ಬೆಂಗಳೂರು:
ಬಿಜೆಪಿ ಯುವಮೋರ್ಚಾ ಸದಸ್ಯ ಪ್ರವೀಣ್ ನೆಟ್ಟಾರು ಹತ್ಯೆ ಪ್ರಕರಣದಲ್ಲಿ ಮತ್ತಿಬ್ಬರು ಆರೋಪಿಗಳ ವಿರುದ್ಧ ಎನ್ ಐಎ ಆರೋಪಪಟ್ಟಿ ಸಲ್ಲಿಸಿದೆ.
2022ರ ಜುಲೈ 26ರಂದು ಈಗ ನಿಷೇಧಗೊಂಡಿರುವ ಪಾಪ್ಯುಲರ್ ಫ್ರಂಟ್ ನ ಭಾರತ(ಪಿಎಫ್‌ಐ) ಕಾರ್ಯಕರ್ತರಿಂದ ಪ್ರವೀಣ್ ನೆಟ್ಟಾರು ಬೆಳ್ಳಾರೆಯಲ್ಲಿ ಅವರ ಅಂಗಡಿಯ ಮುಂದೆ ಹತ್ಯೆಗೀಡಾಗಿದ್ದರು.
NIA FILES SUPPLEMENTARY CHARGESHEET AGAINST 2 IN KARNATAKA’S PRAVEEN NETTARU MURDER CASE pic.twitter.com/z8HFHEdypa
— NIA India (@NIA_India) May 4, 2023
ಭಾರತೀಯ ದಂಡ ಸಂಹಿತೆಯ (IPC) ವಿವಿಧ ಸೆಕ್ಷನ್‌ಗಳ ಅಡಿಯಲ್ಲಿ ತುಫೈಲ್ ಎಂಎಚ್ ಮತ್ತು ಮಹಮ್ಮದ್ ಜಬೀರ್ ಸೇರಿದಂತೆ ಇತರ ಆರೋಪಿಗಳ ವಿರುದ್ಧ ಆರೋಪ ಹೊರಿಸಲಾಗಿದೆ. ಯುಎಪಿಎ ಕಾಯ್ದೆಯಡಿ ಒಟ್ಟು ಈ ಪ್ರಕರಣದಲ್ಲಿ 21 ಆರೋಪಿಗಳ ವಿರುದ್ಧ ದೋಷಾರೋಪ ಪಟ್ಟಿ ಸಲ್ಲಿಸಲಾಗಿದೆ ಎಂದು ಅಧಿಕೃತ ಪ್ರಕಟಣೆಯಲ್ಲಿ ಎನ್‌ಐಎ ತಿಳಿಸಿದೆ. ಕೊಲೆ ನಂತರ ತಲೆಮರೆಸಿಕೊಂಡಿದ್ದ ತುಫೈಲ್ ನನ್ನು ಎನ್‌ಐಎ ತಂಡ ಬೆಂಗಳೂರಿನಲ್ಲಿ ಪತ್ತೆ ಹಚ್ಚಿ ಬಂಧಿಸಿತ್ತು.
ಜನವರಿ 20ರಂದು ಎನ್‌ಐಎ ಆರಂಭಿಕ ಆರೋಪಪಟ್ಟಿ ಸಲ್ಲಿಸಿತ್ತು. ಪಿಎಫ್ಐ ರಹಸ್ಯ ‘ಹಿಟ್ ಸ್ಕ್ವಾಡ್’ ಅನ್ನು ರಚಿಸಿದೆ ಎಂದು ಸಂಸ್ಥೆ ಹೇಳಿತ್ತು. ಈ ಸ್ಕ್ವಾಡ್ ಗಳ ಮೂಲಕ ತಮ್ಮ ವೈರಿಗಳ ಹತ್ಯೆ ಮಾಡಲು ಬಳಸುತ್ತಿತ್ತು ಎಂದು ಆತಂಕ ವ್ಯಕ್ತಪಡಿಸಿತ್ತು.