಳಿಯಲ್ಲಿ ನಡೆದಿದ್ದ ಗಲಭೆಯಲ್ಲಿ ಭಾಗಿಯಾಗಿದ್ದ. ಈ ಸಂಬಂಧ ಅಬ್ಬಾಸ್ ವಿರುದ್ಧ ಕೆ.ಜಿ.ಹಳ್ಳಿ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
ಇವರೆಲ್ಲರೂ ಗಲಭೆ ವೇಳೆ ಕೆ.ಜಿ.ಹಳ್ಳಿ ಠಾಣೆಯ ಬಳಿ ಇದ್ದ ವಾಹನಗಳಿಗೆ ಬೆಂಕಿ ಇಟ್ಟಿದ್ದು, ಪೊಲೀಸರ ಮೇಲೆ ದಾಳಿಯೂ ನಡೆಸಿದ್ದರು.
ಆರೋಪಿ ಅಬ್ಬಾಸ್‌ನನ್ನು ಬೆಂಗಳೂರಿನಲ್ಲಿರುವ ಎನ್‌ಐಎ ವಿಶೇಷ ನ್ಯಾಯಾಲಯದ ಎದುರು ಹಾಜರುಪಡಿಸಲಾಗಿದ್ದು, ಆರು ದಿನಗಳ ಕಾಲ ಕಸ್ಟಡಿಗೆ ತೆಗೆದುಕೊಳ್ಳಲಾಗಿದೆ ಎಂದು ಎನ್‌ಐಎ ಪ್ರಕಟಣೆಯಲ್ಲಿ ತಿಳಿಸಿದೆ.